More

    ಬಸವರಾಜ ಬೊಮ್ಮಾಯಿಯಂತೆ ಅಪ್ಪನ ಹಾದಿ ತುಳಿದು ಸಿಎಂ ಪಟ್ಟಕ್ಕೇರಿದವರಾರು?

    ನವದೆಹಲಿ: ಮೂವತ್ತು ವರ್ಷಗಳ ಹಿಂದೆ ರಾಜ್ಯದ ಮುಖ್ಯಮಂತ್ರಿಯ ಪಟ್ಟಕ್ಕೇರಿದ್ದ ಎಸ್‌.ಆರ್‌. ಬೊಮ್ಮಾಯಿ (ಆಗಸ್ಟ್ 13, 1988 ಮತ್ತು ಏಪ್ರಿಲ್ 21, 1989ರ ನಡುವೆ) ಅವರ ಮಗ ಬಸವರಾಜ ಬೊಮ್ಮಾಯಿ ಇಂದು ಅದೇ ಸ್ಥಾನವನ್ನೇರಿದ್ದಾರೆ. ಅವರು ಪ್ರಮಾಣ ವಚನ ಸ್ವೀಕರಿಸಿರುವ ಬೆನ್ನಲ್ಲೇ ಇದೇ ರೀತಿ ಅಪ್ಪನಂತೆಯೇ ಯಾವ್ಯಾವ ಮಕ್ಕಳು ಸಿಎಂ ಗಾದಿಯೇರಿದ್ದಾರೆ ಎಂಬ ಬಗ್ಗೆ ಕುತೂಹಲ ಶುರುವಾಗಿದೆ.

    * ದೇವೇಗೌಡ- ಕುಮಾರಸ್ವಾಮಿ: ಕರ್ನಾಟಕದ ಬಗ್ಗೆ ನೋಡುವುದಾದರೆ ಎಚ್‌.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ. ದೇವೇಗೌಡ ಅವರು 1994ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ನಂತರ ಕುಮಾರಸ್ವಾಮಿ ಅವರು, 2004ರಲ್ಲಿ ಇದೇ ಪಟ್ಟಕ್ಕೇರಿದ್ದರು.

    *ಕರುಣಾನಿಧಿ- ಎಂ.ಕೆ ಸ್ಟಾಲಿನ್‌: ತಮಿಳುನಾಡಿದ ಹಾಲಿ ಮುಖ್ಯಮಂತ್ರಿಯಾಗಿರುವ ಎಂ.ಕೆ ಸ್ಟಾಲಿನ್ ಅವರ ತಂದೆ ಎಂ.ಕರುಣಾ ನಿಧಿ ಅವರೂ ಮುಖ್ಯಮಂತ್ರಿಯಾಗಿದ್ದವರು. ದ್ರಾವಿಡ ನಾಯಕ ಕರುಣಾನಿಧಿ ಅವರು ನಿಧನರಾದ ಬಳಿಕ ಡಿಎಂಕೆ ಪಕ್ಷದ ನಾಯಕನಾದವರು ಸ್ಟಾಲಿನ್.

    * ರಾಜಶೇಖರ ರೆಡ್ಡಿ- ವೈ. ಎಸ್​ ಜಗನ್ ಮೋಹನ್ ರೆಡ್ಡಿ: ಆಂಧ್ರ ಪ್ರದೇಶದ ಹಾಲಿ ಮುಖ್ಯಮಂತ್ರಿಯಾಗಿರುವ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರು ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ಮಗ. ಕಾಂಗ್ರೆಸ್ಸಿಗರಾಗಿದ್ದ ರಾಜಶೇಖರ ರೆಡ್ಡಿ ಅವರು ಮೃತಪಟ್ಟ ನಂತರ ನೂತನ ವೈಎಸ್​ಆರ್ ಕಾಂಗ್ರೆಸ್ ಪಕ್ಷ ಕಟ್ಟಿದವರು ಜಗನ್.

    * ನವೀನ್ ಪಟ್ನಾಯಕ್- ಬಿಜು ಪಟ್ನಾಯಕ್: ಒಡಿಶಾದ ಹಾಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮಾಜಿ ಸಿಎಂ ಬಿಜು ಪಟ್ನಾಯಕ್ ಅವರ ಪುತ್ರ. 1997ರಲ್ಲಿ ಬಿಜು ಅವರು ಮೃತಪಟ್ಟ ಬಳಿಕ ಬಿಜು ಪಟ್ನಾಯಕ್ ಹೆಸರಿನಲ್ಲಿ ಬಿಜು ಜನತಾದಳವನ್ನು ಸ್ಥಾಪಿಸಿದರು ಮಗ ನವೀನ್‌. ನಂತರ ಬಿಜು ಜನತಾದಳವು ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ ಬಿಜೆಪಿಯೊಂದಿಗೆ ಸರ್ಕಾರವನ್ನು ರಚಿಸಿತು. ಹೊಸ ಸರ್ಕಾರದಲ್ಲಿ ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾದರು.

    * ಮುಲಾಯಂ ಸಿಂಗ್ ಯಾದರ್‌-ಅಖಿಲೇಶ್ ಯಾದವ್: ಸದಾ ಸುದ್ದಿಯಲ್ಲಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರು ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ

    * ಶಿಬು ಸೊರೆನ್ – ಹೇಮಂತ್ ಸೊರೆನ್: ಜಾರ್ಖಂಡ್‌ನ ಹಾಲಿ ಸಿಎಂ ಹೇಮಂತ್ ಸೊರೆನ್ ಅವರು ಮಾಜಿ ಸಿಎಂ ಶಿಬು ಸೊರೆನ್ ಅವರ ಮಗ.

    * ಪಿ.ಎ ಸಂಗ್ಮಾ-ಕಾನ್ರಾಡ್ ಸಂಗ್ಮಾ: ಮೇಘಾಲಯದ ಮುಖ್ಯಮಂತ್ರಿಯಾಗಿದ್ದ ಪಿ.ಎ, ಸಂಗ್ಮಾ ಅವರ ಪುತ್ರ ಹಾಲಿ ಸಿಎಂ ಕೊನ್ರಾಡ್‌. 2016ರಿಂದ ಇವರು ಇಲ್ಲಿ ಮುಖ್ಯಮಂತ್ರಿಯಾಗಿದ್ದಾರೆ.

    * ಡೋರ್ಜಿ ಖಂಡು- ಪೆಮಾ ಖಂಡು: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಅವರು ಇಲ್ಲಿಯ ಮಾಜಿ ಮುಖ್ಯಮಂತ್ರಿ ಡೋರ್ಜಿ ಖಂಡು ಅವರ ಪುತ್ರ.

    * ಶೇಖ್‌ ಅಬ್ದುಲ್ಲಾ, ಫಾರೂಕ್‌ ಅಬ್ದುಲ್ಲಾ, ಒಮರ್‌ ಅಬ್ದುಲ್ಲಾ: ಜಮ್ಮುವಿನಲ್ಲಿ ಮೂರು ತಲೆಮಾರು ಮುಖ್ಯಮಂತ್ರಿಗಳಾಗಿದ್ದಾರೆ. ಶೇಖ್‌ ಅಬ್ದುಲ್ಲಾ ಅವರ ಪುತ್ರ ಫಾರೂಕ್‌ ಹಾಗೂ ನಂತರ ಅವರ ಪುತ್ರ ಒಮರ್‌ ಮುಖ್ಯಮಂತ್ರಿಯಾಗಿದ್ದಾರೆ.

    * ಶಂಕರ್‌ ರಾವ್ ಚವ್ಹಾಣ್​ – ಅಶೋಕ್ ಚವ್ಹಾಣ್: ಮಹಾರಾಷ್ಟ್ರದಲ್ಲಿ ಕೂಡ ​ಮುಖ್ಯಮಂತ್ರಿಯಾಗಿದ್ದ ಶಂಕರ್‌ ರಾವ್‌ ಚವ್ಹಾಣ್‌ ಅವರ ಮತ ಅಶೋಕ್‌ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿದ್ದಾರೆ.

    * ದೇವಿ ಲಾಲ್‌ ಚೌಟಲಾ- ಓಂ ಪ್ರಕಾಶ್ ಚೌಟಲಾ: ಹರಿಯಾಣದ ಸಿಎಂ ಆಗಿದ್ದ ದೇವಿ ಲಾಲ್ ನಂತರ ಅವರ ಪುತ್ರ ಓಂ ಪ್ರಕಾಶ್ ಚೌಟಲಾ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.

    * ಮುಫ್ತಿ ಮೊಹಮ್ಮದ್ ಸಯೀದ್- ಮೆಹಬೂಬಾ ಮುಫ್ತಿ: ಇನ್ನು ಮಹಿಳೆಯರ ವಿಷಯಕ್ಕೆ ಬರುವುದಾದರೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ಮೆಹಬೂಬಾ ಮುಫ್ತಿ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    * ಹೇಮಾವತಿ ನಂದನ್- ವಿಜಯ್ ಬಹುಗುಣ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಹೇಮಾವತಿ ನಂದನ್ (1973-75) ಅವರ ಮಗ ವಿಜಯ ಬಹುಗುಣ ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದರು(2012- 2014).

    ಸಂಕಷ್ಟದಲ್ಲಿ ಶ್ರೀರಾಮುಲು: ಡಿಸಿಎಂ ಆಗೋ ಹೊತ್ತಲ್ಲೇ ಎದುರಾಯ್ತು ಜಾತಿ ಕಂಟಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts