More

    ಕೆಲಸಕ್ಕೆ ಹೊರಟ ಕಾರ್ಮಿಕರನ್ನು ಅಪಹರಿಸಿ ಕೊಲೆ: ಮುಂದುವರೆದಿದೆ ಅಲ್ಪಸಂಖ್ಯಾತರ ಹತ್ಯಾಕಾಂಡ!

    ಕರಾಚಿ: ಪಾಕಿಸ್ತಾನದ ಅಲ್ಪಸಂಖ್ಯಾತ ಶಿಯಾ ಹಜಾರಾ ಸಮುದಾಯಕ್ಕೆ ಸೇರಿರುವ ಜನರ ಮೇಲೆ ಹತ್ಯಾಕಾಂಡಾ ಮುಂದುವರೆದಿದೆ.

    ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದಲ್ಲಿ ಇಂಥದ್ದೊಂದು ಭೀಕರ ಘಟನೆ ನಡೆದಿದೆ. ಹಜಾರಾ ಸಮುದಾಯಕ್ಕೆ ಸೇರಿದ ಕಲ್ಲಿದ್ದಲು ಗಣಿಯ 11 ಕಾರ್ಮಿಕರನ್ನು ಅಪಹರಿಸಿ, ನಂತರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

    ಗಣಿಗಾರಿಕೆಗೆ ಹೊರಟಿದ್ದ ಕಾರ್ಮಿಕರಲ್ಲಿ ಶಿಯಾ ಹಜಾರಾ ಸಮುದಾಯಕ್ಕೆ ಸೇರಿದ ಕಾರ್ಮಿಕರನ್ನು ಮಾತ್ರ ಬಂದೂಕುಧಾರಿಗಳು ಅಪಹರಿಸಿದ್ದಾರೆ. ಉಳಿದ ಕಾರ್ಮಿಕರಿಗೆ ಯಾವುದೇ ಹಾನಿ ಮಾಡಿಲ್ಲ ಎನ್ನಲಾಗಿದೆ.

    ಮಚ್ ಕಲ್ಲಿದ್ದಲು ಮೈದಾನದಲ್ಲಿ ಕೆಲವು ಕಾರ್ಮಿಕರು ಕೆಲಸಕ್ಕೆ ಹೊರಟಿಸಿದ್ದರು. ಈ ಪೈಕಿ ಕೇವಲ ಶಿಯಾ ಹಜಾರಾ ಸಮಯದಾಯದವನ್ನು ಹೊತ್ತೊಯ್ಯಲಾಗಿದೆ. ನಂತರ ಅವರನ್ನು ಪರ್ವತಗಳ ಸಮೀಪ ನಿಲ್ಲಿಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

    ಈ ಕಾರ್ಮಿಕರ ಪೈಕಿ 6 ಗಣಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಐವರು ಆಸ್ಪತ್ರೆಗೆ ಸಾಗಿಸುವಾದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಕೃತ್ಯದ ಹೊಣೆಯನ್ನು ಇದುವರೆಗೆ ಯಾವ ಉಗ್ರಸಂಘಟನೆಯೂ ಹೊತ್ತುಕೊಂಡಿಲ್ಲ.
    ಬಲೂಚಿಸ್ತಾನದ ಮುಖ್ಯಮಂತ್ರಿ ಜಾಮ್ ಕಮಲ್ ಖಾನ್, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೃತ್ಯವನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.

    ಜಗನ್ನಾಥನ ದರುಶನಕೆ ಬೇಕು ನೆಗೆಟಿವ್​ ರಿಪೋರ್ಟ್​- ಇಲ್ಲದಿದ್ದರೆ ನೋ ಎಂಟ್ರಿ

    ‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’

    ಹವಾಮಾನ ಏರಿಳಿತವನ್ನು ಉಲ್ಲನ್​ನಲ್ಲಿ ದಾಖಲಿಸಿದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts