More

    VIDEO: ನಾನು ಹೆಲ್ಮೆಟ್‌ ಹಾಕಬೇಕು ಅಂದ್ರೆ ನೀವೇ ಕೊಡ್ಸಿ ಸರ್‌…. ಬೈಕ್‌ ಸವಾರ-ಪೊಲೀಸ್ ಜಟಾಪಟಿ

    ಬೆಂಗಳೂರು: ಹೆಲ್ಮೆಟ್ ಧರಿಸದೇ ಸಂಚಾರ ನಿಯಮ ಉಲ್ಲಂಸಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ದ್ವಿಚಕ್ರವಾಹನ ಸವಾರನೊಬ್ಬ ಬರೋಬ್ಬರಿ 44 ಸಾವಿರ ರೂ. ದಂಡ ಪಾವತಿಸಲು ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ನೀವೇ ನನಗೆ ಹೆಲ್ಮೆಟ್ ಕೊಡಿಸಿ ಸರ್….ಎಂದು ಸವಾರ ಪೊಲೀಸರೊಂದಿಗೆ ಜಗಳ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

    ನಗರದಲ್ಲಿ ಹೆಲ್ಮೆಟ್ ಧರಿಸದೇ ರಸ್ತೆಗಿಳಿದ ಸವಾರನನ್ನು ಪೊಲೀಸರು ತಡೆದಾಗ ಆತ ಏಕಾಏಕಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು, ಸರಿಯಾಗಿ ಡ್ಯೂಟಿ ಮಾಡಿ ಎಂದು ಅವಾಜ್ ಹಾಕಿದ್ದಾನೆ. ನಾವು ಸರಿಯಾಗಿಯೇ ಕೆಲಸ ಮಾಡುತ್ತಿದ್ದೇವೆ. ನೀವು ಸಂಚಾರ ನಿಯಮ ಪಾಲಿಸಿಕೊಂಡು ಸ್ಕೂಟರ್ ಚಲಾಯಿಸಿ ಎಂದು ಪೊಲೀಸರೂ ಸಲಹೆ ನೀಡಿದ್ದಾರೆ.

    ಇದರಿಂದ ಆಕ್ರೋಶಗೊಂಡ ಸವಾರ, ನೀವು ಈಗ ನನ್ನನ್ನು ಏನು ಮಾಡುತ್ತೀರಾ? ಎಂದು ಪ್ರಶ್ನಿಸಿ ದಮ್ಕಿ ಹಾಕಿದ್ದಾನೆ. ಪೊಲೀಸರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿರುವುದು ಸವಾರನ ಗಮನಕ್ಕೆ ಬರುತ್ತಿದ್ದಂತೆ, ನನ್ನ ಮನೆ ಇಲ್ಲೇ ಸಮೀಪದಲ್ಲಿದೆ. ಹಾಗಾಗಿ ಹೆಲ್ಮೆಟ್ ಧರಿಸಿಲ್ಲ. ಮನೆಯಿಂದ ಹೊರ ಬಂದ ತಕ್ಷಣ ಹೆಲ್ಮೆಟ್ ಧರಿಸಬೇಕಾ ? ಎಂದು ಮತ್ತೆ ಪ್ರಶ್ನಿಸಿದ್ದಾನೆ. ಸಂಚಾರ ನಿಯಮದ ಪ್ರಕಾರ ದ್ವಿಚಕ್ರ ವಾಹನ ಚಾಲನೆ ಮಾಡುವ ವೇಳೆ ಹೆಲ್ಮೆಟ್ ಧರಿಸಬೇಕು ಎಂದು ಪೊಲೀಸರು ಬುದ್ಧಿವಾದ ಹೇಳಿದಕ್ಕೆ ‘ನೀವೇ ನನಗೆ ಹೆಲ್ಮೆಟ್ ಕೊಡಿಸಿ ಸರ್…. ನಾನು ಸದಾ ಹೆಲ್ಮೆಟ್ ಧರಿಸಿಕೊಂಡು ಓಡಾಡುತ್ತೇನೆ ’ ಎಂದು ಪೊಲೀಸರೊಂದಿಗೆ ಮತ್ತೆ ವಾಗ್ವಾದಕ್ಕಿಳಿದಿದ್ದಾನೆ.

    ಆತನ ವರ್ತನೆಯಿಂದ ಕೋಪಗೊಂಡ ಪೊಲೀಸರು, ನಿಮಗೆ ನಾವು ಏಕೆ ಹೆಲ್ಮಟ್ ಕೊಡಬೇಕು. ಸೈಕಲ್‌ನಲ್ಲಿ ಹೋಗಿ ಎಂದು ಖಾರವಾಗಿ ಹೇಳಿದ್ದಾರೆ. ಏನಾಗಬೇಕು ಸರ್ ನಿಮಗೆ ಎಂದು ಸವಾರ ಪದೇ-ಪದೇ ಪ್ರಶ್ನಿಸಿದಾಗ, ಗೌರವ ಕೊಡುವುದನ್ನು ಕಲಿತುಕೊಳ್ಳಿ ಎಂದು ಪೊಲೀಸರು ಹೇಳಿದ್ದಾರೆ. ಇದಾದ ಬಳಿಕ ಕ್ಷಣ ಮಾತ್ರದಲ್ಲಿ ಸವಾರ ಸ್ಕೂಟರ್ ತೆಗೆದುಕೊಂಡು ಹೋಗಿದ್ದಾನೆ.

    ಇದಾದ ಬಳಿಕ ಪೊಲೀಸರು ಆತನ ದ್ವಿಚಕ್ರ ವಾಹನದ ನಂಬರ್ ಪರಿಶೀಲಿಸಿದಾಗ, ಮೊಬೈಲ್‌ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ, ಹೆಲ್ಮೆಟ್ ಧರಿಸದೇ ಚಾಲನೆ ಸೇರಿ ಒಟ್ಟು 81 ಬಾರಿ ಸಂಚಾರ ನಿಯಮ ಉಲ್ಲಂಸಿ, 44 ಸಾವಿರ ರೂ. ದಂಡ ಕಟ್ಟಲು ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ.

    ವಿಡಿಯೋ ಇಲ್ಲಿದೆ ನೋಡಿ…

    10 ವರ್ಷದಿಂದ ರಷ್ಯಾ ಯುದ್ಧ ಯುದ್ಧ ಅಂತ ಕಥೆ ಹೇಳ್ತಾ ಇದೆ, ಹೆದ್ರಬೇಡಿ ಎಂದರು… ಈಗ ನೋಡಿ ನಮ್‌ ಸ್ಥಿತಿ…

    ಕೊನೆಯ ಬಾರಿ ತಬ್ಬಿಕೊಳ್ಳುವೆ, ಮತ್ತೆ ತೊಂದ್ರೆ ಕೊಡಲ್ಲ ಎಂದ ಪತಿ: ಇಬ್ಬರ ದೇಹವೂ ಛಿದ್ರ ಛಿದ್ರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts