More

    ಹಲವು ದಶಕ ನಿರಾತಂಕವಾಗಿದ್ದ ಕುಖ್ಯಾತ ಹವಾಲಾ ಡೀಲರ್ ಅರೆಸ್ಟ್‌: ಆರು ದೇಶಗಳ ಮೋಸ್ಟ್‌ ವಾಂಟೆಡ್‌ ಈತ!

    ನವದೆಹಲಿ: ಹಲವಾರು ದಶಕಗಳ ಕಾಲ ನಿರಾತಂಕವಾಗಿ ಹವಾಲಾ ದಂಧೆಯನ್ನು ಮುಂದುವರೆಸಿಕೊಂಡು ಬಂದಿದ್ದ ಕುಖ್ಯಾತ ಹವಾಲಾ ಡೀಲರ್‌ ನರೇಶ್‌ ಜೈನ್‌ ಇದೀಗ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಕೆಲವು ವರ್ಷಗಳಿಂದ ಇಂಥ ಕುತಂತ್ರಿಗಳ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿರುವ ಹಿನ್ನೆಲೆಯಲ್ಲಿ, ಒಂದೊಂದೇ ಇಂಥ ಕ್ರಿಮಿಗಳು ಬಲೆಗೆ ಬೀಳುತ್ತಿವೆ. ‌ಕೆಲ ವರ್ಷಗಳಿಂದ ಇಂಥವರ ಮೇಲೆ ಕಣ್ಣಿಟ್ಟಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಒಂದೊಂದೇ ಹಗರಣವನ್ನು ಬಯಲು ಮಾಡುತ್ತಿದ್ದಾರೆ.

    ದೆಹಲಿ ಮೂಲದ ಉದ್ಯಮಿ ಮತ್ತು ಹವಾಲ ಡೀಲರ್ ಆಗಿದ್ದ ಈತನ ಮೇಲೆ 2016ರಿಂದಲೂ ತನಿಖಾ ಸಂಸ್ಥೆಗಳು ನಿಗಾ ಇಟ್ಟಿದ್ದವು. 1,200 ಕೋಟಿ ರೂ.ಗಳ ಮೊತ್ತದ ವಂಚನೆ ಸಂಬಂಧ ವಿದೇಶಿ ವಿನಿಮಯ ಕಾನೂನು (ಪೋರೆಕ್ಸ್ ಲಾ) ಅಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಾಲ್ಕು ವರ್ಷಗಳ ಹಿಂದೆಯೇ ನೋಟಿಸ್ ಜಾರಿಗೊಳಿಸಿ ತನಿಖೆ ನಡೆಸುತ್ತಿದ್ದರು.

    ಅಚ್ಚರಿಯ ಸಂಗತಿ ಎಂದರೆ, ನರೇಶ್‌ ಜೈನ್‌ ಭಾರತ ಮಾತ್ರವಲ್ಲದೇ ಇತರ ಆರು ದೇಶಗಳಲ್ಲಿ ಹವಾಲಾ ಡೀಲರ್‌ ಆಗಿದ್ದು, ಅಲ್ಲಿಯೂ ಮೋಸ್ಟ್‌ ವಾಂಟೆಡ್‌ ಆಗಿದ್ದಾನೆ.

    ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪ್ರಕರಣ: ಆದಿತ್ಯರಾವ್‌ಗೆ ಇಂದು ಮಂಪರು ಪರೀಕ್ಷೆ?

    ಬ್ಯಾಂಕ್ ಮೊದಲಾದ ಕಾನೂನಾತ್ಮಕ ಮಾರ್ಗಗಳ ಬದಲು ವೈಯಕ್ತಿಕ ನೆಟ್‌ವರ್ಕ್‌ ಮೂಲಕ ಹಣದ ಬದಲಾವಣೆ ಮಾಡುತ್ತಿದ್ದ (ಹವಾಲಾ ದಂಧೆ) ಈತ ಅತಿದೊಡ್ಡ ಅಕ್ರಮ ಹಣ ವರ್ಗಾವಣೆಯ ವ್ಯವಸ್ಥಿತ ಜಾಲವನ್ನು ರೂಪಿಸಿರುವುದು ಬೆಳಕಿಗೆ ಬಂದಿದೆ. ಈತ ಅನೇಕ ನಕಲಿ ಮತ್ತು ಬೇನಾಮಿ ಕಂಪನಿಗಳನ್ನು ತೆರೆದು ಬಹುಕೋಟಿ ರೂ.ಗಳ ಮೌಲ್ಯದ ಹಣವನ್ನುಅಕ್ರಮವಾಗಿ ವರ್ಗಾವಣೆ ಮಾಡಿದ್ದಾನೆ.

    ಈತ 20 ಸಾವಿರ ಕೋಟಿ ರೂಪಾಯಿ ಮೌಲ್ಯದ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ನರೇಶ್ ಮತ್ತು ಆತನ ಸಹಚರರು ನರೇಶ್‍ಜೈನ್ ಮತ್ತು ಆತನ ಸಹಚರರು ಸಾಗರೋತ್ತರ ಹವಾಲಾ ವಹಿವಾಟುಗಳಲ್ಲಿ ಸಕ್ರಿಯವಾಗಿದ್ದಾರೆ. 20 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಕ್ರಮ ಹಣ ವರ್ಗಾವಣೆ ಮತ್ತು ವ್ಯವಸ್ಥಿತ ಹವಾಲ ದಂಧೆಯಲ್ಲಿ ತೊಡಗಿದ್ದರು. ನರೇಶ್‌ ಜೈನ್‌ ವ್ಯವಸ್ಥಿತ ಹವಾಲಾ ದಂಧೆಗಾಗಿ 600ಕ್ಕೂ ಅಧಿಕ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಈ ಎಲ್ಲ ಅಕ್ರಮ ವಹಿವಾಟುಗಳ ಬಗ್ಗೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ ಎಂಬುದಾಗಿ ಇಡಿ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಈತನ ವಿರುದ್ಧ ಅಕ್ರಮ ಹಣ ವರ್ಗಾವಣೆತಡೆಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಏಷ್ಯಾ ಮತ್ತು ಮಧ್ಯ ಪ್ರಾಚ್ಯದ ಕೆಲವು ದೇಶಗಳಲ್ಲಿ ಈತನ ಹವಾಲಾ ದಂಧೆ ವಿಸ್ತಾರಗೊಂಡಿರುವುದು ಬೆಳಕಿಗೆ ಬಂದಿದ್ದು, ತನಿಖೆ ಚುರುಕುಗೊಂಡಿದೆ.

    ಹುಲಿಯಾದ ನಾಯಿ- ಬೇಸ್ತುಬಿದ್ದ ಜನ: ಕುಕೃತ್ಯ ಎಸಗಿದವರ ಹುಡುಕಿಕೊಟ್ಟರೆ ಸೂಕ್ತ ಬಹುಮಾನ

    ಕರೊನಾ ನಿರ್ವಹಣೆ: ವಿಶ್ವದ ಅತ್ಯುನ್ನತ ಚಿಂತಕಿ ಪಟ್ಟಿಯಲ್ಲಿ ಕೇರಳದ ಆರೋಗ್ಯ ಸಚಿವೆ

    ಲಡಾಖ್‌ ಗಡಿಯಲ್ಲಿ ಚೀನಾ ಕಿತಾಪತಿ: ಲೇಹ್‌ಗೆ ಸೇನಾ ಮುಖ್ಯಸ್ಥರ ಭೇಟಿ

    ಕರೊನಾ: ಎರಡು ತಿಂಗಳಲ್ಲಿ ಇಬ್ಬರು ಸಹೋದರರನ್ನು ಕಳೆದುಕೊಂಡ ನಟ ದಿಲೀಪ್‌ಕುಮಾರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts