More

    ‘ಬಾರ್ಡರ್‌‘ ಪ್ರದರ್ಶನದ ವೇಳೆ ಚಿತ್ರಮಂದಿರಕ್ಕೆ ಬೆಂಕಿ, 59 ಮಂದಿ ಸಾವು-ಅಪರಾಧಿಗಳಿಗೆ ಏಳು ವರ್ಷ ಶಿಕ್ಷೆ-2.25 ಕೋಟಿ ರೂ.ದಂಡ

    ನವದೆಹಲಿ: 1997ರಲ್ಲಿ ದೆಹಲಿಯ ಉಪಹಾರ್ ಥಿಯೇಟರ್‌ನಲ್ಲಿ ನಡೆದಿದ್ದ ಅಗ್ನಿ ದುರಂತದಲ್ಲಿ 59 ಮಂದಿ ಸಾವಿಗೆ ಕಾರಣವಾಗಿರುವ ಘಟನೆಗೆ ಸಂಬಂಧಿಸಿದಂತೆ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 2.25 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.

    ಘಟನೆ ಸಂಭವಿಸಿ 24 ವರ್ಷಗಳ ಬಳಿಕ ಈ ತೀರ್ಪು ಹೊರಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ತಿರುಚಿದ್ದಕ್ಕಾಗಿ ಇವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಘಟನೆಗೆ ಕಾರಣರಾಗಿದ್ದ ಆರೋಪಿಗಳಾದ ಹರ್ ಸ್ವರೂಪ್ ಪನ್ವಾರ್ ಮತ್ತು ಧರ್ಮವೀರ್ ಮಲ್ಹೋತ್ರಾ ಅವರು ವಿಚಾರಣೆಯ ವೇಳೆ ಮೃತಪಟ್ಟಿದ್ದರು.

    ಉಪಹಾರ್‌ ಚಿತ್ರಮಂದಿರಲ್ಲಿ ‘ಬಾರ್ಡರ್’ ಸಿನಿಮಾವನ್ನು ಪ್ರದರ್ಶಿಸಲಾಗಿತ್ತು. ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿತ್ತು. ಚಿತ್ರಮಂದಿರದಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇಲ್ಲದ ಕಾರಣ 59 ಜನರು ಉಸಿರುಗಟ್ಟಿ ಸತ್ತಿದ್ದರೆ 100 ಕ್ಕೂ ಹೆಚ್ಚು ಜನರು ಕಾಲ್ತುಳಿತದಲ್ಲಿ ಗಾಯಗೊಂಡಿದ್ದರು.

    ಉಪಹಾರ್ ದುರಂತ ಸಂತ್ರಸ್ತರ ಸಂಘದ(ಎವಿಯುಟಿ) ಅಧ್ಯಕ್ಷ ನೀಲಂ ಕೃಷ್ಣಮೂರ್ತಿ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆದು ಇದೀಗ ತೀರ್ಪು ಹೊರಬಿದ್ದಿದೆ.

    ಅಪ್ಪು ನೆನಪಲ್ಲಿ ಇಂದು 5 ಸಾವಿರ ಸಸ್ಯಾಹಾರ, 20 ಸಾವಿರ ಮಂದಿಗೆ ಮಾಂಸಾಹಾರ ಊಟಕ್ಕೆ ವ್ಯವಸ್ಥೆ: ಅನ್ನಸಂತರ್ಪಣೆ ವಿವರ ಹೀಗಿದೆ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts