More

    ಲೈಂಗಿಕ ಪರಾಕಾಷ್ಠೆ ಎಂಬುದು ನಿಸ್ಸಂಶಯವಾಗಿ ಉತ್ತಮ: ಕಾಂಡೋಮ್ ಬಗ್ಗೆ ಮಾತಾಡಿ ಪೇಚಿಗೆ ಸಿಲುಕಿದ ನಿಧಿ!​

    ಹೈದರಾಬಾದ್​: ಟಾಲಿವುಡ್​ ಬೆಡಗಿ ಹಾಗೂ ತಮಿಳು ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿಂಬು ಪ್ರೀತಿಯ ಹುಡುಗಿ ನಿಧಿ ಅಗರವಾಲ್​ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಆಗಾಗ ತಮ್ಮ ಬೋಲ್ಡ್​ ಫೋಟೋಗಳನ್ನು ಹರಿಬಿಡುವ ನಿಧಿ, ಇದೀಗ ಕಾಂಡೋಮ್​ಗೆ ಸಂಬಂಧಿಸಿದ ಪ್ರಮೋಷನಲ್​ ವಿಡಿಯೋ ಮಾಡಿದ್ದು, ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದಾರೆ.

    ಪೇಯ್ಡ್​ ಪ್ರಮೋಷನ್​ ಭಾಗವಾಗಿ ತಮ್ಮ ಇನ್​​ಸ್ಟಾಗ್ರಾಂನಲ್ಲಿ ನಿಧಿ ಅವರು ಡುರೆಕ್ಸ್ ಕಾಂಡೋಮ್​ ಬಗ್ಗೆ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಡುರೆಕ್ಸ್​ ಇಂಟೆನ್ಸ್​ ಕಾಂಡೋಮ್ಸ್​ ಮೂಲಕ ಮಹಿಳೆಯರ ಪ್ರೋತ್ಸಾಹವನ್ನು ಮುನ್ನಲೆಗೆ ತರುತ್ತಿರುವ ಡುರೆಕ್ಸ್​ ಇಂಡಿಯಾವನ್ನು ನೋಡಿ ನನಗೆ ಖುಷಿಯಾಗುತ್ತಿದೆ ಎಂದು ನಿಧಿ ಬರೆದುಕೊಂಡಿದ್ದಾರೆ.

    ಲೈಂಗಿಕ ಪರಾಕಾಷ್ಠೆಯನ್ನು ಅನುಭವಿಸುವುದು ನಿಸ್ಸಂಶಯವಾಗಿ ಉತ್ತಮವಾಗಿದೆ ಆದರೆ, ಡ್ಯುರೆಕ್ಸ್ ಇಂಟೆನ್ಸ್ ಕಾಂಡೋಮ್‌ಗಳೊಂದಿಗೆ ಅದನ್ನು ತೀವ್ರಗೊಳಿಸುವ ಸಮಯ ಇದಾಗಿದೆ ಎಂದು ಇನ್​ಸ್ಟಾಗ್ರಾಂನಲ್ಲಿ ನಿಧಿ ಬರೆದುಕೊಂಡಿದ್ದಾರೆ.

    ನಿಧಿ ಅವರ ಪ್ರಮೋಷನ್​ ವಿಡಿಯೋ ವೈರಲ್​ ಆಗಿದ್ದು, ಯಾವುದೇ ಮುಜುಗರ ಪಟ್ಟುಕೊಳ್ಳದೇ ಸಾಮಾಜಿಕ ಸಂದೇಶ ನೀಡಿದ ನಿಧಿ ಅವರನ್ನು ಕೆಲ ನೆಟ್ಟಿಗರ ಮೆಚ್ಚಿಕೊಂಡರೆ, ಇನ್ನು ಕೆಲವರು ಸೂಕ್ಷ್ಮತೆಯನ್ನು ಅರಿಯದೆ ಮನಸೋ ಇಚ್ಛೆ ಕಾಮೆಂಟ್​ ಮೂಲಕ ಟೀಕಿಸುತ್ತಿದ್ದಾರೆ.

    ಮೊದಲು ನೀವು ಇದನ್ನು ಬಳಸಿದ್ದೀರಾ? ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದರೆ, ನಿಮ್ಮ ಅನುಭವ ಹೇಳಿ ಎಂದು ಇನ್ನೊಬ್ಬ ನೆಟ್ಟಿಗೆ ಕೇಳಿದ್ದಾರೆ. ಮತ್ತೊಬ್ಬ ನೆಟ್ಟಿಗ ನೀವು ಪ್ರಯತ್ನ ಮಾಡಿದ್ದೀರಾ ಎಂದಿದ್ದಾನೆ. ಹೀಗೆ ಸಾಕಷ್ಟು ಮಂದಿ ಅಸಭ್ಯ ಕಾಮೆಂಟ್​ಗಳನ್ನು ಮಾಡುತ್ತಿದ್ದು, ನಿಧಿ ಅವರಿಗೆ ಇರುಸು ಮುರುಸಾಗಿದೆ.

    ಇನ್ನು ಸಿನಿಮಾ ವಿಚಾರಕ್ಕೆ ಬರುವುದಾರೆ, ಸೂಪರ್​ ಸ್ಟಾರ್​ ಪವನ್​ ಕಲ್ಯಾಣ್​ ಅವರ ‘ಹರಿ ಹರ ವೀರ ಮಲ್ಲು’ ಹೆಸರಿನ ಬಿಗ್​ ಬಜೆಟ್​ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್​)

    ತಮಿಳು ಚಿತ್ರರಂಗದ ಬ್ಯಾಡ್​ಬಾಯ್ ಮತ್ತೆ ಪ್ರೀತಿಯಲ್ಲಿ? ಹೊಸ ಲವರ್ ಜತೆ ಒಂದೇ ಮನೆಯಲ್ಲಿ ಸಿಂಬು ಸಂಸಾರ?

    ಕಾರಿಗೆ ಲಾರಿ ಡಿಕ್ಕಿ: ಒಂಚೂರು ಗಾಯವಿಲ್ಲದೆ ಸಾವಿನಿಂದ ಬಚಾವ್​ ಆದ ನಟ ಗಿನ್ನೆಸ್ಸ್​ ಪಕ್ರು ಅವರ ಮನವಿ ಇದು!

    ಒಂದೇ ಉಸಿರಲಿ ಹನುಮಾನ್ ಚಾಲೀಸಾ ಹಾಡಿದ ಶಂಕರ್ ಮಹಾದೇವನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts