More

    ವರದಕ್ಷಿಣೆ ತಗೊಂಡ ನೌಕರರಿಗೆ ಶುರುವಾಯ್ತು ನಡುಕ: ಕಚೇರಿಯಿಂದ ಹೊರಕ್ಕೆ, ಕಂಬಿಯ ಹಿಂದೆ…

    ಕೊಯಮತ್ತೂರು: ನಿಮಗೆ ಸರ್ಕಾರಿ ನೌಕರಿ ಮಾಡುವ ಆಸೆಯೆ? ಹಾಗಿದ್ದರೆ ವರದಕ್ಷಿಣೆಯ ವ್ಯಾಮೋಹವನ್ನು ತ್ಯಜಿಸಿ. ಹಣಕ್ಕಾಗಿ ಬಾಯಿಬಿಡುತ್ತಾ ಹೆಣ್ಣು ಹೆತ್ತವರಿಂದ ಹಣ, ಒಡವೆಗಳನ್ನು ಬಾಚಿಕೊಳ್ಳುವ ಆಸೆ ನಿಮ್ಮದಾಗಿದ್ದರೆ ಸರ್ಕಾರಿ ಕೆಲಸ ಆಸೆ ತೊರೆಯಿರಿ. ಹಾಗೆಂದು ಸರ್ಕಾರಿ ನೌಕರಿಯಲ್ಲಿ ಇಲ್ಲವೆಂದು ಖುಷಿಪಡುವ ಅಗತ್ಯವಿಲ್ಲ. ವರದಕ್ಷಿಣೆ ತೆಗೆದುಕೊಂಡು ಸಿಕ್ಕಿಬಿದ್ದರೆ ಅಷ್ಟೇ ಕಥೆ.

    ಇವೆಲ್ಲಾ ಪೀಠಿಕೆ ಏಕೆ ಅಂತೀರಾ? ಇಂಥದ್ದೊಂದು ಸುತ್ತೋಲೆ ಇದೀಗ ಕೇರಳ ಸರ್ಕಾರದಿಂದ ಹೊರಟಿದ್ದು, ಇದು ಬೇರೆ ರಾಜ್ಯಗಳಿಗೂ ಮಾದರಿಯಾಗುವ ದಿನಗಳು ದೂರವಿಲ್ಲ. ಅದೇನೆಂದರೆ ಕೇರಳದ ಎಲ್ಲ ಸರ್ಕಾರಿ ಪುರುಷ ಉದ್ಯೋಗಿಗಳಿಗೆ ಸುತ್ತೋಲೆ ಮೂಲಕ ವರದಕ್ಷಿಣೆಗೆ ಸಂಬಂಧಿಸಿದ ಸುತ್ತೋಲೆ ಹೊರಡಿಸಲಾಗಿದೆ. ಅದರಲ್ಲಿ ಸರ್ಕಾರಿ ಉದ್ಯೋಗಿಗಳು ತಾವು ವರದಕ್ಷಿಣೆ ಪಡೆದಿಲ್ಲ ಎಂಬ ಘೋಷಣಾ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ.

    ವರದಕ್ಷಿಣೆ ಪಡೆಯುವುದು ಮತ್ತು ನೀಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಕಾನೂನಿನ ಅಡಿ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ಗರಿಷ್ಠ 15,000 ರೂ.ವರೆಗೂ ದಂಡ ವಿಧಿಸಬಹುದಾಗಿದೆ. ಆದರೆ ಇದು ಸರಿಯಾಗಿ ಎಲ್ಲಿಯೂ ಜಾರಿಯಾಗುತ್ತಿಲ್ಲ. ಇನ್ನೊಂದೆಡೆ ಹೆಣ್ಣು ಹೆತ್ತವರೂ ಮದುವೆಯಾದರೆ ಸಾಕಪ್ಪ ಎಂದುಕೊಂಡು ವರದಕ್ಷಿಣೆಯನ್ನು ಕೊಡುವವರೂ ಇದ್ದಾರೆ.

    ಆದರೆ ಇದೀಗ ಕಾನೂನನ್ನು ಕೇರಳದಲ್ಲಿ ಬಿಗಿಗೊಳಿಸಲಾಗಿದೆ. ಸರ್ಕಾರಿ ನೌಕರರು ವರದಕ್ಷಿಣೆ ಪಡೆದಿಲ್ಲ ಎಂಬ ಘೋಷಣಾ ಪತ್ರ ಸಲ್ಲಿಸಬೇಕಿದೆ. ಇದಾಗಲೇ ಸರ್ಕಾರಿ ನೌಕರಿಯಲ್ಲಿ ಇರುವವರು ತಾವು ಮದುವೆಯಾದ ವರ್ಷ, ದಿನಾಂಕ ಮತ್ತು ಮದುವೆ ಸಂದರ್ಭದಲ್ಲಿ ವಧುವಿನ ಕುಟುಂಬದಿಂದ ಯಾವುದೇ ರೀತಿಯ ವರದಕ್ಷಿಣೆ ಪಡೆದಿಲ್ಲ ಎಂಬ ಘೋಷಣಾ ಪತ್ರ ಸಲ್ಲಿಸಬೇಕು. ಆ ಲಿಖಿತ ಘೋಷಣಾ ಪತ್ರದ ಮೇಲೆ ಉದ್ಯೋಗಿಯ ತಂದೆ, ಪತ್ನಿ ಮತ್ತು ಪತ್ನಿಯ ಅಪ್ಪ (ಮಾವ)ನ ಸಹಿ ಇರಬೇಕು. ಇದಕ್ಕೆ ಒಂದೇ ತಿಂಗಳು ಬಾಕಿ ಇದ್ದು ಇದನ್ನು ಕಡ್ಡಾಯ ಮಾಡಲಾಗಿದೆ. ಪ್ರತಿ ವರ್ಷ ಏಪ್ರಿಲ್‌ 15ರಿಂದ ಅಕ್ಟೋಬರ್‌ 15ರ ಒಳಗೆ ಪ್ರತಿ ಸರ್ಕಾರಿ ಪುರುಷ ಉದ್ಯೋಗಿ ಇದನ್ನು ಸಲ್ಲಿಸಬೇಕಿದೆ.

    ಈ ಸುತ್ತೋಲೆ ಹೊರಟಿರುವುದು ಕೇರಳ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ. ವರದಕ್ಷಿಣೆ ಪಡೆಯುವುದು ಮತ್ತು ತೆಗೆದುಕೊಳ್ಳುವುದು ಯಾವ ರೀತಿಯ ಅಪರಾಧ ಎಂಬ ಬಗ್ಗೆ ಈ ಸುತ್ತೋಲೆಯಲ್ಲಿ ವಿವರಣೆ ನೀಡಲಾಗಿದೆ. ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಮಹಿಳೆಯರ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಈ ಆದೇಶ ಹೊರಡಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ವರದಕ್ಷಿಣೆ ನಿಷೇಧ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರೇ, ವರದಕ್ಷಿಣೆ ನಿಷೇಧ ಮುಖ್ಯ ಅಧಿಕಾರಿಯೂ ಆಗಿರುತ್ತಾರೆ. ಆದರೆ ಇದಾಗಲೇ ವರಕ್ಷಿಣೆ ಪಡೆದು ಮದುವೆಯಾಗಿರುವ ತಮ್ಮ ಗತಿಯೇನು ಎಂಬ ಆತಂಕದಲ್ಲಿ ಉದ್ಯೋಗಿಗಳಿದ್ದಾರೆ. 

    ಅಕ್ಕ ಬೆಳಗಿನ ಯೋಗದ ಪೋಸ್‌, ಭಾವ ರಾತ್ರಿಯ… ಜಾಲತಾಣದಲ್ಲಿ ಶಮಿತಾ ಶೆಟ್ಟಿ ಟ್ರೋಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts