More

    ಅಟ್ರಾಸಿಟಿ ಹಾಕುವ ಬೆದರಿಕೆ

    ಕಲಬುರಗಿ: ನಗರದ ರೇವಣಸಿದ್ದೇಶ್ವರ ಕಾಲನಿಯ ಮಹೇಶಕುಮಾರ ಮರಗುತ್ತಿ ಅವರಿಗೆ ಫೋನ್ ಕರೆ ಮಾಡಿ ಅಟ್ರಾಸಿಟಿ ಕೇಸ್ ದಾಖಲಿಸುತ್ತೇವೆ, ನಿನ್ನ ಸರ್ಕಾರಿ ನೌಕರಿಯಿಂದ ತೆಗೆಸುತ್ತೇವೆ ಎಂದು ಜೀವ ಬೆದರಿಕೆ ಹಾಕಲಾಗಿದೆ ಎಂದು ಮಹೇಶಕುಮಾರ ನಗರದ ಸಬ್ ಅರ್ಬನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಭೀಮಶಾ ಪೂಜಾರಿ, ಮಾಜಿ ಕಾರ್ಪೊರೇಟರ್ ರಾಜು ಕಪನೂರ ಇಬ್ಬರೂ ಕೂಡಿಕೊಂಡು ಭೀಮಶಾ ಪೂಜಾರಿ ಅವರ ಫೋನ್ ಮೂಲಕ ಕರೆ ಮಾಡಿ, ಅವಾಚ್ಯ ಶಬ್ಧಗಳಿಂದ ಬೈದು, ನಿನ್ನ ನೌಕರಿ ತೆಗೆಸುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದು, ಕ್ರಮ ಕೈಗೊಂಡು ರಕ್ಷಣೆ ನೀಡಬೇಕು ಎಂದು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts