More

    ಪತ್ನಿಯ ಕರೆತಂದರು, ಬನಿಯನ್ ಧರಿಸಿದರು, ಗುಟ್ಕಾ ಜಗಿದರು, ಸ್ಮೋಕ್​ ಮಾಡಿದರು… ವಕೀಲರ ಈ ಪರಿಗೆ ಕೋರ್ಟ್​ ಕೆಂಡಾಮಂಡಲ

    ನವದೆಹಲಿ: ಕರೊನಾ ವೈರಸ್​, ಲಾಕ್​ಡೌನ್​ ಅವಧಿಯಲ್ಲಿ ವರ್ಕ್​ ಫ್ರಂ ಹೋಂ ಎನ್ನುವುದು ಬಹುತೇಕಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಮನೆಯಲ್ಲಿ ಇದ್ದುಕೊಂಡು ಹಲವರು ವಿಡಿಯೋ ಕಾನ್ಫರೆನ್ಸ್​ಗಳಲ್ಲಿ ಮಾಡಿರುವ ಎಡವಟ್ಟುಗಳ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ.

    ಆದರೆ ಇಂಥ ಎಡವಟ್ಟು ಹಲವು ಕಡೆಗಳಲ್ಲಿ ವಕೀಲರಿಂದಲೂ ಆಗಿದ್ದು, ಸುಪ್ರೀಂಕೋರ್ಟ್​ ಸೇರಿದಂತೆ ಕೆಲವು ಹೈಕೋರ್ಟ್​ಗಳ ನ್ಯಾಯಮೂರ್ತಿಗಳು ಕಿಡಿ ಕಾರಿದ್ದಾರೆ.

    ಕರೊನಾ ವೈರಸ್​ ಹಿನ್ನೆಲೆಯಲ್ಲಿ, ಬಹುತೇಕ ಎಲ್ಲಾ ಹೈಕೋರ್ಟ್​ಗಳಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ತಾವು ವಕೀಲರು ಎನ್ನುವುದನ್ನೂ ಮರೆತು ಕೆಲವರು ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾರೆ ಎಂದಿರುವ ನ್ಯಾಯಮೂರ್ತಿಗಳು ವಕೀಲರ ಸ್ಥಾನಕ್ಕೆ ಮರ್ಯಾದೆ ಕೊಡಿ ಎಂದು ಬುದ್ಧಿಹೇಳಿದ್ದಾರೆ.

    ಒಡಿಶಾ ಹೈಕೋರ್ಟ್​ನಲ್ಲಿ ವಕೀಲರೊಬ್ಬರು ಕಾರು ಚಲಾಯಿಸಿಕೊಂಡು ವಾದ ಮಾಡುತ್ತಿದ್ದರು. ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಬಿಸ್ವಾನಾಥ್ ರಾಥ್ ಪ್ರಶ್ನಿಸಿದಾಗ, ವಕೀಲರು ನಾನು ಇನ್ನೊಂದು ಕಡೆ ತುರ್ತಾಗಿ ವಿಚಾರಣೆಗೆ ಹೋಗಬೇಕಿದೆ. ಮನೆಯಲ್ಲಿಯೇ ಕುಳಿತು ವಾದ ಮಂಡಿಸುತ್ತಿದ್ದರೆ, ಅಲ್ಲಿಗೆ ಹೋಗುವುದು ತಡವಾಗುತ್ತದೆ ಎಂದು ಉತ್ತರಿಸಿದರು!

    ಇದನ್ನೂ ಓದಿ: ಪ್ರತಿಯೊಬ್ಬರ ಜಾತಕ ಕಳ್ಳರ ಈ ಬರಹದಲ್ಲಿದೆ! ನಿಮ್ಮ ಮನೆಯಲ್ಲೂ ಕಂಡರೆ ಇರಲಿ ಎಚ್ಚರ…

    ಇನ್ನೊಂದು ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಹೊಸದಾಗಿ ಮದುವೆಯಾಗಿರುವ ವಕೀಲರೊಬ್ಬರು ತಮ್ಮ ಪತ್ನಿಯನ್ನು ಪಕ್ಕದಲ್ಲಿಯೇ ಕುಳ್ಳರಿಸಿಕೊಂಡಿದ್ದರು. ಇದು ಕೋರ್ಟ್​ಗೆ ಮಾಡುವ ಅವಮರ್ಯಾದೆ. ಪತ್ನಿಯನ್ನು ಕಳಿಸಿ ಎಂದು ನ್ಯಾಯಮೂರ್ತಿಗಳು ಹೇಳಿದರೂ ವಕೀಲರು ಕೇಳಲಿಲ್ಲ!

    ಇನ್ನೊಂದು ಪ್ರಕರಣದಲ್ಲಿ ವಕೀಲರು ಬನಿಯನ್​ನಲ್ಲಿಯೇ ಇದ್ದು ತೋಟದಲ್ಲಿ ಅಡ್ಡಾಡಿಕೊಂಡು ವಿಚಾರಣೆಗೆ ಹಾಜರಾಗಿದ್ದರು. ನ್ಯಾಯಮೂರ್ತಿಗಳು ಅವರನ್ನು ತರಾಟೆಗೆ ತೆಗೆದುಕೊಂಡಾಗ ಮನೆಯೊಳಕ್ಕೆ ನೆಟ್​ವರ್ಕ್​ ಸಿಗುತ್ತಿಲ್ಲ ಎಂದರು. ನಂತರ ಈ ವಕೀಲರು ಸುಳ್ಳು ಹೇಳುತ್ತಿರುವುದು ನ್ಯಾಯಮೂರ್ತಿಗಳ ಗಮನಕ್ಕೆ ಬಂದು ತರಾಟೆಗೆ ತೆಗೆದುಕೊಂಡರು. ಇನ್ನೊಬ್ಬ ವಕೀಲರು ವೀಡಿಯೊ ಕಾನ್ಫರೆನ್ಸ್‌ ನಡೆಯುತ್ತಿರುವಾಗಲೇ ಪ್ಲೇಟ್​ನಲ್ಲಿ ತಿಂಡಿ ಇಟ್ಟುಕೊಂಡು ತಿನ್ನುತ್ತಿದ್ದರು.

    ಹಿರಿಯ ವಕೀಲ ರಾಜೀವ್ ಧವನ್ ಕೂಡ ಧೂಮಪಾನ ಮಾಡುತ್ತಿದ್ದುದು ಹಾಗೂ ಇನ್ನೊಬ್ಬ ವಕೀಲ ಗುಟ್ಕಾ ತಿನ್ನುತ್ತ ವಿಚಾರಣೆಗೆ ಹಾಜರಾಗಿ ಸುಪ್ರೀಂಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿದ್ದರು.

    ಈ ಹಿಂದೆ ಟಿ-ಶರ್ಟ್‌ನಲ್ಲಿ ಹಾಸಿಗೆಯಲ್ಲಿ ಮಲಗಿದ್ದಾಗ ವಿಚಾರಣೆಗೆ ಹಾಜರಾಗಿದ್ದಕ್ಕಾಗಿ ವಕೀಲರನ್ನು ಸುಪ್ರೀಂಕೋರ್ಟ್​ ತರಾಟೆಗೆ ತೆಗೆದುಕೊಂಡಿದ್ದರಿಂದ ವಕೀಲರು ಬೇಷರತ್ತಾಗಿ ಕ್ಷಮೆಯಾಚಿಸಿದರು. ಕೆಲವು ಕಡೆ ಕಪ್ಪು ಸಮವಸ್ತ್ರ ಧರಿಸಿ ವಿಚಾರಣೆಗೆ ಬರುವುದರಿಂದ ವಿನಾಯಿತಿ ನೀಡಲಾಗಿತ್ತು. ಇದನ್ನೇ ಬಳಸಿಕೊಂಡ ವಕೀಲರು ಮನೆಯ ಡ್ರೆಸ್​ನಲ್ಲಿಯೇ ಇದ್ದರು. ಇದರಿಂದ ಕಿಡಿ ಕಾರಿದ್ದ ರಾಜಸ್ಥಾನ ಹೈಕೋರ್ಟ್​, ಸಮವಸ್ತ್ರದಲ್ಲಿ ಹಾಜರಾಗುವಂತೆ ಸೂಚನೆ ನೀಡಿತ್ತು.

    ಅಜ್ಜಂದಿರಿಗೆ ಗಾಳ ಹಾಕುತ್ತಾಳೆ ಸುಂದರಿ: ಎಂಟು ಮದುವೆಯಾಗಿ ಮಾಡಿದ್ದೇನು ಗೊತ್ತಾ?

    ರಕ್ಷಣಾ ತಂತ್ರಜ್ಞಾನದಲ್ಲಿ ಭಾರತದ ಮೈಲಿಗಲ್ಲು: ಆತ್ಮನಿರ್ಭರ​ ಭಾರತದತ್ತ ದಿಟ್ಟ ಹೆಜ್ಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts