More

    ಪರಿಹಾರ ನಿಮ್ಮ ಮನೆಯಿಂದ ಕೊಡ್ತಿರಾ?

    ಬಾಗಲಕೋಟೆ: ರೈತರಿಗೆ ಪರಿಹಾರ ಹಣವನ್ನು ನಿಮ್ಮ ಮನೆಯಿಂದ ಕೊಡುತ್ತೀರಾ? ಇಲ್ಲವೇ ನಮ್ಮ ಮನೆಯಿಂದ ಕೊಡುತ್ತೇವಾ? ಸರ್ಕಾರ ಕೊಡುವ ಪರಿಹಾರದ ಹಣವನ್ನು ಸರಿಯಾಗಿ ವಿತರಣೆ ಮಾಡಲು ನಿಮಗೇನು ತೊಂದರೆ?

    ಬಾಗಲಕೋಟೆ ತಾಲೂಕಿನ, ಬೀಳಗಿ ವಿಧಾನಸಭೆ ಕ್ಷೇತ್ರದಲ್ಲಿ ಇತ್ತೀಚಿಗೆ ಸುರಿದ ಮಳೆ-ಗಾಳಿಗೆ ಹಾನಿಯಾದ ಬೆಳೆ ವೀಕ್ಷಣೆ ಮಾಡಲು ಶನಿವಾರ ತೆರಳಿದ್ದ ವೇಳೆ ಹೀಗೆಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


    ಕ್ಷೇತ್ರದ ತುಳಸಿಗೇರಿ, ಸೊಕನಾದಗಿ, ದೇವನಾಳ, ಕೆರಕಲಮಟ್ಟಿ, ಹಿರೇಶೆಲ್ಲಿಕೇರಿ ಮತ್ತಿತರ ಗ್ರಾಮಗಳಲ್ಲಿ ಮಳೆ-ಗಾಳಿಯಿಂದ ಅಪಾರ ಹಾನಿ ಆಗಿತ್ತು. ಬಿರುಗಾಳಿಗೆ ಅನೇಕ ಶೆಡ್ಡುಗಳ ಪತ್ರಾಸ ಹಾರಿಹೋಗಿ ಜನರು ಸಂಕಷ್ಟ ಎದುರಿಸಿದ್ದರು. ಸಾಕಷ್ಟು ಪ್ರಮಾಣದಲ್ಲಿ ಗಿಡಮರಗಳು ಉರುಳಿ ಬಿದ್ದಿದ್ದವು.
    ಆದರೆ, ಉರುಳಿದ ಮರಗಳು ಹಾಗೂ ಶೆಡ್ ಗಳಿಗೆ ನಿಯಮದ ಪ್ರಕಾರ ಪರಿಹಾರ ಕೊಡಲು ಅವಕಾಶ ಇಲ್ಲ ಎಂದು ಅಽಕಾರಿಗಳು ಹೇಳಿದ್ದು, ಶಾಸಕರು ಗರಂ ಆಗಲು ಕಾರಣವಾಗಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎಲ್ಲವನ್ನು ನಿಯಮ ಎಂದು ಕೂತುಕೊಂಡರೆ ರೈತರಿಗೆ ಪರಿಹಾರ ಸಿಗುತ್ತಾ? ಮಾನವಿಯತೆಯಿಂದಲೂ ನೋಡಬೇಕಾಗುತ್ತದೆ. ಹಾನಿಗೆ ಒಳಗಾದವರಿಗೆ ಪ್ರತಿಯೊಂದಕ್ಕೂ ಪರಿಹಾರ ಕೊಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ ಶಾಸಕ ಜೆ.ಟಿ.ಪಾಟೀಲ, ಈ ಬಗ್ಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರೊಂದಿಗೆ ಸ್ಥಳದಿಂದಲೇ ದೂರವಾಣಿಯಲ್ಲಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts