More

    ಹದಿನಾರುವರೆ ಗಂಟೆಗಳಲ್ಲಿ 107 ಕಣ್ಣುಗಳ ಆಪರೇಷನ್- ಎಲ್ಲವೂ ಸಕ್ಸೆಸ್​… ದಾಖಲೆ ಬರೆದ ನೇತ್ರ ತಜ್ಞ

    ಪ್ರಯಾಗರಾಜ್ (ಉತ್ತರ ಪ್ರದೇಶ): ಕೇವಲ ಹದಿನಾರುವರೆ ಗಂಟೆಯೊಳಗೆ 107 ಕಣ್ಣುಗಳ ಆಪರೇಷನ್ ಮಾಡಿ ಎಲ್ಲವನ್ನೂ ಯಶಸ್ವಿಗೊಳಿಸುವ ಮೂಲಕ ದಾಖಲೆ ಬರೆದಿದ್ದಾರೆ ಉತ್ತರ ಪ್ರದೇಶ ಪ್ರಯಾಗ್​ರಾಜ್​ದ ವೈದ್ಯ ಡಾ. ಎಸ್.ಪಿ. ಸಿಂಗ್.

    ನೇತ್ರವಿಜ್ಞಾನ ಸಂಸ್ಥೆಯ ನಿರ್ದೇಶಕ ಮತ್ತು ಪ್ರಯಾಗ್‌ರಾಜ್‌ನಲ್ಲಿರುವ ಎಂಎಲ್‌ಎನ್ ವೈದ್ಯಕೀಯ ಕಾಲೇಜಿನ (ಎಂಎಲ್‌ಎನ್‌ಎಂಸಿ) ಪ್ರಾಂಶುಪಾಲರಾಗಿರುವ ಡಾ. ಎಸ್.ಪಿ. ಸಿಂಗ್ ಅವರು ಫೆಬ್ರವರಿ 25ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10.30ರವರೆಗೆ ನಿರಂತರವಾಗಿ 16 ಗಂಟೆ 30 ನಿಮಿಷಗಳ ಅವಧಿಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಇಂಟ್ರಾಕ್ಯುಲರ್ ಲೆನ್ಸ್ (ಐಒಎಲ್) ಇಂಪ್ಲಾಂಟ್‌ನೊಂದಿಗೆ 107 ಫಾಕೊ ಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸೆಗಳನ್ನು ಅವರು ಮಾಡಿದ್ದಾರೆ.

    ಶಸ್ತ್ರ ಚಿಕಿತ್ಸೆಯ ಬಳಿಕ ಶಸ್ತ್ರಚಿಕತ್ಸೆಗೆ ಒಳಗಾದವರನ್ನು ಒಂದು ವಾರಗಳ ಕಾಲ ಅಬ್ಸರ್ವೇಷನ್​ನಲ್ಲಿ ಇಡಲಾಗಿತ್ತು. ಎಲ್ಲರೂ ಗುಣಮುಖರಾಗಿದ್ದಾರೆ ಎಂದಿದ್ದಾರೆ ವೈದ್ಯರು. 2011ರ ಅಕ್ಟೋಬರ್​ನಲ್ಲಿ ದೆಹಲಿಯ ಸೇನಾ ಆಸ್ಪತ್ರೆಯ ಸಂಶೋಧನೆ ಮತ್ತು ರೆಫರಲ್‌ನ ಆಗಿನ ಬ್ರಿಗೇಡಿಯರ್ (ಡಾ) ಜೆಕೆಎಸ್ ಪರಿಹಾರ್ ಅವರು ಪೂರ್ವ ಲಡಾಖ್‌ನಲ್ಲಿ 34 ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದರು. ಇದೀಗ ಈ ದಾಖಲೆಯನ್ನು ಡಾ.ಸಿಂಗ್​ ಮುರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪತ್ರ ಬರೆದು, ಅಗತ್ಯವಿರುವ ಪುರಾವೆಗಳೊಂದಿಗೆ ತಮ್ಮ ಸಾಧನೆಯ ಬಗ್ಗೆ ಇವರು ತಿಳಿಸಿದ್ದಾರೆ.

    ವಿದೇಶದ ಎಂಬಿಬಿಎಸ್​ಗೆ ಭಾರತದಲ್ಲಿ ಉದ್ಯೋಗವೂ ಸುಲಭವಲ್ಲ, ಇಲ್ಲಿ ಪಾಸಾಗೋದು ಕಷ್ಟ- ಇಲ್ಲಿದೆ ನೋಡಿ ಡಿಟೇಲ್ಸ್​…

    ವಿಚ್ಛೇದನಕ್ಕೆ ಗಂಡ-ಹೆಂಡತಿ ಒಪ್ಪಿಗೆ ನೀಡಿದರೂ ಆರು ತಿಂಗಳು ಕಾಯಲೇಬೇಕಾ? ಕಾನೂನು ಹೇಳೋದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts