More

    ಅಂತ್ಯಸಂಸ್ಕಾರದ ತಯಾರಿಯಲ್ಲಿದ್ದಾಗ ಅಲ್ಲಾಡಿತು ‘ಹೆಣ’: ದಂಗಾದ ಮನೆಯವರು

    ಪಟ್ನಾ: ಕೆಲವೊಮ್ಮೆ ಯಾರಿಗೂ ಊಹಿಸಲಾಗದ ಘಟನೆಗಳು ಜೀವನದಲ್ಲಿ ನಡೆದೇ ಹೋಗುತ್ತವೆ. ಅಂಥದ್ದೇ ಒಂದು ವಿಚಿತ್ರ ಘಟನೆ ಪಟ್ನಾದಲ್ಲಿ ನಡೆದಿದೆ. ಶವಸಂಸ್ಕಾರಕ್ಕೆ ಯುವಕನನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ಆತನ ದೇಹದಲ್ಲಿ ಚಲನೆ ಉಂಟಾಗಿ ಇಡೀ ಮನೆಮಂದಿ ಗಾಬರಿಯ ಜತೆಗೆ ಸಂತೋಷಪಟ್ಟ ಘಟನೆ ಇದು.

    ಇದೇ 7ರಂದು ಸೌರಭ್​ ಎನ್ನುವವು ಅಪಘಾತಕ್ಕೀಡಾಗಿದ್ರುದ. ಅವರನ್ನು ಕಂಕರ್‌ಬಾಗ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಅವರನ್ನು ವೆಂಟಿಲೇಟರ್​ನಲ್ಲಿ ಇಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆ ಹೇಳಿತ್ತು.

    ಕುಟುಂಬಸ್ಥರಿಂದ ಎರಡು ಲಕ್ಷ ರೂಪಾಯಿ ವಸೂಲಿ ಮಾಡಿದ ಆಸ್ಪತ್ರೆಯ ಸಿಬ್ಬಂದಿ “ಶವ”ವನ್ನು ಮನೆಯವರಿಗೆ ಒಪ್ಪಿಸಿದ್ದರು. ಮನೆಮಗನನ್ನು ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲುಮುಟ್ಟಿತ್ತು.

    ಇದನ್ನೂ ಓದಿ: ಬಿಕ್ಕಟ್ಟು ಶಮನಕ್ಕೆ ಭಾರತ-ಚೀನಾ ಮಾತುಕತೆ: ಐದು ಅಂಶಗಳ ಒಪ್ಪಂದ

    ಇದೇ ವೇಳೆ ಸೌರಭ್​ ಅವರ ಅಂತ್ಯಸಂಸ್ಕಾರಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಂತಿಮ ವಿಧಾವಿಧಾನಗಳ ತಯಾರಿ ನಡೆದಿತ್ತು. ಅವರ ಪದ್ಧತಿಯಂತೆ “ಶವ”ವನ್ನು ಸಿಂಗಾರ ಮಾಡಲಾಗಿತ್ತು. ಗಂಗಾನದಿಯ ದಡದಲ್ಲಿ ಯುವಕನನ್ನು ಸುಡುವ ಸಂಬಂಧ ಎಲ್ಲಾ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

    ಇನ್ನೇನು ನಾಲ್ಕು ಮಂದಿ ಬಂದು ಶವವನ್ನು ಎತ್ತಬೇಕು ಎನ್ನುವಷ್ಟರಲ್ಲಿಯೇ ಅದು ಅಲ್ಲಾಡಿದಂತೆ ಭಾಸವಾಯಿತು. ಮನೆಮಂದಿ ಇದು ತಮ್ಮ ಭ್ರಮೆ ಎಂದುಕೊಂಡರು. ಆದರೆ ಸೌರಭ್​ ಅವರ ಕೈ ಚಲಿಸತೊಡಗಿತು, ಅವರು ನಿಧಾನಕ್ಕೆ ಕಣ್ಣುಬಿಟ್ಟರು. ಇದರಿಂದ ಇದ್ದವರು ಒಮ್ಮೆಲೇ ಗಾಬರಿ, ಆತಂಕಕ್ಕೊಳಗಾದರು. ಇದೇ ವೇಳೆ ಅವರ ಸಂತೋಷವೂ ಮುಗಿಲುಮುಟ್ಟಿತ್ತು.

    ಕೂಡಲೇ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಅವರ ದೇಹದಲ್ಲಿ ಚಲನೆ ಇರುವುದನ್ನು ಗುರುತಿಸಿರುವ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

    ‘ಕೈ’ ಕಟ್ಟಾಭಿಮಾನಿ ಕಂಗನಾ ತಾಯಿ ಬಿಜೆಪಿ ಕೈ ಹಿಡೀತಾರಾ? ಪಕ್ಷ ಏನು ಹೇಳಿದೆ ನೋಡಿ…

    ಬಿಕ್ಕಟ್ಟು ಶಮನಕ್ಕೆ ಭಾರತ-ಚೀನಾ ಮಾತುಕತೆ: ಐದು ಅಂಶಗಳ ಒಪ್ಪಂದ

    ಬಂಜೆತನಕ್ಕೆ ಉಡದ ಜನನಾಂಗ ಔಷಧವಂತೆ!- ಕಳ್ಳಸಾಮಿ ಸಣ್ಣ ಈರಪ್ಪ ಪೊಲೀಸ್ ಬಲೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts