More

    ಜಸ್ಟ್​ ಎಸ್ಕೇಪ್​: ಭಯಾನಕ ಆಪತ್ತಿನಿಂದ ಬದುಕುಳಿದ ಪತಿರಾಯ- ಇಲ್ಲದಿದ್ದರೆ ಹರೋಹರ!

    ಇದೀಗ ವೈರಲ್​ ವಿಡಿಯೋಗಳ ಸುಗ್ಗಿ. ಹುಟ್ಟಿನಿಂದ ಹಿಡಿದು ಸಾಯುವವರೆಗಿನ ದೃಶ್ಯಗಳೆಲ್ಲವೂ ವಿಡಿಯೋದಲ್ಲಿಯೇ ಸಿಗುವ ಕಾಲ ಇದಾಗಿದೆ. ಅಪಘಾತ ಸಂಭವಿಸಲಿ, ಹಿಂಸಾಚಾರವೇ ಆಗಲಿ ಇಲ್ಲವೇ ಖುಷಿಯ ಕ್ಷಣಗಳೇ ಆಗಲಿ ಸ್ಮಾರ್ಟ್​ಫೋನ್​ ಆನ್​ ಮಾಡಿ ವಿಡಿಯೋ ಮಾಡುವುದು ಎಂದರೆ ಹಲವರಿಗೆ ಎಲ್ಲಿಲ್ಲದ ಖುಷಿ.

    ಇಂಥ ಕೆಲವು ವಿಡಿಯೋಗಳು ಭಯಾನಕವಾಗಿದ್ದು, ಕೆಲವು ಎಂಥ ನೋವಿನ ಕ್ಷಣಗಳಲ್ಲಿಯೂ ನಗುವನ್ನು ಉಕ್ಕಿಸುತ್ತವೆ. ಅಂಥ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಶೇರ್​ ಆಗುತ್ತವೆ, ಅಂಥದ್ದೇ ಒಂದು ಹಾಸ್ಯಭರಿತ ವಿಡಿಯೋ ಇದೀಗ ವೈರಲ್​ ಆಗಿದ್ದು, ನಗು ಉಕ್ಕಿಸುವಂತಿದೆ.

    ಈ ವಿಡಿಯೋದಲ್ಲಿ ಕೆಲವರು ಕಂಠಪೂರ್ತಿ ಕುಡಿದು ಕೆಲವು ಪುರುಷರು ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ, ಇನ್ನು ಕೆಲವರು ಅವರ ಜತೆ ತಾವೂ ಕುಣಿಯುತ್ತಿದ್ದಾರೆ. ಈ ವಿಷಯ ಅಲ್ಲಿರುವ ಒಬ್ಬಾತನ ಪತ್ನಿಗೆ ತಿಳಿಯುತ್ತದೆ. ಸ್ಥಳಕ್ಕೆ ಬಡಿಗೆಯೊಂದಿಗೆ ಬರುತ್ತಾರೆ ಆ ಪತ್ನಿ.

    ಪತ್ನಿ ಬರುತ್ತಿರುವುದನ್ನು ದೂರದಿಂದಲೇ ನೋಡಿದ ಪತಿರಾಯ ಅಲ್ಲಿಂದ ಕಾಲುಕೀಳುತ್ತಾನೆ. ಇದು ನಿಜವಾಗಿ ನಡೆದಿರುವ ಘಟನೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪತಿರಾಯ ಜಸ್ಟ್​ ಮಿಸ್​, ಇಲ್ಲದಿದ್ದರೆ ಆಗುತ್ತಿತ್ತು ಭಯಾನಕ ಅನಾಹುತ ಎಂಬ ಶೀರ್ಷಿಕೆಯೊಂದಿಗೆ ಇದನ್ನು ಶೇರ್​ ಮಾಡಲಾಗುತ್ತಿದೆ.

    ನೀವು ಈ ವಿಡಿಯೋ ಇಲ್ಲಿ ನೋಡಿ ಎನ್​ಜಾಯ್​ ಮಾಡಿ…

    VIDEO: ಯುವಕರೇ ಹುಷಾರ್​! ಈಗಲೇ ಡಾನ್ಸ್​ ಕಲಿತುಬಿಡಿ- ಇಲ್ಲದಿದ್ದರೆ ಕಾದಿದೆ ಅಪಾಯ

    ಕರೊನಾ ಲಸಿಕೆ ಚುಚ್ಚಿಕೊಳ್ಳೋ ಬದಲು ಇಲ್ಲಿ ಜನ ತಿಂತಾರಂತೆ! ವಿಡಿಯೋ ನೋಡಿ…

    ನನ್ನದು ಒಂಥರಾ ವಿಚಿತ್ರ ಕೇಸ್​ ಮೇಡಂ… ಎಲ್ಲರೂ ಒಳ್ಳೆಯವರು, ಆದರೆ ನನಗೇ ಸೊಕ್ಕು ಜಾಸ್ತಿ ಅನಿಸತ್ತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts