More

    ಮಾಜಿ ಮುಖ್ಯಮಂತ್ರಿಯಿಂದಲೇ ದೇಶದ ಭದ್ರತೆಗೆ ಧಕ್ಕೆ! ಸಿಗಲಿಲ್ಲ ಪಾಸ್​ಪೋರ್ಟ್​- ಅರ್ಜಿ ತಿರಸ್ಕೃತ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಪಕ್ಷದ ಅಧಿನಾಯಕಿ ಮೆಹಬೂಬಾ ಮುಫ್ತಿ ಅವರ ಪಾಸ್​ಪೋರ್ಟ್​ ಅರ್ಜಿಯನ್ನು ತಿರಸ್ಕೃತಗೊಂಡಿರುವ ಘಟನೆ ನಡೆದಿದೆ. ಇದಕ್ಕೆ ಕಾರಣ, ಇವರಿಂದ ದೇಶದ ಭದ್ರತೆಗೆ ಧಕ್ಕೆ ಇದೆ ಎನ್ನುವ ಕಾರಣಕ್ಕೆ.

    ಜಮ್ಮು ಮತ್ತು ಕಾಶ್ಮೀರ ಅಪರಾಧ ತನಿಖಾ ಸಂಸ್ಥೆ ಸಿಐಡಿ ನೀಡಿರುವ ವರದಿಯ ಆಧಾರದ ಮೇಲೆ ಇವರಿಗೆ ಪಾಸ್​ಪೋರ್ಟ್​ ನಿರಾಕರಿಸಿದಾಗಿದೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಫ್ತಿ, ತಮ್ಮ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದೇಶದ ಭದ್ರತೆಗೆ ಧಕ್ಕೆ ತಂದ ಆರೋಪದ ಮೇರೆಗೆ ನನ್ನ ಪಾಸ್ ಪೋರ್ಟ್ ಅರ್ಜಿಯನ್ನು ಪ್ರಾಧಿಕಾರ ತಿರಸ್ಕರಿಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪತ್ರಕರ್ತರ ಜತೆಗೂ ಈ ವಿಷಯವನ್ನು ತಿಳಿಸಿರುವ ಮುಫ್ತಿ, ಪಾಸ್​ಪೋರ್ಟ್​ ಕಚೇರಿ ನೀಡಿರುವ ಪತ್ರವನ್ನು ತೋರಿಸುತ್ತಾ, ತಮಗೆ ಈ ರೀತಿಯಾಗಿ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.

    ಇವರ ಪಾಸ್​ಪೋರ್ಟ್​ ಅವಧಿಯು 2020ರ ಮೇ 31 ರಂದು ಮುಗಿದಿದೆ. ತಮ್ಮ ಪಾಸ್​ಪೋರ್ಟ್​ ನವೀಕರಣಕ್ಕೆ ಕೋರಿ ಅವರು ಡಿಸೆಂಬರ್ 11 ರಂದು ಅರ್ಜಿ ಸಲ್ಲಿಸಿದ್ದರು. ಆದರೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಕಾರಣ ನೀಡಿ ಮತ್ತು ಸಿಐಡಿ ವರದಿಯನ್ನಾಧರಿಸಿ ಪಾಸ್‌ಪೋರ್ಟ್ ನೀಡಲು ನಿರಾಕರಿಸಲಾಗಿದೆ.

    ಈ ಕುರಿತು ತೀವ್ರ ಕಿಡಿ ಕಾರಿರುವ ಮಾಜಿ ಮುಖ್ಯಮಮತ್ರಿ, ಒಂದು ರಾಜ್ಯದ ಮಾಜಿ ಮುಖ್ಯಮಂತ್ರಿಗೆ ಪಾಸ್ ಪೋರ್ಟ್ ನೀಡಿದರೆ ಹೇಗೆ ದೇಶದ ಭದ್ರತೆಗೆ ಧಕ್ಕೆಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಪಕ್ಷಪಾತ ತೋರುತ್ತಿದೆ ಎಂದು ಹೇಳಿದರು.

    ಮನಿ ಲಾಂಡರಿಂಗ್ ಅಥವಾ ಹವಾಲಾ ಹಣ ವರ್ಗಾವಣೆ ವಿಚಾರವಾಗಿ ಜಾರಿ ನಿರ್ದೇಶನಾಲಯವು ಮೆಹಬೂಬಾ ಮುಫ್ತಿ ಮತ್ತು ಫಾರೂಕ್ ಅಬ್ದುಲ್ಲಾ ವಿರುದ್ಧ ವಿಚಾರಣೆ ನಡೆಸುತ್ತಿದೆ.

    ಫೋನ್​ ಚಾರ್ಜ್​ ಆಗಿದ್ಯೋ ಎಂದು ನೋಡಲುಹೋಗಿ ಜೀವ ಕಳೆದುಕೊಂಡ ಬಾಲಕ- ಸ್ಫೋಟಕ್ಕೆ ಮುಖ ಛಿದ್ರ

    ಅಪ್ಪನ ಆಸ್ತಿಯನ್ನು ಅಣ್ಣ ಗುಟ್ಟಾಗಿ ಮಾರಿದ್ದಾನೆ- ನಮ್ಮ ಮದುವೆಗೆ ಆತ ಖರ್ಚು ಮಾಡಿದ್ದರಿಂದ ಪಾಲು ಸಿಗುವುದಿಲ್ಲವೆ?

    ಪತ್ನಿ ಸರಿಯಿಲ್ಲ ಎಂದು ಕಣ್ಣೀರುಹಾಕಿ ಸಂಬಂಧ ಬೆಳೆಸಿದ- ಎಲ್ಲವನ್ನೂ ಒಪ್ಪಿಸಿ ಮೋಸ ಹೋದೆ ಮೇಡಂ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts