More

    ಹೈಕೋರ್ಟ್‌ ನ್ಯಾಯಮೂರ್ತಿ ಮನೆಗೆ 150 ಕಾಂಡೋಂ ಕಳುಹಿಸಿ ಮಹಿಳೆ ಪ್ರತಿಭಟನೆ!

    ಮುಂಬೈ: ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿತ ಪ್ರಕರಣಗಳಲ್ಲಿ ವಿವಾದಾತ್ಮಕ ತೀರ್ಪುಗಳನ್ನು ನೀಡಿ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಪುಷ್ಪಾ ಗನೆಡಿವಾಲಾ ಅವರ ಮನೆಗೆ ಮಹಿಳೆಯೊಬ್ಬರು ಕಾಂಡೋಂ ಕಳುಹಿಸಿರುವ ಘಟನೆ ನಡೆದಿದೆ.

    ರಾಜಕೀಯ ವಿಶ್ಲೇಷಕಿ ಎಂದು ತಮ್ಮನ್ನು ಹೇಳಿಕೊಂಡಿರುವ ದೇವಶ್ರೀ ತ್ರಿವೇದಿ 12 ಪ್ಯಾಕ್‌ನಲ್ಲಿ 150 ಕಾಂಡೋಂ ಕಳುಹಿಸಿದ್ದಾರೆ. ಈ ಮೂಲಕ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

    12 ವರ್ಷದ ಬಾಲಕಿಯ ಸ್ತನಗಳನ್ನು ಮುಟ್ಟಿದ್ದರಿಂದ ಆರೋಪಿಯೊಬ್ಬನಿಗೆ ಸೆಷನ್ಸ್‌ ಕೋರ್ಟ್‌ ಶಿಕ್ಷೆ ನೀಡಿತ್ತು. ಇನ್ನೊಂದು ಪ್ರಕರಣದಲ್ಲಿ ಬಾಲಕಿಯೊಬ್ಬ ಎದುರು ಪ್ಯಾಂಟ್‌ ಜಿಪ್‌ ತೆರೆದು ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯೊಬ್ಬನಿಗೆ ಶಿಕ್ಷೆಯಾಗಿತ್ತು. ಆದರೆ ಈ ಪ್ರಕರಣಗಳು ಹೈಕೋರ್ಟ್‌ ಮೆಟ್ಟಿಲೇರಿದ್ದಾಗ, ನ್ಯಾಯಮೂರ್ತಿ ಪುಷ್ಪಾ ಅವರು, ಬಾಲಕಿಯ ಬಟ್ಟೆಯ ಮೇಲಿನಿಂದ ಖಾಸಗಿ ಅಂಗ ಮುಟ್ಟಿದರೆ ಅದು ಪೋಕ್ಸೊ ಕಾಯ್ದೆ ಅಡಿ ಲೈಂಗಿಕ ದೌರ್ಜನ್ಯ ಆಗುವುದಿಲ್ಲ.

    ಲೈಂಗಿಕ ದೌರ್ಜನ್ಯ ಆಗಬೇಕಿದ್ದರೆ ಮೈಗೆ ಮೈ (ಸ್ಕಿನ್‌ ಟು ಸ್ಕಿನ್‌) ಸೋಕಬೇಕು ಎಂದಿದ್ದರು. ಇನ್ನೊಂದು ಪ್ರಕರಣದಲ್ಲಿ ಪ್ಯಾಂಟ್‌ ಜಿಪ್‌ ಬಿಚ್ಚಿದರೆ ಅದು ಲೈಂಗಿಕ ದೌರ್ಜನ್ಯ ಅಲ್ಲ ಎಂದಿದ್ದರು. ಈ ಎರಡೂ ಪ್ರಕರಣಗಳು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ತೀರ್ಪುಗಳನ್ನು ಇದಾಗಲೇ ಸುಪ್ರೀಂಕೋರ್ಟ್‌ ರದ್ದು ಮಾಡಿದೆ.

    ಚರ್ಮಕ್ಕೆ ಚರ್ಮ ತಾಗಿದಾಗ ಮಾತ್ರ ಲೈಂಗಿಕ ದೌರ್ಜನ್ಯ ಆಗುವುದಾದರೆ ಈ ಕಾಂಡೋಂ ಹಾಕಿಕೊಂಡರೆ ಚರ್ಮಕ್ಕೆ ಚರ್ಮ ತಾಗುವುದಿಲ್ಲ, ಹಾಗಿದ್ದರೆ ಅದು ಲೈಂಗಿಕ ದೌರ್ಜನ್ಯ ಆಗುವುದಿಲ್ಲವೆ ಎಂದು ಸೂಚ್ಯವಾಗಿ ಹೇಳಲು ಕಾಂಡೋಂ ಪಾರ್ಸೆಲ್‌ ಕಳುಹಿಸಲಾಗಿದೆ. ಈ ವಿವಾದಾತ್ಮಕ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಪುಷ್ಪಾ ಅವರಿಗೆ ಇದಾಗಲೇ ಸುಪ್ರೀಂಕೋರ್ಟ್‌ ಕೂಡ ಶಿಕ್ಷೆ ನೀಡಿದ್ದು, ಅವರನ್ನು ಕಾಯಂ ಮಾಡದೇ ಹೆಚ್ಚುವರಿ ನ್ಯಾಯಮೂರ್ತಿಯಾಗಿಯೇ ಮುಂದುವರೆಸಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

    ಏನೋ ಮಾಡಲು ಹೋಗಿ ಮಾಡಬಾರದ್ದನ್ನು ಮಾಡಿ ದಿಶಾಳನ್ನು ಸಂಕಷ್ಟಕ್ಕೆ ಸಿಲುಕಿಸಿದ ಗ್ರೇಟಾ ಮಾಡಿದಳೊಂದು ಟ್ವೀಟ್‌…

    ನಾನು ಮುಟ್ಟಿದರೆ ಪತ್ನಿ ಸಿಡಿಮಿಡಿಗೊಳ್ಳುತ್ತಾಳೆ- ಚಿಕ್ಕ ವಯಸ್ಸಿನಲ್ಲಿಯೇ ಆಸಕ್ತಿ ಕಳೆದುಕೊಳ್ಳಲು ಕಾರಣವೇನು?

    ಶಿಕ್ಷಕನ ಕಾಮಪುರಾಣ: ಮೊದಲು ಎರಡು ಮದುವೆಯಾದ, ಲಾಕ್‌ಡೌನ್‌ನಲ್ಲಿ ಇನ್ನಿಬ್ಬರಿಗೆ ತಾಳಿ ಕಟ್ಟಿದ…

    ಅಪಘಾತ ಮಾಡಿ ಶವವನ್ನು ಕಾರಿನ ಮೇಲೆ 10 ಕಿ.ಮೀ. ಒಯ್ದು ಬೀಸಾಕಿದ ಭೂಪ- ಸಿಸಿಟಿವಿಯಲ್ಲಿ ಸೆರೆ

    ಉನ್ನಾವ್‌- ದಲಿತ ಬಾಲಕಿಯರ ಸಾವಿನ ಕೇಸ್‌ಗೆ ಟ್ವಿಸ್ಟ್‌: ಕೊನೆಗೂ ಸತ್ಯ ಬಾಯಿ ಬಿಟ್ಟ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts