More

    ಬಾಡಿಗೆದಾರ ಸಿಕ್ಕನೆಂದು ಲಿಂಕ್‌ ಕ್ಲಿಕ್‌ ಮಾಡಿ 50 ಸಾವಿರ ರೂಪಾಯಿ ಕಳೆದುಕೊಂಡ ಮನೆ ಮಾಲೀಕ!

    ಬೆಂಗಳೂರು : ಬಾಡಿಗೆ ಮನೆಗೆ ಬರುವ ನೆಪದಲ್ಲಿ ಕಟ್ಟಡ ಮಾಲೀಕನನ್ನು ನಂಬಿಸಿ ಮುಂಗಡ ಹಣ ಪಾವತಿ ಮಾಡುವುದಾಗಿ ಹೇಳಿ ಬ್ಯಾಂಕ್​ ಖಾತೆಗೆ ಸೈಬರ್​ ಕಳ್ಳ 50 ಸಾವಿರ ರೂ. ಕನ್ನ ಹಾಕಿದ್ದಾನೆ.
    ಎಚ್​ಎಎಲ್​ನ ಬಸವನಗರದ ಮಹೇಶ್​ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಸಚಿನ್​ ಶರ್ಮಾ ಎಂಬಾತನ ವಿರುದ್ಧ ಎ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ರಿಯಲ್ ಎಸ್ಟೇಟ್‌ ಒಂದರ ವೆಬ್‌​ಸೈಟ್​ನಲ್ಲಿ ಮನೆ ಬಾಡಿಗೆ ಇರುವ ಬಗ್ಗೆ ಮಹೇಶ್​ ಜಾಹೀರಾತು ಹಾಕಿದ್ದರು. ಇದನ್ನು ಗಮನಿಸಿದ ಸೈಬರ್​ ಕಳ್ಳ, ಜಾಹೀರಾತಿನಲ್ಲಿದ್ದ ಮೊಬೈಲ್​ ನಂಬರ್​ಗೆ ಕರೆ ಮಾಡಿದಾಗ ಮಹೇಶ್​ ಸ್ವೀಕರಿಸಿದ್ದಾರೆ. ಆಗ ಮನೆ ಫೋಟೋ ಮತ್ತು ವಿಡಿಯೋವನ್ನು ಕಳುಹಿಸುವಂತೆ ವಂಚಕ ಪಡೆದಿದ್ದು, ಎಲ್ಲವನ್ನು ನೋಡಿ ತನಗೆ ಇಷ್ಟವಾಗಿದೆ. ಬಾಡಿಗೆಗೆ ಮುಂಗಡ ಪಾವತಿ ಮಾಡುತ್ತೇನೆ. ವ್ಯಾಲೆಟ್​ಗೆ ಲಿಂಕ್​ ಆಗಿರುವ ಮೊಬೈಲ್​ ಕೊಡುವಂತೆ ಕೇಳಿದ್ದಾನೆ. ಅದಕ್ಕೆ ಒಪ್ಪಿ ಮಹೇಶ್​, ಮೊಬೈಲ್​ ನಂಬರ್​ ಕಳುಹಿಸಿದ್ದಾರೆ.

    ಆ ನಂಬರ್​ಗೆ 10 ರೂ. ವರ್ಗಾವಣೆ ಮಾಡಿದ ಸೈಬರ್​ ಕಳ್ಳ, ಪರೀಕ್ಷೆ ಮಾಡಲು ಹಣ ಕಳುಹಿಸಿದ್ದೆನೆ. 10 ರೂ. ಬಂದಿದ್ದರೇ 30 ಸಾವಿರ ರೂ. ಕಳುಹಿಸುವುದಾಗಿ ಹೇಳಿದ್ದಾನೆ. ಮಹೇಶ್​, 10 ರೂ. ಬಂದಿರುವುದಾಗಿ ಖಚಿತ ಪಡಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಆರೋಪಿ ಸಚಿನ್​, ನಿಮ್ಮ ಮೊಬೈಲ್​ಗೆ ಲಿಂಕ್​ ಕಳುಹಿಸುತ್ತೆನೆ. ಅದರ ಮೇಲೆ ಒಮ್ಮೆ ಒತ್ತಿ ಹಣ ನಿಮ್ಮ ಬ್ಯಾಂಕ್​ ಖಾತೆಗೆ ಬರಲಿದೆ ಎಂದು ಹೇಳಿ ಲಿಂಕ್​ ಕಳುಹಿಸಿದ್ದಾನೆ. ಮಹೇಶ್​, ಲಿಂಕ್​ ಮೇಲೆ ಒತ್ತಿ ಅದರಲ್ಲಿ ಕೇಳಿದ ಕೆಲ ಮಾಹಿತಿಯನ್ನು ತುಂಬಿದಾಗ ಹಂತ ಹಂತವಾಗಿ 50 ಸಾವಿರ ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ. ಎಚ್ಚೆತ್ತ ಮಹೇಶ್‌, ಖಾತೆ ಬ್ಲಾಕ್​ ಮಾಡಿದ್ದಾರೆ. ವಂಚನೆಗೆ ಒಳಗಾಗಿರುವುದು ಖಚಿತವಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ವೈಟ್​ಫೀಲ್ಡ್​ ವಿಭಾಗ ಸಿಇಎನ್​ ಠಾಣೆ ಪೊಲೀಸರು ತಿಳಿಸಿದ್ದಾರೆ.

    ನಿಮ್ಮ ಮನೆ ಸಮೀಪ ಲಸಿಕಾ ಕೇಂದ್ರ ಎಲ್ಲಿದೆ ಎಂದು ತಿಳಿಸಲಿದೆ ವಾಟ್ಸ್‌ಆ್ಯಪ್‌: ಮಾಡಬೇಕಾದುದು ಇಷ್ಟು…

    ಎದುರು ಬದುರಾದ ದೋಣಿಗಳು: ಢಿಕ್ಕಿಯ ರಭಸಕ್ಕೆ 25 ಮಂದಿಯ ದುರಂತ ಸಾವು

    ಮಗನ ಭರ್ಜರಿ ಗೆಲುವಿನ ಬೆನ್ನಲ್ಲೇ ಕೊನೆಯುಸಿರೆಳೆದ ಅಪ್ಪ- ಕೇರಳ ಕಾಂಗ್ರೆಸ್‌ನ ಸ್ಥಾಪಕ ಅಧ್ಯಕ್ಷ ಪಿಳ್ಳೈ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts