More

    ಅಪ್ಪನ ಆಸ್ತಿಯನ್ನು ಅಣ್ಣ ಗುಟ್ಟಾಗಿ ಮಾರಿದ್ದಾನೆ- ನಮ್ಮ ಮದುವೆಗೆ ಆತ ಖರ್ಚು ಮಾಡಿದ್ದರಿಂದ ಪಾಲು ಸಿಗುವುದಿಲ್ಲವೆ?

    ಅಪ್ಪನ ಆಸ್ತಿಯನ್ನು ಅಣ್ಣ ಗುಟ್ಟಾಗಿ ಮಾರಿದ್ದಾನೆ- ನಮ್ಮ ಮದುವೆಗೆ ಆತ ಖರ್ಚು ಮಾಡಿದ್ದರಿಂದ ಪಾಲು ಸಿಗುವುದಿಲ್ಲವೆ?ನಮ್ಮ ತಂದೆ ತೀರಿಕೊಂಡು ನಾಲ್ಕು ವರ್ಷಗಳಾಗಿವೆ. ಅವರ ಸ್ವಯಾರ್ಜಿತ ಆಸ್ತಿಗಳನ್ನೆಲ್ಲ ನಮ್ಮ ಒಬ್ಬನೇ ಅಣ್ಣ ಬೇರೆಯವರಿಗೆ ಮಾರಾಟ ಮಾಡಿ ಒಂದು ಆಸ್ತಿ ಮಾತ್ರ ತಾನು ಇಟ್ಟುಕೊಂಡಿದ್ದಾನೆ. ನಾನು ಮತ್ತು ನನ್ನ ಅಕ್ಕ ಇಬ್ಬರಿಗೂ ಹೇಳದೇ ಮಾರಾಟ ಮಾಡಿದ್ದಾನೆ. ನಮ್ಮ ತಾಯಿ ನಮ್ಮ ತಂದೆಗೂ ಮುಂಚೆ ತೀರಿಕೊಂಡಿದ್ದರು.


    ಈಗ ಭಾಗ ಕೇಳಿದರೆ, ನಿಮಗೆ ಮದುವೆ ಆಗಿ ಹತ್ತು ವರ್ಷ ಆಗಿದೆ, ಮದುವೆಗೆ ಖರ್ಚು ಮಾಡಿದ್ದೇನೆ , ಏನೂ ಕೊಡುವುದಿಲ್ಲ ಎನ್ನುತ್ತಿದ್ದಾನೆ. ಕೇಸು ಹಾಕಿದರೆ, ಕೊಂಡುಕೊಂಡವರನ್ನು ಪಾರ್ಟಿ ಮಾಡಬೇಕಾಗುತ್ತದೆಯೇ? ಆ ಕ್ರಯ ಪತ್ರಗಳನ್ನು ಕ್ಯಾನ್ಸಲ್‌ ಮಾಡಿ ಎಂದು ಕೇಳ ಬೇಕೇ? ಆಗ ನಾವು ಎಷ್ಟೊಂದು ಕೋರ್ಟು ಫೀಸು ಕೊಡಬೇಕು. ನಮ್ಮ ಹತ್ತಿರ ಅಷ್ಟು ದುಡ್ಡು ಇಲ್ಲ. ನೀವೇನೂ ಮಾಡಲು ಆಗುವುದಿಲ್ಲ ಎಂದು ನಮ್ಮ ಅಣ್ಣ ಹೇಳುತ್ತಿದ್ದಾನೆ. ದಯವಿಟ್ಟು ಪರಿಹಾರ ಸೂಚಿಸಿ.

    ಉತ್ತರ: ನೀವು ಹೆದರ ಬೇಕಾಗಿಲ್ಲ. ಮೃತ ತಂದೆಯ ಆಸ್ತಿಯಲ್ಲಿ , ನಿಮ್ಮ ತಂದೆಯ ಎಲ್ಲ ಮಕ್ಕಳಿಗೂ (ಗಂಡು ಮತ್ತು ಹೆಣ್ಣು ಮಕ್ಕಳಿಗೂ) ಸಮಪಾಲು ಇರುತ್ತದೆ. ನಿಮ್ಮ ಮದುವೆ ಯಾವಾಗ ಆಯಿತು, ಅದಕ್ಕೆ ಎಷ್ಟು ಖರ್ಚು , ಯಾರು ಮಾಡಿದರು ಎನ್ನುವುದೆಲ್ಲ , ನಿಮಗೆ ಭಾಗ ಕೊಡುವ ವಿಷಯದಲ್ಲಿ , ಲೆಕ್ಕಕ್ಕೆ ಬರುವುದಿಲ್ಲ. ನೀವು ಧೈರ್ಯವಾಗಿ ವಿಭಾಗದ ಕೇಸು ಹಾಕಿ. ಕೊಂಡುಕೊಂಡವರನ್ನೂ ಪಾರ್ಟಿ ಮಾಡಿ.

    ನಿಮ್ಮ ಅಣ್ಣ ಮಾಡಿರುವ ಪರಭಾರೆ ನಿಮ್ಮ ಹಕ್ಕನ್ನು ಬಂಧಿಸುವುದಿಲ್ಲ ಎನ್ನುವ ಹೇಳಿಕೆ ಹಾಗೂ ಪ್ರಾರ್ಥನೆ ಇದ್ದರೆ ಸಾಕು. ಈ ರೀತಿಯ ವಿಭಾಗದ ದಾವೆಗೆ ಕೋರ್ಟು ಫೀ ತುಂಬಾ ಕಡಿಮೆ ಇರುತ್ತದೆ.

    ಅಕ್ರಮ ಸಂಬಂಧ ಇಟ್ಟುಕೊಂಡ ಪತ್ನಿ ವಿಚ್ಛೇದನವನ್ನೂ ಕೊಡ್ತಿಲ್ಲ- ಕಾನೂನಿನಡಿ ನಾನು ಏನು ಮಾಡಬಹುದು?

    ನನ್ ತಂಗಿಯ ಮೇಲೆ ಗಂಡನ ಕಣ್ಣುಬಿದ್ದಿದೆ, ಬೇರೆ ಮದ್ವೆಯಾಗಲೂ ಬಿಡುತ್ತಿಲ್ಲ- ಕಾನೂನಡಿ ಪರಿಹಾರವೇನು?

    ಸ್ವಯಾರ್ಜಿತ ಆಸ್ತಿಯನ್ನು ಹೆಣ್ಣುಮಕ್ಕಳಿಗೆ ಕೊಡಲು ತಂದೆಗೆ ಇಷ್ಟವಿಲ್ಲ, ಇದಕ್ಕೆ ಅವಕಾಶವಿದೆಯಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts