More

    ಗಂಡ-ಹೆಂಡತಿ ತಮಾಷೆಗಾಗಿ ಮಾಡಿಸಿದರು ಮಕ್ಕಳ ಡಿಎನ್‌ಎ ಪರೀಕ್ಷೆ- ವರದಿ ನೋಡಿ ಕಕ್ಕಾಬಿಕ್ಕಿ!

    ನ್ಯೂಯಾರ್ಕ್‌: ಅಪ್ಪ- ಅಮ್ಮ ಇಬ್ಬರೂ ತಮಾಷೆಗಾಗಿ ಮಕ್ಕಳ ಡಿಎನ್‌ಎ ಪರೀಕ್ಷೆ ಮಾಡಿ ಇದೀಗ ಪೇಚಿಗೆ ಸಿಲುಕಿರುವ ಘಟನೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದಿದ್ದು, ಇದೀಗ ಭಾರಿ ಸುದ್ದಿಯಾಗಿದೆ.

    ಉತಾಹ್‌ನ ಡೊನ್ನಾ ಮತ್ತು ವೆನ್ನರ್ ಜಾನ್ಸನ್ ದಂಪತಿ ಪೇಚಿಗೆ ಸಿಲುಕಿದವರು. ಇವರು ಐವಿಎಫ್‌ (ಕೃತಕ ಗರ್ಭಧಾರಣೆ) ಮೂಲಕ ಅಪ್ಪ- ಅಮ್ಮ ಆದವರು. ಅಂದರೆ ಪತ್ನಿಯ ಅಂಡಾಣು ಮತ್ತು ಪತಿಯ ವೀರ್ಯಾಣು ಸಂಗ್ರಹಿಸಿ ಅದನ್ನು ಬೇರೊಬ್ಬರ ಗರ್ಭದಲ್ಲಿ ಇಟ್ಟು ಅಲ್ಲಿಂದ ಮಗುವನ್ನು ಪಡೆಯುವು ಪ್ರಕ್ರಿಯೆ. ಇದರ ಮೂಲಕ ಇವರು ಪಾಲಕರಾಗಿದ್ದರು.

    ಈಗ ಅವರ ಮಕ್ಕಳಿಗೆ ಕ್ರಮವಾಗಿ 10 ಮತ್ತು 12 ವರ್ಷ. ಅದೊಂದು ದಿನ ಈ ದಂಪತಿ ಮೋಜಿಗಾಗಿ ತಮ್ಮ ಮಕ್ಕಳ ಡಿಎನ್‌ಎ ಪರೀಕ್ಷೆ ಮಾಡಿಸಲು ಬಯಸಿದ್ದರು. ಮಕ್ಕಳು ನೋಡಲು ಸ್ವಲ್ಪ ವಿಭಿನ್ನ ಆಗಿದ್ದರಿಂದ ಹೀಗೆ ತಮಾಷೆ ಮಾಡಿಕೊಂಡಿದ್ದ ದಂಪತಿ ಮಕ್ಕಳ ಪರೀಕ್ಷೆ ಮಾಡಿಸಿದ್ದಾರೆ. ಪರೀಕ್ಷೆಯಲ್ಲಿ ಕಂಡದ್ದೇನೆಂದರೆ ಮಕ್ಕಳ ಡಿಎನ್‌ಎ ಅಪ್ಪನಿಗೆ ಮ್ಯಾಚೇ ಆಗುತ್ತಿರಲಿಲ್ಲ. ಅಂದರೆ ಮಕ್ಕಳ ಅಪ್ಪ ಬೇರೆಯವನವೆಂದು!

    ಇದರಿಂದ ಕಕ್ಕಾಬಿಕ್ಕಿಯಾದ ದಂಪತಿ ಆಸ್ಪತ್ರೆ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ನಂತರ ತಪ್ಪನ್ನು ಒಪ್ಪಿಕೊಂಡಿರುವ ಆಸ್ಪತ್ರೆ, ಕೆಲವೊಮ್ಮೆ ಯಾರದ್ದೋ ಅಂಡಾಣು ಇನ್ನಾದರದ್ದೋ ವೀರ್ಯಾಣು ಜತೆ ಮಿಕ್ಸ್‌ ಮಾಡಿ ಈ ರೀತಿ ಮಾಡಲಾಗುತ್ತದೆ. ಕೆಲವೊಮ್ಮೆ ತಪ್ಪಿನಿಂದ ಹೀಗೆ ಆಗುವುದಿದೆ. ಈ ಕೇಸ್‌ನಲ್ಲಿಯೂ ಹೀಗೆಯೇ ಆಗಿರುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡಿದೆ.

    ಆದರೆ ಇದೀಗ ದಂಪತಿ ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಪ್ಪನಿಗೆ ಮಕ್ಕಳು ತನ್ನ ಸ್ವಂತ ಮಕ್ಕಳು ಅಲ್ಲ ಎಂದು ತಿಳಿದಿರುವ ಹಿನ್ನೆಲೆಯಲ್ಲಿ ದಾಂಪತ್ಯದಲ್ಲಿ ಬಿರುಕು ಉಂಟಾಗುವ ಸನ್ನಿವೇಶ ಬಂದಿದೆ. ಆದರೆ ಅಸಲಿಗೆ ಇಲ್ಲಿ ಮಹಿಳೆಯ ತಪ್ಪೂ ಇಲ್ಲ, ಆದರೆ ಯಾರದ್ದೋ ಮಕ್ಕಳನ್ನು ತನ್ನ ಮಕ್ಕಳೆಂದು ಒಪ್ಪಿಕೊಳ್ಳುವ ಮನಸ್ಸು ಈ ತಂದೆಗೆ ಬರುತ್ತಿಲ್ಲ.
    ಒಟ್ಟಿನಲ್ಲಿ ಏನು ಮಾಡಬೇಕು ಎಂದು ತಿಳಿಯದೇ ದಂಪತಿ ಗೋಳಾಡುತ್ತಿದ್ದರೆ, ವಿಷಯ ತಿಳಿದಿರುವ ಮಕ್ಕಳು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಮಂಟಪದಲ್ಲಿ ಮದುಮಗಳ ಮುಸುಕು ತೆಗೆದು ಬೆಚ್ಚಿಬಿದ್ದ ವರ: ಆತ ಓಡದಂತೆ ಧೋತಿ ಬಿಚ್ಚಿದ ವಧು!

    VIDEO: ಕಾರು, ಬಸ್ಸು ಅಲ್ಲ… ರೈಲನ್ನೇ ತಳ್ಳಿದ ಜನರು- ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts