More

    ಜಿಲ್ಲೆಯಲ್ಲಿ 23420 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥ

    ವಿಜಯವಾಣಿ ಸುದ್ದಿಜಾಲ ಗದಗ
    ಜಿಲ್ಲೆಯಲ್ಲಿ ಬುಧವಾರ ಜರುಗಿದ ಲೋಕ ಅದಾಲತ್​ನಲ್ಲಿ ಒಟ್ಟು 23420 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ಬಸವರಾಜ ಹೇಳಿದರು.
    ಗದಗ ಕೋರ್ಟ್​ ಸಭಾಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 2033 ಚಾಲ್ತಿ ಪ್ರಕರಣಗಳನ್ನು ಹಾಗೂ 21387 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥ ಪಡಿಸಲಾಗಿದೆ. ಲೋಕ್​ ಅದಾಲತ್​ ನಲ್ಲಿ 16 ದಂಪತಿಗಳನ್ನು ಒಂದು ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 15 ಬೆಂಚ್​ಗಳನ್ನು ರಚಿಸಿ ರಾಜೀ ಸಂಧಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದರಲ್ಲಿ ಒಟ್ಟು 23420 ಪ್ರಕರಣಗಳು ಇತ್ಯರ್ಥ ಆಗಿವೆ ಎಂದರು.
    ಇತ್ಯರ್ಥಗೊಂಡ ಪ್ರಕರಣಗಳಲ್ಲಿ 8 ಮೋಟಾರು ವಾಹನ ಅಪಘಾತ ಪ್ರಕರಣಗಳು, 105 ಚೆಕ್​ಬೌನ್ಸ್​ ಪ್ರಕರಣಗಳು, 40 ಕ್ರಿಮಿನಲ್​ ಕಂಪೌಂಡೆಬಲ್​ ಪ್ರಕರಣಗಳು, 307 ಅಸಲುದಾವೆ ಪ್ರಕರಣಗಳು, 374 ಬ್ಯಾಂಕ್​ ಹಾಗೂ ಹಣ ವಸೂಲಾತಿ ಪ್ರಕರಣಗಳು, 24 ವೈವಾಹಿಕ ಪ್ರಕರಣಗಳು, 37 ವಿದ್ಯುಚ್ಚಕ್ತಿ ಪ್ರಕರಣಗಳು ಸೇರಿದಂತೆ ಒಟ್ಟು 2033 ಚಾಲ್ತಿ ಪ್ರಕರಣಗಳನ್ನು ಮತ್ತು 48.13 ಕೋಟಿ ಪರಿಹಾರ ಪರಿಹಾರ ಒದಗಿಸುವುದರ ಮೂಲಕ ರಾಜೀ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
    ವ್ಯಾಜ್ಯಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಬ್ಯಾಂಕ್​ ಪ್ರಕರಣಗಳು, ಬಿಎಸ್​ಎನ್​ಎಲ್​, ಕಂದಾಯ ಅದಾಲತ್​ ಪ್ರಕರಣಗಳು ಸೇರಿದಂತೆ ಒಟ್ಟು 21387 ವ್ಯಾಜ್ಯಪೂರ್ವ ಪ್ರಕರಣಗಳನ್ನು 5.27 ಕೋಟಿ ಪರಿಹಾರ ಒದಗಿಸುವುದರ ಮೂಲಕ ಇತ್ಯರ್ಥ ಪಡಿಸಲಾಗಿದೆ ಎಂದು ಬಸವರಾಜ ತಿಳಿಸಿದರು.
    ನ್ಯಾಯಾಧೀಶರಾದ ಖಾದರಸಾಬ ಬೆನಕಟ್ಟಿ, ಪ್ರೀತಿ ಸದ್ಗುರು ಸದರಜೋಶಿ, ಪ್ರಕಾಶ ಕುರುಬೆಟ್​, ಅರುಣ ಚೌಗಲೆ, ಪುಷ್ಪಾ ಜೋಗೋಜಿ, ಬೀರಪ್ಪ ಕಾಂಬಳೆ, ಎಂ.ಐ. ಹಿರೇಮನಿಪಾಟೀಲ, ಎ. ಎಂ. ಹದ್ಲಿ, ಬಿ.ಎಚ್​. ಮಾಡಲಗೇರಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts