More

    ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ : ಉದ್ಯಮಿ ಸುಬ್ರಹ್ಮಣ್ಯ ಆಚಾರ್ಯ ಅನಿಸಿಕೆ

    ವಿಜಯವಾಣಿ ಸುದ್ದಿಜಾಲ ನೆಲ್ಯಾಡಿ

    ನೆಲ್ಯಾಡಿ ಗ್ರಾಮದ ರಾಮನಗರ ಅಮೆತ್ತಿಮಾರು ಗುತ್ತು ಮನೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಪದವಿವರೆಗಿನ ಮಕ್ಕಳಿಗೆ ನೋಟ್‌ಬುಕ್ ಉಚಿತ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.

    ಧಾರ್ಮಿಕ ಮುಖಂಡ, ಉದ್ಯಮಿ ಸುಬ್ರಹ್ಮಣ್ಯ ಆಚಾರ್ಯ ಮಾತನಾಡಿ, ಮಕ್ಕಳಲ್ಲಿ ವಿದ್ಯೆಯ ಬಗ್ಗೆ ಗೌರವ ಅಭಿಮಾನ ಇರಲಿ. ಕಠಿಣ ಪರಿಶ್ರಮದ ಮೂಲಕ ಯಶಸ್ಸು ಗಳಿಸಬಹುದು. ಇಂತಹ ಕಾರ್ಯಕ್ರಮ ನಡೆಸಿ ಮಕ್ಕಳ ಬಾಳಿಗೆ ಬೆಳಕಾಗಬೇಕು ಎಂದರು.

    ಪ್ರಗತಿಪರ ಕೃಷಿಕ, ದಾನಿ ರಮೇಶ್ ಗೌಡ ನಾಲ್ಗೊತ್ತು ಶುಭ ಹಾರೈಸಿದರು. ಸಂಘಟಕ ಗಂಗಾಧರ ಶೆಟ್ಟಿ ಅಮೆತ್ತಿಮಾರುಗುತ್ತು ಪ್ರಸ್ತಾಪಿಸಿದರು. ದಾನಿ ಮುದಲೆ ಗುತ್ತು ಮಹೇಶ್ ಗೌಡ, ಉದ್ಯಮಿ ಉದಯಕುಮಾರ್ ಭಟ್ ಮೊದಲಾದವರು ಪುಸ್ತಕ ವಿತರಣೆಗೆ ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts