More

    ದುಪ್ಪಟ್ಟು ಹಣದಾಸೆ: 30 ಕೋಟಿ ವಂಚಿಸಿಪರಾರಿ

    ಕಲಬುರಗಿ: ಹಣವನ್ನು ವರ್ಷದಲ್ಲಿ ದುಪ್ಪಟ್ಟು ಮಾಡಿ ಕೊಡುತ್ತೇನೆ ಎಂದು ೩೦ ಕೋಟಿ ರೂ.ಗೂ ಹೆಚ್ಚು ಹಣವನ್ನು ಸಾರ್ವಜನಿಕರಿಂದ ಪಡೆದು ವಂಚನೆ ಮಾಡಿ ಪರಾರಿಯಾದ ಘಟನೆ ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
    ಕ್ಯಾಪ್ಟಲ್ ಗ್ರೋ ಲರ್ನ್ ಟ್ರೇಡಿಂಗ್ ಕಂಪನಿಯ ಮಾಲಿಕ ಉತ್ಕರ್ಷ ವರ್ಧಮಾನೆ, ಆತನ ಪತ್ನಿ ಸಾವಿತ್ರಿ ವರ್ಧಮಾನೆ ಮೋಸ ಮಾಡಿ ಪರಾರಿಯಾದವರು. ವರ್ಷದಲ್ಲಿ ಹಣವನ್ನು ದುಪ್ಪಟ್ಟು ಮಾಡಿಕೊಡುತ್ತೇವೆ ಎಂಬ ಆಮಿಷಕ್ಕೆ ಒಳಗಾಗಿ ಕುರಿಕೋಟಾದ ವೀರೇಶ ಭಾಗೋಡಿ ೨೦೨೩ರಲ್ಲಿ ೧ ಲಕ್ಷ ರೂ., ೨೦೨೪ ಫೆಬ್ರವರಿಯಲ್ಲಿ ೨ ಲಕ್ಷ, ಏಪ್ರಿಲ್‌ನಲ್ಲಿ ೨.೫ ಲಕ್ಷ ರೂ. ನಗದು ಹಣ ನೀಡಿದ್ದಾರೆ. ಮಹ್ಮದ್ ಇಬ್ರಾಹಿಂ, ಗುಂಡಪ್ಪ ವಾರದ, ಚಂದ್ರಕಾAತ ರಾಠೋಡ್, ಸುನಿತಾ ಚವ್ಹಾಣ್, ಶರಣು ಸೇರಿ ಹಲವರು ೩೦ ಕೋಟಿಗಿಂತ ಹೆಚ್ಚು ಹಣ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
    ಎಲ್ಲರಿಗೂ ಮೋಸ ಮಾಡಿ ನಗರದ ಗಾಂಧಿ ನಗರ ಕಮಾನಿನ ಬಳಿಯ ಕಾಂಪ್ಲೆಕ್ಸ್ವೊAದರಲ್ಲಿ ಮಾಡಿದ್ದ ಕಚೇರಿಯಿಂದ ಮೇ ೨೪ರಂದು ಪತ್ನಿಯೊಂದಿಗೆ ಪರಾರಿಯಾಗಿದ್ದಾನೆ. ಪರಾರಿ ಆಗಲು ಸಂಬAಧಿಕರಾದ ಸುಧಾ ಠಾಕೂರ, ವಿಜಯಸಿಂಗ್ ಹಜಾರೆ ಸಹಕರಿಸಿದ್ದಾರೆ. ಈ ಕುರಿತು ಸಿಸಿ ಟಿವಿ ದೃಶ್ಯಗಳು ಸೆರೆಯಾಗಿದ್ದು, ಉತ್ಕರ್ಷ ವರ್ಧಮಾನೆ ನೀಡಿದ ಬಾಂಡ್ ಮತ್ತು ಚೆಕ್‌ನ ಪ್ರತಿಗಳೊಂದಿಗೆ ವೀರೇಶ ಭಾಗೋಡಿ ದೂರು ನೀಡಿದ್ದಾರೆ. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts