More

    ಭಾರತದಲ್ಲಿ ಇಂದು ಕೋವಿಡ್​ ಲಸಿಕೆ ಮೊದಲು ಪಡೆದವರು ಯಾರು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ…

    ನವದೆಹಲಿ: ಅಂತೂ ಬಹು ನಿರೀಕ್ಷಿತ ಕೋವಿಡ್​ ಲಸಿಕೆ ಭಾರತಕ್ಕೆ ಕಾಲಿಟ್ಟಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಉದ್ಘಾಟನೆ ಮಾಡಿಯೂ ಅಯ್ತು. ಹಾಗಿದ್ದರೆ ಈ ಲಸಿಕೆ ಪಡೆದಿರುವ ಮೊದಲ ಅದೃಷ್ಟವಂತರು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

    ಅದಕ್ಕೆ ಇಲ್ಲಿದೆ ನೋಡಿ ಉತ್ತರ. ಕೋವಿಡ್​ ಲಸಿಕೆಯನ್ನು ಈ ಮೊದಲೇ ನಿಗದಿ ಮಾಡಿದಂತೆ ಪ್ರಥಮ ಹಂತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕರೊನಾ ವಾರಿಯರ್ಸ್​ಗೆ ನೀಡಲಾಗುತ್ತದೆ. ಅದರಂತೆಯೇ, ಮೊದಲ ಡೋಸ್ ಅನ್ನು ಕರೊನಾ ವಾರಿಯರಸ್​ ಆಗಿ ದುಡಿಯುತ್ತಿರುವ ಪೌರ ಕಾರ್ಮಿಕ ಸಿಬ್ಬಂದಿಗೆ ನೀಡಲಾಗಿದೆ.

    ಮನೀಶ್ ಕುಮಾರ್ ಎಂಬುವವರಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದೇಶದ ಮೊದಲ ಕರೋನಾ ವೈರಸ್ ಲಸಿಕೆಯನ್ನು ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ ಬಳಿಕ ದೇಶದಲ್ಲಿ ಮೊದಲ ಕೋವಿಡ್​ ಲಸಿಕೆ ಪಡೆದ ವ್ಯಕ್ತಿಯಾಗಿದ್ದಾರೆ ಮನೀಶ್‌.

    ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹಾಗೂ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರ ಉಪಸ್ಥಿತಿಯಲ್ಲಿ ಈ ಲಸಿಕೆ ನೀಡಲಾಯಿತು.

    ನಂತರ ಡಾ.ರಂದೀಪ್​ ಅವರೂ ಲಸಿಕೆ ಪಡೆದುಕೊಂಡರು. ಇಲ್ಲಿದೆ ನೋಡಿ ಅದರ ವಿಡಿಯೋ:

    ಸಂಸಾರ ಮಾಡಲು ಗಂಡ ಒಪ್ಪದಿದ್ದರೆ ಡಿವೋರ್ಸ್​ ಬಿಟ್ಟು ಹೆಣ್ಣಿಗೆ ಏನಾದರೂ ಪರ್ಯಾಯ ಮಾರ್ಗಗಳಿವೆಯೆ?

    ಹುಟ್ಟುಹಬ್ಬ ಮಾಡಿ ಅರೆಸ್ಟ್​ ಆದ್ರು! 20 ಸೆಕೆಂಡ್​ ವಿಡಿಯೋದಲ್ಲಿ ಅಂಥದ್ದೇನಿದೆ ನೋಡಿ…

    ವಯಸ್ಸಿದ್ದಾಗ ಮಾಡಬಾರದ್ದೆಲ್ಲಾ ಮಾಡಿದೆ, ಈಗ ಹೆಂಡ್ತಿ ಹತ್ತಿರ ಸೇರಿಸುತ್ತಿಲ್ಲ- ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts