More

    ಪತ್ನಿಗೆ ಇಂಜಿನಿಯರ್ ನೀಡಿದ ಅಸಾಮಾನ್ಯ ಗಿಫ್ಟ್‌: ಮಹಿಳೆಯರಿಂದ ಜಾಲತಾಣದಲ್ಲಿ ಶ್ಲಾಘನೆಗಳ ಮಹಾಪೂರ

    ಪಾಟ್ನಾ: ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಸಮಯದಲ್ಲಿ ದಂಪತಿ ಒಬ್ಬರಿಗೊಬ್ಬರು ಗಿಫ್ಟ್‌ ನೀಡುವುದು ಸಹಜ. ಸಿರಿವಂತರಾದರೆ ಚಿನ್ನ, ವಜ್ರ, ವೈಢೂರ್ಯ, ಕಾರು, ಬಂಗಲೆ ಇವುಗಳನ್ನು ಪತ್ನಿಗೆ ಗಿಫ್ಟ್‌ ನೀಡುವುದು ಇದ್ದೇ ಇದೆ. ಆದರೆ ಇಲ್ಲೊಬ್ಬ ಇಂಜಿನಿಯರ್‌ ಒಬ್ಬರು ಪತ್ನಿಗೆ ನೀಡಿರುವ ಗಿಫ್ಟ್‌ ಸ್ವಲ್ಪ ವಿಭಿನ್ನವಾಗಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಬಿಹಾರದ ಮೆಕ್ಯಾನಿಕಲ್ ಇಂಜಿನಿಯರ್ ಅನುಜ್ ಕುಮಾರ್ ತಮ್ಮ ಪತ್ನಿಗೆ ನೀಡಿರುವ ಕಾಣಿಕೆ ಇದು. ಇದರ ಸುದ್ದಿ ತಿಳಿಯುತ್ತಿದ್ದಂತೆಯೇ ಪತ್ನಿಯ ಸ್ನೇಹಿತೆಯರು ಮಾತ್ರವಲ್ಲದೇ ಅಕ್ಕಪಕ್ಕದ ಮನೆಯವರೂ ಈ ಇಂಜಿನಿಯರ್‌ ಮನೆಗೆ ದೌಡಾಯಿಸಿದ್ದಾರೆ.

    ಅಷ್ಟಕ್ಕೂ ಅಂಥದ್ದೇನು ಗಿಫ್ಟ್‌ ಅಂತೀರಾ? ಅನುಜ್ ಕುಮಾರ್ ಅವರು ತಮ್ಮ ಪತ್ನಿಗೆ ಉಡುಗೊರೆಯಾಗಿ ನೀಡಿದ್ದು ಲಿಫ್ಟ್‌. ಕೆಳ ಮಹಡಿಯಿಂದ ತಿಂಡಿ, ಪಾನೀಯವನ್ನು ಮೊದಲ ಮಹಡಿಗೆ ತೆಗೆದುಕೊಂಡು ಮೆಟ್ಟಿಲು ಏರಿ ಹೋಗಬೇಕಾಗಿತ್ತು. ಇದರಿಂದ ಪತ್ನಿಗೆ ಆಯಾಸವಾಗುತ್ತಿರುವುದನ್ನು ನೋಡಲಾಗದ ಈ ಇಂಜಿನಿಯರ್‌ ಉಡುಗೊರೆ ರೂಪದಲ್ಲಿ ಲಿಫ್ಟ್‌ ನೀಡಿದ್ದಾರೆ, ಇದೇ ಇದೀಗ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಪತ್ನಿಯ ಸಂಕಷ್ಟಕ್ಕೆ ಮನ ಮಿಡಿದಿರುವ ಈತನೇ ನಿಜವಾದ ಹೀರೋ ಎಂದಿದ್ದಾರೆ ಹಲವು ಮಹಿಳಾ ನೆಟ್ಟಿಗರು.

    ಮನೆಯಲ್ಲಿಯೇ ಊಟ ಕಳಿಸುವ ಪುಟ್ಟ ಲಿಫ್ಟ್ ತಯಾರಿಸಿದ್ದು, ಕಿಚನ್ ನಿಂದ ನೇರವಾಗಿ ಡೈನಿಂಗ್ ಹಾಲ್ ಗೆ ಊಟ ಕಳಿಸಬಹುದಾಗಿದೆ ಎಂದಿದ್ದಾರೆ ಅನುಜ್‌. ಒಮ್ಮೆ ಮನೆಗೆ ಅತಿಥಿಗಳು ಬಂದಾಗ ಪತ್ನಿ ಒಳಗೂ, ಹೊರಗೂ ಓಡಾಡುತ್ತಿದ್ದಳು. ಮೆಟ್ಟಿಲುಗಳು ಹೆಚ್ಚಾಗಿರೋದರಿಂದ ಒಮ್ಮೆ ಪತ್ನಿ ಜಾರಿ ಬಿದ್ದು ಆಸ್ಪತ್ರೆ ಸೇರುವಂತಾಗಿಯಿತು. ಹಾಗಾಗಿ ಆಕೆಯ ಶ್ರಮ ಕಡಿಮೆ ಮಾಡುವ ಉದ್ದೇಶದಿಂದ ಪುಟ್ಟ ಲಿಫ್ಟ್ ನಿರ್ಮಿಸುವ ಆಲೋಚನೆ ಬಂತು ಎಂದಿರುವ ಅನುಜ್‌ಗೆ ಇದೀಗ ಜಾಲತಾಣದಲ್ಲಿ ಭಾರಿ ಪ್ರಶಂಸೆ ಸಿಗುತ್ತಿದೆ.

    ಇವರದ್ದು ಚಿಕ್ಕ ಮನೆ. ಆದ್ದರಿಂದ ಅಡುಗೆ ಮನೆ ಮೊದಲ ಮಹಡಿಯಲ್ಲಿ ಮಾಡಲಾಗಿದ್ದು, ಗ್ರೌಂಡ್ ಫ್ಲೋರ್ ನಲ್ಲಿ ವಿಸ್ತಾರವಾದ ಹಾಲ್ ಇದೆ. ಯಾರೇ ಬಂದರೂ ಮೊದಲ ಮಹಡಿಯಲ್ಲಿಯೇ ತಿಂಡಿ ಎಲ್ಲವೂ. ಆದ್ದರಿಂದ ಕೆಳಗೂ ಮೇಲೂ ಓಡಾಡುವುದರಿಂದ ಪತ್ನಿಗೆ ಸುಸ್ತಾಗುತ್ತಿದ್ದೆಂದು ಈ ಕೆಲಸ ಮಾಡಿದ್ದಾರೆ ಅನುಜ್‌.

    ಗೂಗಲ್‌ನಲ್ಲಿ ಪುರುಷರು ಅತೀ ಹೆಚ್ಚಾಗಿ ಹುಡುಕುವುದು ಇವಂತೆ- ಸಮೀಕ್ಷೆ ಏನು ಹೇಳಿದೆ ನೋಡಿ…

    ಬೆಳಗಾವಿ ಬೀದಿ ಕಾಮಣ್ಣನಿಗೆ ಮಹಿಳೆಯಿಂದ ಗೂಸಾ: ಚಪ್ಪಲಿ ಏಟು ತಿಂದವ ಏನ್‌ ಮಾಡಿದ ನೋಡಿ…

    ದಿನದಿಂದ ದಿನಕ್ಕೆ ಕಲ್ಲಾಗುತ್ತಿದ್ದಾಳೆ ಈ ಮುದ್ದು ಕಂದಮ್ಮ- ಇವಳದ್ದು ಕಣ್ಣೀರ ಕಥೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts