More

    ಭಾರಿ ಗಾಳಿಗೆ ಉರುಳಿದ ಮರ- ಸಾವಿನ ದವಡೆಯಿಂದ ಪಾರಾದ ಮಹಿಳೆ: ವಿಡಿಯೋ ವೈರಲ್‌

    ಮುಂಬೈ: ತೌಕ್ತೆ ಚಂಡಮಾರುತ ದೇಶದ ವಿವಿಧ ರಾಜ್ಯಗಳಲ್ಲಿ ಭಾರಿ ಅನಾಹುತ ಸೃಷ್ಟಿ ಮಾಡಿವೆ. ಮುಂಬೈನಲ್ಲಿ ಇದೀಗ ಭಾರಿ ಗಾಳಿ- ಮಳೆ ಶುರುವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇದರ ನಡುವೆಯೇ ಬೀಸಿದ ಭಾರಿ ಗಾಳಿಗೆ ಮರವೊಂದು ಮುರಿದು ಬಿದಿದ್ದು, ಸ್ಥಳದಲ್ಲಿದ್ದ ಮಹಿಳೆ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿದೆ.

    ಭಾರಿ ಮಳೆ ಸುರಿಯುತ್ತಿದ್ದು, ಮಹಿಳೆಯೊಬ್ಬರು ಕೊಡೆ ಹಿಡಿದುಕೊಂಡು ಹೋಗುತ್ತಿದ್ದರು. ಅದೇ ಸ್ಥಳದಲ್ಲಿದ್ದ ಭಾರಿ ಗಾತ್ರದ ಮರವೊಂದು ಮುರಿದು ಬಿದ್ದಿದೆ. ಇನ್ನೇನು ಆ ಮರ ಆ ಮಹಿಳೆಯ ಮೇಲೆ ಬೀಳುವುದರಲ್ಲಿತ್ತು. ಆದರೆ ಆಕೆಯ ಅದೃಷ್ಟ ಚೆನ್ನಾಗಿತ್ತು. ತಕ್ಷಣ ಮಹಿಳೆ ಓಡಿ ಹೋಗಿದ್ದಾರೆ. ಇದರಿಂದ ಸಾವಿನ ದಡವೆಯಿಂದ ಪಾರಾಗಿದ್ದಾರೆ.

    ಮುಂಬೈನಲ್ಲಿ ಸೋಮವಾರ 114 ಕಿ. ಮೀ. ವೇಗದಲ್ಲಿ ಗಾಳಿ ಬೀಸಿದೆ. ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿದ್ದು, ಯಾರೂ ಸಹ ಸಮುದ್ರ ತೀರಕ್ಕೆ ಹೋಗಬಾರದು ಎಂದು ಶನಿವಾರದಿಂದಲೇ ಜನರಿಗೆ ಎಚ್ಚರಿಕೆ ನೀಡಲಾಗಿದೆ.

    ಈ ದೃಶ್ಯ ಅಲ್ಲಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮುಂಬೈನ ಪಾಲ್‌ಘಾರ್‌ನ ಇಬ್ಬರು, ಥಾಣೆ ಪ್ರದೇಶದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

    ಸಿಎಂ ಅಳಿಯನಿಗೆ ಸಿಕ್ತು ಸ್ಥಾನ- ಕೋವಿಡ್‌, ನಿಫಾ ಕಾಯಿಲೆ ವಿರುದ್ಧ ಹೋರಾಡಿದ್ದ ಸಚಿವೆಗೆ ಕೊಕ್‌!

    ಮಗ ಎಲ್ಲದಕ್ಕೂ ತಾಯಿಯನ್ನೇ ನಾಮಿನಿ ಮಾಡಿ ಮೃತಪಟ್ಟರೆ ಆತನ ಪತ್ನಿಗೆ ಪಾಲು ಸಿಗಲ್ವಾ?

    ಅಜ್ಜಿಯ ಬೌಲಿಂಗ್‌ ಏಟಿಗೆ ಎಲ್ಲವೂ ಕ್ಲೀನ್‌ಬೌಲ್ಡ್‌- ವಿಡಿಯೋ ನೋಡಿ ನೆಟ್ಟಿಗರಿಂದ ಶ್ಲಾಘನೆಗಳ ಸುರಿಮಳೆ

    ಮುಸ್ಲಿಂ ಧರ್ಮದ ನಿರುದ್ಯೋಗಿ, ನಡತೆ ಬಿಟ್ಟು ದೂರವಾದ ಉದ್ಯೋಗಸ್ಥ ಪತ್ನಿಯಿಂದ ಜೀವನಾಂಶ ಕೇಳಬಹುದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts