More

    ಹಾಥರಸ್​ ಘಟನೆ: ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿ ಡಿಲೀಟ್​​- ವೈದ್ಯರ ಮೇಲೆ ಸಿಬಿಐ ಅನುಮಾನ!

    ಲಖನೌ: ಉತ್ತರ ಪ್ರದೇಶದ ಹಾಥರಸ್​ನಲ್ಲಿ 19 ವರ್ಷದ ಯುವತಿಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣವು ನಿಗೂಢವಾಗುತ್ತಲೇ ಸಾಗಿದೆ. ಮೇಲ್ನೋಟಕ್ಕೆ ಕಾಣಿಸುವಷ್ಟು ಈ ಪ್ರಕರಣದ ಸತ್ಯಾಂಶವಿಲ್ಲ ಎನ್ನುವುದು ಸಾಬೀತಾಗುತ್ತಲೇ ಹೋಗಿದೆ.

    ಈ ಘಟನೆಯ ಪ್ರಮುಖ ಸಾಕ್ಷ್ಯಗಳಲ್ಲಿ ಒಂದಾಗಿರುವುದು ಆ ಯುವತಿಯನ್ನು ಆಸ್ಪತ್ರೆಗೆ ಸೇರಿಸಿದ್ದ ದಿನ ಆಕೆ ಯಾವ ಸ್ಥಿತಿಯಲ್ಲಿ ಇದ್ದಳು ಎಂಬುದು. ಇದರಿಂದ ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಒಂದಿಷ್ಟು ಸಾಕ್ಷ್ಯಾಧಾರಗಳು ಸಿಗುತ್ತಿತ್ತು.

    ಆದರೆ ವಿಚಿತ್ರ ಎಂದರೆ, ಆ ದಿನದ ಅಂದರೆ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದ ಸೆಪ್ಟಂಬರ್ 14ರ ಸಿಸಿಟಿವಿ ಫುಟೇಜ್​ ತಮ್ಮ ಬಳಿ ಇಲ್ಲ ಎಂದು ಆಸ್ಪತ್ರೆ ಹೇಳಿದೆ. ಸಾಮಾನ್ಯವಾಗಿ ಒಂದು ತಿಂಗಳ ಫುಟೇಜ್​ಗಳು ಸಿಸಿಟಿವಿಯ ಬ್ಯಾಕಪ್​ನಲ್ಲಿ ಇರುವುದಿಲ್ಲ. ಆದರೆ ಇದು ಅತ್ಯಂತ ಮಹತ್ವದ ಸಾಕ್ಷ್ಯವಾಗಿದ್ದರೂ, ಅದನ್ನು ವೈದ್ಯರು ರಕ್ಷಿಸಿ ಏಕೆ ಇಟ್ಟುಕೊಂಡಿಲ್ಲ ಎನ್ನುವುದು ಇದೀಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

    ಈ ಹಿನ್ನೆಲೆಯಲ್ಲಿ ಘಟನೆಯ ಸಾಕ್ಷ್ಯಗಳನ್ನು ಸಂಗ್ರಹಿಸಲು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಿಬಿಐ ತಂಡ ಯಾವುದೇ ಸಾಕ್ಷ್ಯಗಳಿಲ್ಲದೇ ವಾಪಾಸಾಗಬೇಕಾಗಿದೆ.

    ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸುವಾಗ ಅವರೊಂದಿಗೆ ಯಾರು ಇದ್ದರು? ಯಾವ ವೈದ್ಯರು ಚಿಕಿತ್ಸೆ ನೀಡಿದರು? ಸಂತ್ರಸ್ತೆ ಆಸ್ಪತ್ರೆಯಲ್ಲಿ ಎಷ್ಟು ದಿನ ಇದ್ದರು? ಅವರನ್ನು ಭೇಟಿಯಾಗಲು ಯಾರು ಬಂದಿದ್ದರು? ಸಂತ್ರಸ್ತೆ ಎಷ್ಟು ಜನರೊಂದಿಗೆ ಮಾತನಾಡಿದ್ದಾರೆ? ಇವ್ಯಾವುದಕ್ಕೂ ಈಗ ಸಿಸಿಟಿವಿಯ ಸಾಕ್ಷ್ಯಗಳು ಇಲ್ಲದ ಕಾರಣ, ವೈದ್ಯರು ಏನು ಹೇಳುತ್ತಾರೋ ಅವರ ಹೇಳಿಕೆಯನ್ನಷ್ಟೇ ಪಡೆದುಕೊಂಡು ಸಿಬಿಐ ಅಧಿಕಾರಿಗಳು ವಾಪಸಾಗಿದ್ದಾರೆ.

    ವೈದ್ಯರು ಯಾರ ಪರವಾಗಿ ಈ ರೀತಿ ಮಾಡುತ್ತಿದ್ದಾರೆ ಎಂಬ ಅನುಮಾನಗಳ ಹುತ್ತ ಸಿಬಿಐ ಅಧಿಕಾರಿಗಳನ್ನೂ ಸುತ್ತಿಕೊಂಡಿದೆ. ಈ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಕೇಳಿದಾಗ, ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಕರೆತಂದಾಗ ಜಿಲ್ಲಾಡಳಿತ ಮತ್ತು ಪೊಲೀಸರು ಅವುಗಳ ದೃಶ್ಯಗಳನ್ನು ಚಿತ್ರೀಕರಿಸಬೇಕಿತ್ತು. ಅವರು ಚಿತ್ರೀಕರಿಸಿಲ್ಲ ಎಂದು ವಾದಿಸಿದೆ. ಆದರೆ ಇದು ಅತ್ಯಂತ ಮಹತ್ವದ ಸಾಕ್ಷ್ಯವಾಗಿದ್ದರೂ ಅದನ್ನು ಏಕೆ ಸೇವ್​ ಮಾಡಿ ಇಟ್ಟುಕೊಂಡಿಲ್ಲ ಎಂಬ ಬಗ್ಗೆ ಆಡಳಿತ ಮಂಡಳಿಯ ಬಗ್ಗೆ ಉತ್ತರವಿಲ್ಲ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರು ಮತ್ತು ವೈದ್ಯರನ್ನು ಸಿಬಿಐ ತರಾಟೆಗೆ ತೆಗೆದುಕೊಂಡಿದೆ.

    ಇದನ್ನೂ ಓದಿ: ಹಾಥರಸ್​ ಪ್ರಕರಣ: ಗ್ರಾಮದ ಮುಖಂಡನಿಂದ ಸ್ಫೋಟಕ ಮಾಹಿತಿ!

    ಸೆಪ್ಟೆಂಬರ್ 14 ರಂದು, ಹತ್ರಾಸ್ ಜಿಲ್ಲೆಯ ಬುಲ್ಗಧಿ ಗ್ರಾಮದಲ್ಲಿ 19 ವರ್ಷದ ಯುವತಿಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರದ ಪ್ರಕರಣವಿದು. ಸೆಪ್ಟೆಂಬರ್ 29ರಂದು ಆಸ್ಪತ್ರೆಯಲ್ಲಿ ಸಂತ್ರಸ್ತೆ ಸಾವನ್ನಪ್ಪಿದ್ದಾಳೆ.

    ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಇದು ಅತ್ಯಾಚಾರ ಹೌದೋ, ಅಲ್ಲವೋ ಎನ್ನುವುದೇ ಇನ್ನೂ ಅಂತಿಮವಾಗಿ ತೀರ್ಮಾನವಾಗದಷ್ಟು ಪ್ರಕರಣ ಜಟಿಲವಾಗಿದೆ. ಸದ್ಯ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅದೇ ಇನ್ನೊಂದೆಡೆ, ಪೊಲೀಸರು ರಾತ್ರೋರಾತ್ರಿ ಸಂತ್ರಸ್ತೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

    ನಮ್ಮ ಕ್ಯಾಮೆರಾಗಳು ಉತ್ತಮವಾಗಿವೆ. ಆದರೆ ಅವುಗಳ ಬ್ಯಾಕಪ್ ಕೇವಲ 7 ದಿನಗಳು ಎಂದು ಹತ್ರಾಸ್ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಇಂದ್ರವೀರ್ ಸಿಂಗ್ ಹೇಳಿದ್ದಾರೆ. ಸಿಬಿಐ 29 ದಿನಗಳ ಅನಂತರ ಬಂದಿತ್ತು. ಆದ್ದರಿಂದ ಬ್ಯಾಕಪ್ ಅನ್ನು ಇಟ್ಟುಕೊಳ್ಳಲಾಗಿಲ್ಲ. ಪ್ರತಿ 7 ದಿನಗಳಿಗೊಮ್ಮೆ ಹಳೆಯ ದಾಖಲೆಗಳನ್ನು ಅಳಿಸಲಾಗುತ್ತದೆ. ಆದರೆ ಜಿಲ್ಲಾಡಳಿತ ನಮಗೆ ಮಾಹಿತಿ ನೀಡಿದ್ದರೆ ನಾವು ದೃಶ್ಯಾವಳಿಗಳನ್ನು ಸಂಗ್ರಹಿಸಿಡುತ್ತಿದ್ದೆವು ಎಂದು ಆಸ್ಪತ್ರೆ ಹೇಳಿದೆ.

    ಹಾಥರಸ್​ ಪ್ರಕರಣ- ಯುವತಿಯ ಕೊಲೆ ಮಾಡಿದ್ದು ಯಾರು ಎಂದು ತಿಳಿಸಿ ಪತ್ರ ಬರೆದ ಆರೋಪಿಗಳು!

    ರಾತ್ರಿಯಿಡೀ ಫ್ರೀಜರ್​ನಲ್ಲಿದ್ದ ‘ಮೃತ’ ವೃದ್ಧ ಬೆಳಗಾದಾಗ ಅಲುಗಾಡಿದ!

    ಅಪ್ಪ-ಅಮ್ಮನ ಜತೆ ಜಗಳವಾಡಿ ಮನೆಬಿಟ್ಟ ಬಾಲಕಿಯ ಕೂಡಿಹಾಕಿ 22 ದಿನ ಗ್ಯಾಂಗ್​ರೇಪ್​!

    ಕಾಂಗ್ರೆಸ್​ ಮಾನಸಿಕ ಅಸ್ವಸ್ಥ ಎಂದದ್ದಕ್ಕೆ ಖುಷ್ಬೂ ಕ್ಷಮೆ- ಮನೋರೋಗಿಗಳ ಬಗ್ಗೆ ಗೌರವವಿದೆ ಎಂದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts