More

    ಯೋಧನಿಗೊಂದು ಹೃದಯಸ್ಪರ್ಶಿ ಸ್ವಾಗತ- ಹೂವಿನಿಂದ ಅಲಂಕೃತಗೊಂಡ ಚಿಕ್ಕಮಗಳೂರಿನ ಬಿದರೆ ಗ್ರಾಮ

    ಚಿಕ್ಕಮಗಳೂರು: ಊರ ಮಗ ಒಮ್ಮೆ ಸೇನೆಗೆ ಭರ್ತಿಯಾದನೆಂದರೆ ಆ ಕುಟುಂಬದವರಿಗೆ ಮಾತ್ರವಲ್ಲದೇ, ಇಡೀ ಗ್ರಾಮದ ಜನರಿಗೇ ಏನೋ ಒಂಥರಾ ಆತಂಕ. ಯಾವಾಗ ಏನಾಗುವುದೋ ಎನ್ನುವ ಭಯ. ಆದರೆ ಸುದೀರ್ಘ ಅವಧಿಯ ಸೇವೆ ಮುಗಿಸಿ ಯಾವುದೇ ಅಪಾಯವಿಲ್ಲದೇ ಊರಿಗೆ ಮರಳಿದರೆ ಹೇಗಿರುತ್ತೆ?

    ದೊಡ್ಡ ದೊಡ್ಡ ಊರುಗಳಲ್ಲಿ ಯಾವುದೇ ವಿಶೇಷತೆ ಇಲ್ಲದೇ ಹೋಗಬಹುದು. ಆದರೆ ಈ ಗ್ರಾಮದಲ್ಲಿ ಮಾತ್ರ ಅಕ್ಷರಶಃ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇಡೀ ಗ್ರಾಮಕ್ಕೆ ಗ್ರಾಮವೇ ಮದುಮಗಳಂತೆ ಶೃಂಗಾರಗೊಂಡಿತ್ತು. ಇದಕ್ಕೆ ಕಾರಣ, 21 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಯೋಧನೊಬ್ಬ ಮರಳು ಮನೆಗೆ ಬರುತ್ತಿರುವುದು.

    ಇಂಥದ್ದೊಂದು ಅಪೂರ್ವ ದೃಶ್ಯಕ್ಕೆ ಸಾಕ್ಷಿಯಾದದ್ದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮ. ಈ ಗ್ರಾಮದ ಚಂದ್ರಶೇಖರ್ 21 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿ, ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತಿ ಹೊಂದಿ ಮನೆಗೆ ಮರಳಿದಿದ್ದಾರೆ. ಕಾಶ್ಮೀರ, ಪಂಜಾಬ್, ಪಶ್ಚಿಮ ಬಂಗಾಳ, ಪಾಕಿಸ್ತಾನದ ಗಡಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿರುವ ಕೀರ್ತಿ ಇವರದ್ದು.

    ಇವರು ಬರುತ್ತಿರುವುದು ತಿಳಿಯುತ್ತಿದ್ದಂತೆಯೇ ಇಡೀ ಗ್ರಾಮವನ್ನು ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಚಂದ್ರಶೇಖರ್​ ಅವರು ಗ್ರಾಮದ ದ್ವಾರಬಾಗಿಲಿಗೆ ಬರುತ್ತಿದ್ದಂತೆ ಹೂವಿನ ಹಾರ ಹಾಕಿ ತಬ್ಬಿ ಮುದ್ದಾಡಿದ್ದಾರೆ. ತೆರೆದ ವಾಹನದಲ್ಲಿ ಊರಿನ ತುಂಬಾ ಮೆರವಣಿಗೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಾಜರು ಇದ್ದ ಶಾಲಾ ಮಕ್ಕಳು ಕೂಡ ಅವರಿಗೆ ಜಯಕಾರ ಹಾಕುತ್ತಾ ಸ್ವಾಗತ ಕೋರಿದ್ದಾರೆ.

    ತಮ್ಮ 21 ವರ್ಷಗಳ ಅನುಭವದ ರೋಚಕ ಘಟನೆಗಳನ್ನು ಇದೇ ವೇಳೆ ಯೋಧ ಚಂದ್ರಶೇಖರ್​ ಹಂಚಿಕೊಂಡರು. ಒಮ್ಮೆ ಸತತ ಮೂರು ದಿನ ಅನ್ನ ಆಹಾರ ಇಲ್ಲದೇ ನೀರು ಕುಡಿದು ಬದುಕಿದ್ದನ್ನೂ ಹೇಳಿದರು. ಈಗ ನಾನು ಸೇನೆಯಿಂದ ನಿವೃತ್ತಿ ಹೊಂದಿರುವ ಅಷ್ಟೇ. ಆದರೆ ಮುಂದೆಯೇ ಯೋಧನಾಗಿರುವೆ. ಗ್ರಾಮದ ಯಾರೇ ಬಂದರೂ ಅವರಿಗೆ ತರಬೇತಿ ಕೊಡಲೂ ನಾನು ಸಿದ್ಧ ಎಂದಿದ್ದಾರೆ.

    ಅತ್ತೆ ಬ್ಲ್ಯಾಕ್​ಮೇಲ್​ ಮಾಡಿ ಮೃತ ಮಗನ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ- ಅವರಿಗೂ ಕೊಡಬೇಕಾ?

    ಕೆಂಪಾದವೋ ಎಲ್ಲಾ ಕೆಂಪಾದವೋ! ರಸ್ತೆಯ ತುಂಬೆಲ್ಲಾ ರಕ್ತದ ಬಣ್ಣದ ನೀರು- ಜನ ಕಂಗಾಲು

    ಮಗನ ಡೆತ್​ನೋಟ್​ ನೋಡಿ ಪಾಪಪ್ರಜ್ಞೆಯಿಂದ ಬಳಲುತ್ತಿರುವೆ- ನಾನು ತಪ್ಪು ಮಾಡಿಬಿಟ್ನಾ?

    ಪತ್ನಿಯ ಎಲ್​ಐಸಿ ಪಾಲಿಸಿ ಮೇಲೆ ಕಣ್ಣು ಹಾಕಿದ ಚಾರ್ಟೆರ್ಡ್ ಅಕೌಂಟೆಂಟ್ ಪತಿ ಮಾಡಿದ್ದೇನು ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts