More

    60 ದೇಶಗಳಿಗೆ ಕರೊನಾ ಲಸಿಕೆ: ಜಗತ್ತಿನ ಕಣ್ಣು ಭಾರತದತ್ತ- ಪ್ರಧಾನಿಯನ್ನು ಹಾಡಿ ಹೊಗಳಿದ ವಿಶ್ವ ಆರೋಗ್ಯ ಸಂಸ್ಥೆ

    ಜೆನೆವಾ: ವಿಶ್ವದ 60ಕ್ಕೂ ಹೆಚ್ಚು ದೇಶಗಳೊಂದಿಗೆ ಭಾರತದ ಕೋವಿಡ್-19 ಲಸಿಕೆ ಹಂಚಿಕೊಳ್ಳುತ್ತಿರುವ ಭಾರತದತ್ತ ಇದೀಗ ಇಡೀ ವಿಶ್ವದ ಕಣ್ಣು ನೆಟ್ಟಿದೆ.
    ತಮ್ಮ ದೇಶಕ್ಕಷ್ಟೇ ಲಸಿಕೆಯನ್ನು ಸೀಮಿತ ಮಾಡಿಕೊಳ್ಳದೇ ಇಡೀ ವಿಶ್ವಕ್ಕೆ ಅದನ್ನು ಹಂಚುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ಹೆಜ್ಜೆಗೆ ಇದೀಗ ಕೆಲವರನ್ನು ಹೊರತುಪಡಿಸಿ ಇಡೀ ವಿಶ್ವವೇ ಕೊಂಡಾಡುತ್ತಿರುವುದು ಒಂದೆಡೆಯಾದರೆ, ಈ ಕಾರ್ಯಕ್ಕೆ ಇದೀಗ ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಶ್ಲಾಘನೆ ವ್ಯಕ್ತಪಡಿಸಿದೆ.

    ಲಸಿಕೆಯ ಕುರಿತಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆಯನ್ನು ನಾವು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಹೇಳಿದ್ದಾರೆ. ಉಡುಗೊರೆಯ ರೂಪದಲ್ಲಿ ಹಲವು ದೇಶಗಳಿಗೆ ಹಾಗೂ ವಾಣಿಜ್ಯ ರೂಪದಲ್ಲಿ ಇನ್ನು ಕೆಲವು ದೇಶಗಳಿಗೆ ಲಸಿಕೆಯನ್ನು ಕೊಟ್ಟಿರುವುದಕ್ಕೆ ಪ್ರಧಾನಿಯವರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

    ಯುನಿಸೆಫ್ ಸಹಯೋಗದೊಂದಿಗೆ ಭಾರತವು ಕಳೆದ ಬುಧವಾರ ಆರು ಲಕ್ಷ ಕೋವಾಕ್ಸ್ ಲಸಿಕೆಯನ್ನು ಘಾನಾಗೆ ರವಾನಿಸಿದೆ. ಇದೇ ರೀತಿ 92 ದೇಶಗಳಿಗೆ ಲಸಿಕೆ ರವಾನಿಸುವ ಗುರಿ ಹೊಂದಲಾಗಿದೆ.

    ಎಲ್ಲೆಲ್ಲಿ ಎಷ್ಟೆಷ್ಟು?
    ಇಲ್ಲಿಯವರೆಗೆ ಕೋವಿಡ್ ಲಸಿಕೆಯನ್ನು ಬಾಂಗ್ಲಾದೇಶ (20 ಲಕ್ಷ), ಮ್ಯಾನ್ಮಾರ್ (17 ಲಕ್ಷ), ನೇಪಾಳ (10 ಲಕ್ಷ), ಶ್ರೀಲಂಕಾ (5 ಲಕ್ಷ), ಅಫ್ಘಾನಿಸ್ತಾನ (5 ಲಕ್ಷ), ಭೂತಾನ್ (1.5 ಲಕ್ಷ), ಮಾಲ್ಡೀವ್ಸ್ (1 ಲಕ್ಷ), ಮಾರಿಷಸ್ (1 ಲಕ್ಷ), ಬಹ್ರೇನ್ (1 ಲಕ್ಷ), ಒಮಾನ್ (1 ಲಕ್ಷ), ಬಾರ್ಬಡೋಸ್(1 ಲಕ್ಷ), ಡೊಮಿನಿಕಾ(70 ಸಾವಿರ) ಹಾಗೂ ಸೀಶೆಲ್ಸ್ (50 ಸಾವಿರ) ಡೋಸ್‌ಗಳನ್ನು ಉಡುಗೊರೆ ರೂಪದಲ್ಲಿ ನೀಡಲಾಗಿದೆ.

    ವಾಣಿಜ್ಯ ಆಧಾರದ ಮೇಲೆ ಬ್ರೆಜಿಲ್(20 ಲಕ್ಷ), ಮೊರಾಕೊ (60 ಲಕ್ಷ), ಬಾಂಗ್ಲಾದೇಶ(50 ಲಕ್ಷ), ಮ್ಯಾನ್ಮಾರ್ (20 ಲಕ್ಷ), ದಕ್ಷಿಣ ಆಫ್ರಿಕಾ (10 ಲಕ್ಷ) , ಕುವೈತ್ (2 ಲಕ್ಷ), ಯುಎಇ (2 ಲಕ್ಷ).ಈಜಿಪ್ಟ್ (50 ಸಾವಿರ) ಮತ್ತು ಅಲ್ಜೀರಿಯಾ (50 ಸಾವಿರ) ಡೋಸ್‌ ಲಸಿಕೆ ನೀಡಲಾಗಿದೆ.
    ಟ್ವೀಟ್‌ನಲ್ಲಿ, 60ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಭಾರತ ಲಸಿಕೆಗಳನ್ನು ಪೂರೈಸುವಲ್ಲಿ ಸಹಾಯ ಮಾಡುತ್ತಿದೆ ಎಂದು ಹೇಳಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

    ಕರ್ನಾಟಕ ವೆಡ್ಸ್‌ ಕೇರಳ- ಮದುವೆಗೆ ಅಡ್ಡಿಬಂತು ಕರೊನಾ ರಿಪೋರ್ಟ್‌: ಮದುಮಕ್ಕಳು ಹೈರಾಣ

    ವಿದೇಶದಲ್ಲಿಯೂ ಪರಿಶುದ್ಧನಾಗಿದ್ದ ನಾನು ವಿವಾಹಿತೆಯ ಬಲೆಗೆ ಬಿದ್ದು ಏನೇನೋ ಮಾಡಿದೆ- ಹೇಗೆ ಹೊರಗೆ ಬರಲಿ?

    ಮ್ಯಾಟ್ರಿಮೋನಿಯಲ್‌ ಸೈಟ್‌ನಲ್ಲಿ ಯುವತಿಯರ ನೋಡಿ ಮದುವೆ ಪ್ರಪೋಸಲ್‌ ಇಡೋ ಯುವಕರೇ… ಎಚ್ಚರ ಎಚ್ಚರ…

    VIDEO: ಸಿಎಂ ನಿವಾಸದ ಮುಂದೆ ಘರ್ಜಿಸುತ್ತಿದೆ ಸಿಂಹ: ಇದು ಮೇಕ್‌ ಇನ್‌ ಇಂಡಿಯಾದ ಹೆಮ್ಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts