More

    ನೂರಾರು ಖದೀಮರ ಬೇಟೆಯಾಡಿದ ರೇವಾ ಇನ್ನಿಲ್ಲ: ‘ಗಾಡ್ ಆಫ್ ಆನರ್’ ಗೌರವದ ಜತೆ ಅಂತ್ಯಕ್ರಿಯೆ​

    ಬೆಂಗಳೂರು: ನೂರಾರು ಅಪರಾಧ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಪೊಲೀಸರ ಜತೆ ತೊಡಗಿದ್ದ ರೇವಾ ಶ್ವಾನ ವಯೋಸಹಜದಿಂದ ಮೃತಪಟ್ಟಿದೆ.

    ಆಡುಗೋಡಿಯ ದಕ್ಷಿಣ ಸಿಎಆರ್‌ನಲ್ಲಿ ಇರುವ ರಾಜ್ಯ ಶ್ವಾನ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾಬರ್ ಮೆನ್ ತಳಿಯ ಶ್ವಾನ 2011ರಲ್ಲಿ ಜನಿಸಿದ್ದು,10 ವರ್ಷ ವಯಸ್ಸಾಗಿತ್ತು. ವಿಶೇಷ ಪೊಲೀಸ್ ತರಬೇತಿ ನೀಡಿ ರೇವಾ ಎಂದು ನಾಮಕರಣ ಮಾಡಲಾಗಿತ್ತು. ಹೆಡ್ ಕಾನ್‌ಸ್ಟೇಬಲ್ ಪ್ರಕಾಶ ವಿವೇಕಿ ಎಂಬುವರು ಶ್ವಾನ ಪರಿಚಾಲಕರಾಗಿದ್ದರು.

    2014ರಲ್ಲಿ ಪಂಜಾಬ್​ನಲ್ಲಿ ನಡೆದ ಅಖಿಲ ಭಾರತ ಪೊಲೀಸ್ ಶ್ವಾನ ಕರ್ತವ್ಯ ಕೂಟ, 2017ರಲ್ಲಿ ಮೈಸೂರು ಮತ್ತು 2018ರ ತಮಿಳುನಾಡಿನಲ್ಲಿ ನಡೆದಿದ್ದ ಪೊಲೀಸ್ ಕರ್ತವ್ಯ ಕೂಟದಲ್ಲಿ ರೇವಾ ಭಾಗಿಯಾಗಿತ್ತು. 10 ವರ್ಷಗಳ ಸೇವೆಯಲ್ಲಿ ನೂರಾರು ಅಪರಾಧ ಕೃತ್ಯಗಳನ್ನು ಭೇದಿಸಿದೆ.

    ವಯೋ ಸಹಜ ಕಾಯಿಲೆಯಿಂದ ರೇವಾ ಗುರುವಾರ ಅಸುನೀಗಿದೆ. ಶ್ವಾನ ದಳದ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ರೇವಾಗೆ ಗಾಡ್ ಆಫ್ ಆನರ್ ಗೌರವ ವಂದನೆ ಸಲ್ಲಿಸಿ ಸರ್ಕಾರಿ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

    ಮುಸ್ಲಿಂ ಯುವತಿಯನ್ನು ಮದ್ವೆಯಾದದ್ದೇ ತಪ್ಪಾಯ್ತಾ? ತಂಗಿಯ ಬಾಳಿಗೆ ಕೊಳ್ಳಿ ಇಡಲು ಜೈಲಿನಿಂದಲೇ ಅಣ್ಣನ ಸ್ಕೆಚ್​…

    ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ ‘ದಿ ಕಾಶ್ಮೀರ್ ಫೈಲ್ಸ್​’: ಏಳೇ ದಿನಗಳಲ್ಲಿ 100 ಕೋಟಿ ರೂ.ನತ್ತ ದಾಪುಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts