ದಲಿತನ ಮದ್ವೆಯಾದೆನೆಂದು ತಂದೆಯೇ ಅರೆನಗ್ನಗೊಳಿಸಿದರು... ಕರಾಳ ಘಟನೆ ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ...

lady
Published on

ಭೋಪಾಲ್: ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ಲೆಕ್ಕವೇ ಇಲ್ಲದಂತಾಗಿದೆ. ಧರ್ಮ ಧರ್ಮಗಳ ನಡುವೆ ಒಂದೆಡೆ ಹೊಡೆದಾಟ, ಬಡಿದಾಟ ನಡೆಯುತ್ತಿದ್ದರೆ, ಅದೇ ಇನ್ನೊಂದೆಡೆ ಒಂದೇ ಧರ್ಮದ ಒಳಗಿರುವ ಜಾತಿಯ ಹೆಸರಿನಲ್ಲಿ ಹೆತ್ತವರೇ ನಡೆಸುತ್ತಿರುವ ಅಮಾನವೀಯ ಕೃತ್ಯಗಳು ಇನ್ನೊಂದೆಡೆ.

ಅಂಥದ್ದೇ ಒಂದು ಭಯಾನಕ, ಕರಾಳ ಘಟನೆಯನ್ನು ಮಧ್ಯಪ್ರದೇಶದ ಭೋಪಾಲ್‌ನ ಛೋಪ್ನಾ ಗ್ರಾಮದ ಯುವತಿಯೊಬ್ಬಳು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ತಪ್ಪಿಗೆ ತಂದೆಯೇ ಮಾಡಿರುವ ಅಮಾನುಷ ಘಟನೆಗಳ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ತಮಗಿಬ್ಬರಿಗೂ ಹೆತ್ತವರಿಂದ ರಕ್ಷಣೆ ಕೋರಿ ಆಕೆ ದೂರಿನಲ್ಲಿ ವಿವರಿಸಿದ್ದಾಳೆ.

ಮರ್ಯಾದಾ ಹತ್ಯೆಯಾಗುವ ಸಾಧ್ಯತೆ ಇದ್ದು, ತಂದೆ ಮತ್ತು ಕುಟುಂಬಸ್ಥರಿಂದ ಇಬ್ಬರಿಗೂ ಜೀವ ಭಯವಿದೆ ಎಂದು ಯುವತಿ ಪೊಲೀಸರ ಮುಂದೆ ಅಳಲು ತೋಡಿಕೊಮಡಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ.

ಏನಿದು ಘಟನೆ?

ಭೋಪಾಲ್‌ನ ಛೋಪ್ನಾ ಗ್ರಾಮದ ಯುವತಿ, ಬೈತೂಲ್ ಪಟ್ಟಣದ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಕಳೆದ ವರ್ಷ ಮಾರ್ಚ್‌ 11 ರಂದು ಇವರ ಮದುವೆ ನಡೆದಿದೆ. ಈ ವಿಷಯ ತಿಳಿಯುತ್ತಲೇ ಯುವತಿಯ ತಂದೆ ಆಕೆಗಾಗಿ ಹುಡುಕಾಟ ನಡೆಸಿ ಪೊಲೀಸರನ್ನು ಕರೆತಂದು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ ನಂತರ ಹಾಸ್ಟೆಲ್‌ನಲ್ಲಿ ಇರಿಸಿದ್ದರು. ಆದರೆ ಯುವತಿ ಅಕ್ಟೋಬರ್ 28ರಂದು ಅಲ್ಲಿಂದ ತಪ್ಪಿಸಿಕೊಂಡು ಪುನಃ ಪತಿ ಮನೆಗೆ ಹೋದಳು.

ಈ ನಡುವೆಯೇ ಮೂರು ಬಾರಿ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ದಾಖಲು ಮಾಡಿದ ತಂದೆ, ಪೊಲೀಸರ ಜತೆಗೆ ಆಕೆಯ ಪತಿಯ ಮನೆಗೆ ಬಂದಿದ್ದಾರೆ. ಪೊಲೀಸರು ಅದ್ಯಾವುದೋ ದಾಖಲೆಗಳಿಗೆ ಬಲವಂತದಿಂದ ಯುವತಿಯಿಂದ ಸಹಿ ಹಾಕಿಸಿಕೊಂಡಿದ್ದಾರೆ. ‘ಪತಿಯ ಮನೆಗೆ ವಾಪಸ್‌ ಹೋದ ಮೇಲೆ ಮತ್ತೆ ನನ್ನ ತಂದೆ ಮನೆಗೆ ಬಂದು ನನ್ನನ್ನು ಎಳೆದುಕೊಂಡು ಹೋದರು. ನರ್ಮದಾ ನದಿಗೆ ಕರೆದುಕೊಂಡು ಹೋಗಿ, ಅರೆಬೆತ್ತಲೆ ಮಾಡಿದರು. ಅಲ್ಲಿ ನಾಲ್ಕು ಮಂದಿ ಇದ್ದರು. ನನಗೆ ಹಿಂಸೆ ತಾಳಲು ಆಗುತ್ತಿರಲಿಲ್ಲ. ಆದರೂ ಬಲವಂತದಿಂದ ಅರೆನಗ್ನಗೊಳಿಸಿದರು. ಏಕೆ ಹೀಗೆ ಮಾಡುತ್ತಿದ್ದಿ ಎಂದು ಕೇಳಿದ್ದಕ್ಕೆ ದಲಿತನನ್ನು ಮದುವೆಯಾಗಿರುವುದಕ್ಕೆ ಇದು ಶುದ್ಧೀಕರಣ ಮಾಡು್ತಿರುವುದು ಎಂದರು. ನಂತರ ನದಿಯಲ್ಲಿ ಮುಳುಗಿಸಿದರು, ಕೂದಲು ಕತ್ತರಿಸಿದರು. ಬಟ್ಟೆಯನ್ನು ಅಲ್ಲೇ ಎಸೆಯಲು ಹೇಳಿದರು. ಅವರು ಹೊಸ ಬಟ್ಟೆ ತಂದಿದ್ದರು, ಸಾಲದು ಎನ್ನುವುದಕ್ಕೆ ಎಂಜಲು ಊಟ ತಿನ್ನಿಸಿದರು... ಎಂದು ಭಯಾನಕ ಘಟನೆ ವಿವರಿಸಿದ್ದಾಳೆ ಯುವತಿ.

ಇದಾದ ಬಳಿಕ ನೀನು ಶುದ್ಧಿಯಾಗಿರುವಿ, ಈಗ ಹೋಗಿ ಗಂಡನಿಗೆ ವಿಚ್ಛೇದನ ಕೊಡು ಎಂದು ಒತ್ತಾಯ ಮಾಡುತ್ತಿದ್ದಾರೆ. ನಮ್ಮದೇ ಜಾತಿಯ ಹುಡುಗನೊಟ್ಟಿಗೆ ಮದುವೆ ಮಾಡುವುದಾಗಿ ಹೇಳಿದ್ದಾರೆ. ಒಂದು ವೇಳೆ ಮಾತು ಕೇಳದಿದ್ದರೆ ನಿನ್ನ ಗಂಡನನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ಹೇಳಿರುವ ಯುವತಿ, ಇಬ್ಬರ ರಕ್ಷಣೆಗೆ ಪೊಲೀಸರ ಮೊರೆ ಹೋಗಿದ್ದಾಳೆ, ಜತೆಗೆ ತನ್ನ ರಕ್ಷಣೆಗಾಗಿ ಮಾಧ್ಯಮಗಳ ಮುಂದೆಯೂ ಬಂದು ನಡೆದ ಘಟನೆ ವಿವರಿಸಿದ್ದಾಳೆ.

ಜೊತೆ ಮದುವೆ ಮಾಡೋದಾಗಿ ತಂದೆ ಹೇಳುತ್ತಿದ್ದರು. ನನ್ನ ಕುಟುಂಬಸ್ಥರು ಅಮಿತ್ ನನ್ನು ಕೊಲೆ ಮಾಡುವ ಅನುಮಾನ ಬಂದ ಹಿನ್ನೆಲೆ ಆತನ ಮನೆಗೆ ಬಂದಿದ್ದೇನೆ ಎಂದು ಯುವತಿ ಹೇಳಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net