More

    ಸಿಎಎ ವಿರುದ್ಧದ ಹೋರಾಟಕ್ಕೆ ಮಹಿಳೆಯರಿಗೆ ದಿನಗೂಲಿ! ಸಾಕ್ಷ್ಯ ಒದಗಿಸಿದ ಪೊಲೀಸರು

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಕಳೆದ ಫೆಬ್ರುವರಿಯಲ್ಲಿ ದೆಹಲಿಯ ಶಾಹೀನ್ ಬಾಗ್ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ಸಮೀಪವಿರುವ ಸ್ಥಳಗಳಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಮಹಿಳೆಯರಿಗೆ ಸಕಲ ಸೌಲಭ್ಯಗಳ ಜತೆಗೆ ದಿನಗೂಲಿ ರೂಪದಲ್ಲಿ ಸಹಸ್ರಾರು ರೂಪಾಯಿಗಳನ್ನು ನೀಡಲಾಗುತ್ತಿತ್ತು!

    ಈ ಕುರಿತು ದೆಹಲಿ ಪೊಲೀಸರ ತನಿಖೆಯಿಂದ ತಿಳಿದುಬಂದಿದ್ದು, ಈ ಮಾಹಿತಿಯನ್ನು ಕೋರ್ಟ್​ಗೆ ನೀಡಿದೆ. ಪ್ರತಿಭಟನೆ ಕುರಿತಂತೆ ಸಲ್ಲಿಸಿರುವ ಚಾರ್ಜ್​ಷೀಟ್​ನಲ್ಲಿ ಕಾರ್ಕಾರ್ಡೂಮಾ ಕೋರ್ಟ್​ಗೆ ಪೊಲೀಸರು ಈ ಅಂಶವನ್ನು ವಿವರಿಸಿದ್ದಾರೆ. ಇವುಗಳ ಕುರಿತು ಸಂಗ್ರಹಿಸಲಾಗಿರುವ ಸಾಕ್ಷ್ಯಗಳ ಮಾಹಿತಿ ಜತೆಗೆ ವಾಟ್ಸ್​ಆ್ಯಪ್​ ಸಂದೇಶಗಳನ್ನು ಕೋರ್ಟ್​ಗೆ ಪೊಲೀಸರು ಸಲ್ಲಿಸಿದ್ದಾರೆ.

    ಹೆಚ್ಚೆಚ್ಚು ಮಹಿಳೆಯರನ್ನು ಪ್ರತಿಭಟನೆ ಕರೆತರುವ ನಿಟ್ಟಿನಲ್ಲಿ ಜಾಮಿಯಾ ಸಮನ್ವಯ ಸಮಿತಿ ಸದಸ್ಯೆ ಮತ್ತು ಜೆಎಂಐನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆಯಾಗಿರುವ ಶಿಫಾ-ಉರ್-ರೆಹಮಾನ್ ಮತ್ತು ಇತರರ ಬ್ಯಾಂಕ್​ ಖಾತೆಗಳಿಗೆ ಪ್ರತಿದಿನವೂ ಸಾವಿರಾರು ರೂಪಾಯಿಗಳನ್ನು ಜಮಾ ಮಾಡಲಾಗುತ್ತಿತ್ತು. ಅಲುಮ್ನಿ ಅಸೋಸಿಯೇಶನ್ ಆಫ್ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ (ಎಎಜೆಎಂಐ) ಈ ಹಣಕಾಸಿನ ನೆರವು ನೀಡುತ್ತಿತ್ತು. ಈ ಹಣವನ್ನು ಮಹಿಳೆಯರಿಗೆ ದಿನಗೂಲಿ ರೂಪದಲ್ಲಿ ನೀಡಲು ಜತೆಗೆ, ಪ್ರತಿಭಟನೆಗೆ ಬರುವವರಿಗೆ ಬಸ್​ ಇತ್ಯಾದಿ ಸೌಲಭ್ಯ ಒದಗಿಸಲು ಖರ್ಚು ಮಾಡಲಾಗುತ್ತಿತ್ತು.

    ಇದನ್ನೂ ಓದಿ: ಪ್ರೇಮ ವಿವಾಹ ಮಾಡಿಕೊಂಡರೆ ಆಸ್ತಿಯ ಹಕ್ಕು ಕಳೆದುಕೊಳ್ಳುತ್ತೇವಾ?

    ಮೈಕ್, ಪೋಸ್ಟರ್, ಬ್ಯಾನರ್‌ಗಳು, ಹಗ್ಗಗಳು ಇತ್ಯಾದಿ ಪ್ರತಿಭಟನಾ ಸಲಕರಣೆಗಳಿಗೆ ವ್ಯವಸ್ಥೆ ಮಾಡಲು ಹಣವನ್ನು ಬಳಸಲಾಗುತ್ತಿತ್ತು. ಆಜ್ಮಿ ಜಾಮಿಯಾ ಮಿಲಿಯಾ ಪ್ರತಿಭಟನಾ ಸ್ಥಳದ 7 ನೇ ಗೇಟ್‌ ಒಂದರಲ್ಲಿಯೇ ಪ್ರತಿದಿನವೂ 10 ಸಾವಿರ ರೂಪಾಯಿಗಳವರೆಗೆ ಖರ್ಚು ಮಾಡಿರುವುದು ತನಿಖೆಯಿಂದ ತಿಳಿದುಬಂದಿರುವುದಾಗಿ ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​ಷೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ.

    53 ಮಂದಿಯನ್ನು ಬಲಿ ಪಡೆಯುವಲ್ಲಿ ಈ ಸಂಘಟನೆಯದ್ದು ಬಹುದೊಡ್ಡ ಪಾತ್ರವಿದೆ. ಹಿಂಸಾಚಾರ ಎಸಗಿರುವ ಹಿಂದೆ ಇರುವ ಉದ್ದೇಶವೇ ಬೇರೆಯದ್ದಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಉಗ್ರ ಸಂಘಟನೆ ಬಿಟ್ಟುಬಿಡಿ, ದಯವಿಟ್ಟು ಮನೆಗೆ ವಾಪಸಾಗಿ- ಗರ್ಭಿಣಿ ಪತ್ನಿಯ ಕಣ್ಣೀರ ಸಂದೇಶ

    ನಾಲ್ಕನೆಯ ಗಂಡನದ್ದೂ ರಕ್ತಸಿಕ್ತ ದೇಹ ನೋಡಲಾರೆ: ಶಾಂತಿ ಸ್ಥಾಪಿಸಿ… ತುಂಬು ಗರ್ಭಿಣಿಯ ಗೋಳಾಟ

    ಬಾಲಕಿಯ ಬ್ಯಾಂಕ್ ಖಾತೆಯಲ್ಲಿ ​₹10 ಕೋಟಿ! ಬ್ಯಾಲೆನ್ಸ್​ ಕೇಳಿ ಮೂರ್ಛೆ ಹೋದ ಅಮ್ಮ-ಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts