More

    ಕರೊನಾ ಪಾಸಿಟಿವ್​: ನಟಿ ದಿವ್ಯಾ ಸ್ಥಿತಿ ಗಂಭೀರ- ಐಸಿಯುನಲ್ಲಿ ಚಿಕಿತ್ಸೆ

    ಮುಂಬೈ: ಹಿಂದಿ ಕಿರುತೆರೆ ನಟಿ ದಿವ್ಯಾ ಭಟ್ನಾಗರ್​ ಅವರಿಗೆ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿದ್ದು, ಸ್ಥಿತಿ ಗಂಭೀರವಾಗಿದೆ. ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
    ಸ್ಟಾರ್ ಪ್ಲಸ್​ನ ‘ಯೆ ರಿಷ್ತಾ ಕ್ಯಾ ಕೆಹಲಾತಾ ಹೈ’ ಸೇರಿದಂತೆ ಹಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ದಿವ್ಯಾ ಮನೆಮಾತಾಗಿರುವ ನಟಿ.

    ಅವರ ಆಮ್ಲಜನಕದ ಮಟ್ಟವು ಕುಸಿಯುತ್ತಿದ್ದ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ ವೈದ್ಯರು. ಮಗಳಿಗೆ ಅನೇಕ ದಿನಗಳಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿತ್ತು. ಇದೀಗ ಕರೊನಾ ವೈರಸ್​ ತಗುಲಿದ ಮೇಲೆ ಪರಿಸ್ಥಿತಿ ಹದಗೆಟ್ಟಿದೆ ಎಂದು ಈಚೆಗಷ್ಟೇ ದಿವ್ಯಾ ತಾಯಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

    ಕರೊನಾ ಪಾಸಿಟಿವ್​: ನಟಿ ದಿವ್ಯಾ ಸ್ಥಿತಿ ಗಂಭೀರ- ಐಸಿಯುನಲ್ಲಿ ಚಿಕಿತ್ಸೆದಿವ್ಯಾ ದಂಪತಿ ನಡುವೆ ಜಗಳವಾಗಿದ್ದರಿಂದ ಮಗಳೊಂದಿಗೆ ದಿವ್ಯಾ ಒಂಟಿಯಾಗಿ ವಾಸಿಸುತ್ತಿದ್ದಾರೆ. ದೆಹಲಿಯಿಂದ ಮುಂಬೈಗೆ ಶಿಫ್ಟ್​ ಆಗಿದ್ದ ಅವರು, ನನ್ನ ಪತಿ ನನಗೆ ತೀರಾ ಹಿಂಸೆ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದರು.

    ಅನಾರೋಗ್ಯದ ಸಮಸ್ಯೆ ಕಾಡುತ್ತಿದ್ದುದರಿಂದ ಆಕ್ಸಿಮೀಟರ್​ ಖರೀದಿಸದ್ದು. ನಂತರ ಆಮ್ಲಜನಕ 71ಕ್ಕೆ ಇಳಿದಿರುವುದು ತಿಳಿದುಬಂದಿತ್ತು. ಇದರಿಂದ ಮಗಳು ತುಂಬಾ ಚಿಂತಿತಳಾಗಿದ್ದಳು. ಇದೀಗ ಕರೊನಾವೂ ಸೇರಿಕೊಂಡಿರುವ ಕಾರಣ, ಅವಳ ಪಾಡು ಹೇಳತೀರದು ಎಂದು ನಟಿಯ ತಾಯಿ ದುಃಖತೋಡಿಕೊಂಡಿದ್ದಾರೆ.

    ನಟಿ ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಅನೇಕ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಜತೆಗೆ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿಕೊಳ್ಳಿ ಎಂದು ನಟಿ ದಿವ್ಯಾ ಕೂಡ ಇನ್​ಸ್ಟಾಗ್ರಾಂನಲ್ಲಿ ಕೇಳಿಕೊಂಡಿದ್ದಾರೆ.

    ಇಲ್ಲಿದೆ ನೋಡಿ ಫೋಟೋ ಅಸಲಿಯತ್ತು! ಭಾರತ ಕಂಡ ಅತ್ಯಂತ ಕೆಟ್ಟ ರಾಜಕಾರಣಿ ಎನಿಸಿಕೊಂಡವರಾರು?

    ಅಮ್ಮಾ ಗ್ಯಾಂಗ್​ರೇಪ್​ ಆಯ್ತು ಎಂದ್ಳು 14ರ ಬಾಲೆ: ಸತ್ಯ ಗೊತ್ತಾಗಿ ಮೂರ್ಛೆಹೋದ ಪಾಲಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts