More

    ಮಾರಾಟ ಮಾಡಿದ್ದ ಜಮೀನನ್ನೇ ಕಬಳಿಸಿದ ಶಾಸಕ ಜಮೀರ್‌? ಕೋರ್ಟ್‌ ಆದೇಶದ ಮೇರೆಗೆ ಎಫ್‌ಐಆರ್

    ಬೆಂಗಳೂರು: ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್ ಹಾಗೂ ಅವರ ಸಹೋದರ ಸೇರಿದಂತೆ ಕೆಲ ಕುಟುಂಬಸ್ಥರು ಭಾರಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದಕ್ಕೆ ಕಾರಣ ಬೆಂಗಳೂರಿನಲ್ಲಿರುವ ಜಮೀನಿಗೆ ಸಂಬಂಧಿಸಿದಂತೆ ಭೂ ಕಬಳಿಕೆ ಮಾಡಿರುವ ಆರೋಪ ಇವರನ್ನು ಸುತ್ತುಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಎಲ್ಲರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ಶಾಹೀತಾ ನಾಸೀನ್ ಹಾಗೂ ಇತರರು ಕಳೆದ ವರ್ಷ ಜಮೀರ್‌ ಹಾಗೂ ಸಹೋದರರ ವಿರುದ್ಧ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ದೂರು ದಾಖಲಾಗಿತ್ತು. ನಂತರ ಈ ಪ್ರಕರಣ ಕೋರ್ಟ್‌ ಮೆಟ್ಟಿಲೇರಿದ್ದಾಗ, ಕೋರ್ಟ್‌ ಆದೇಶದಂತೆ ಇದೀಗ ಎಫ್‌ಐಆರ್ ದಾಖಲು ಮಾಡಲಾಗಿದೆ.

    ಬೆಂಗಳೂರಿನ ಚೊಕ್ಕನಹಳ್ಳಿ ಬಡಾವಣೆಯ ಸೈಟ್ ನಂ. 5, 6 ಕ್ಕೆ ಸಂಬಂಧಿಸಿದ ಗಲಾಟೆ ಇದಾಗಿದೆ. ಆಗಿದ್ದೇನೆಂದರೆ ತಸೀಮಾ ಫಾತೀಮಾ ಹಾಗೂ ಇತರರು ಈ ಜಮೀನನ್ನು ಜಮೀರ್‌ ಹಾಗೂ ಕುಟುಂಬದವರಿಂದ 2015ರಲ್ಲಿ ಖರೀದಿಸಿದ್ದರು. ಆದರೆ ಸೈಟ್‌ ಖರೀದಿ ನಂತರ ಅವರು ಅತ್ತ ಗಮನ ಕೊಟ್ಟಿರಲಿಲ್ಲ. ಆದರೆ ನಂತರ ನೋಡಿದಾಗ ಆ ಸೈಟ್‌ಗಳನ್ನು ಜಮೀರ್‌ ಹಾಗೂ ಕುಟುಂಬಸ್ಥರೇ ಕಬಳಿಕೆ ಮಾಡಿದ್ದಾರೆ ಎನ್ನುವುದು ದೂರು. ಅದನ್ನು ಪ್ರಶ್ನಿಸಿದ್ದಕ್ಕೆ ನಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಾಹೀತಾ ನಾಸೀನ್ ಗಂಭೀರ ಆರೋಪ ಮಾಡಿದ್ದಾರೆ. ಇದು ಕೋರ್ಟ್‌ ಮೆಟ್ಟಿಲೇರಿದ್ದಾಗ ಸೈಟ್‌ ನೀಡುವಂತೆ ಸೂಚಿಸಿದ್ದರೂ ತಮಗೆ ಅದನ್ನು ಬಿಟ್ಟುಕೊಟ್ಟಿಲ್ಲ ಎನ್ನುವುದು ತಸೀಮಾ ಫಾತೀಮಾ ಹಾಗೂ ಇತರರ ದೂರು.

    ಖಾಸಗಿ ದೂರು ವಿಚಾರಣೆ ನಡೆಸಿದ ಕೋರ್ಟ್, ತನಿಖೆಗೆ ಆದೇಶಿಸಿದ್ದು, ಸದ್ಯ ನಿವೇಶನ ಸಂಬಂಧ ಯಥಾಸ್ಥಿತಿ ಕಾಪಾಡಲು ಸೂಚಿಸಿದೆ.

    ರೇಪ್‌ಗೂ ಹಿಜಾಬ್‌ಗೂ ಸಂಬಂಧ ಕಲ್ಪಿಸಿ ಉಲ್ಟಾ ಹೊಡೆದ ಜಮೀರ್‌: ಮುಜುಗರದಲ್ಲಿ ಕಾಂಗ್ರೆಸ್‌!

    ಹಿಜಾಬ್‌, ಕೇಸರಿ ಸಂಘರ್ಷದ ನಡುವೆ ‘ಕುಂಕಮ’ಕ್ಕೆ ಸಂಕಷ್ಟ: ಶುರುವಾಯ್ತು ಸಿಂಧೂರ ಚಳವಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts