More

    ಶ್ರೇಷ್ಠ ಸಂವಿಧಾನ ನೀಡಿದ ಡಾ.ಅಂಬೇಡ್ಕರ್

    ಬಸವಕಲ್ಯಾಣ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ. ಸದೃಢ ಭಾರತಕ್ಕಾಗಿ ಸಂವಿಧಾನದ ಕುರಿತು ಪ್ರತಿಯೊಬ್ಬರಲ್ಲಿ ಅರಿವು ಮೂಡಿಸುವುದು ಅವಶ್ಯಕವಾಗಿದೆ ಸಹಾಯಕ ಆಯುಕ್ತ ಪ್ರಕಾಶ ಕುದರಿ ಹೇಳಿದರು.

    ಖೇರ್ಡಾ(ಬಿ)ಗೆ ಶನಿವಾರ ಸಂಜೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ದೂರಿ ಸ್ವಾಗತ ನೀಡಿ ಮಾತನಾಡಿದ ಅವರು, ಸಂವಿಧಾನ ಕುರಿತು ಜಾಗೃತಿ ಮೂಡಿಸುವುದೇ ಕಾರ್ಯಕ್ರಮದ ಮೂಲ ಆಶಯವಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

    ಹುಮನಾಬಾದ್ ತಾಲೂಕಿನಿಂದ ಬಸವಕಲ್ಯಾಣ ತಾಲೂಕಿನ ಖೇಡಾ (ಬಿ) ಗ್ರಾಮಕ್ಕೆ ಆಗಮಿಸಿದ ಜಾಥಾಕ್ಕೆ ತಾಲೂಕು ಆಡಳಿತದಿಂದ ಸಹಾಯಕ ಆಯುಕ್ತ ಪ್ರಕಾಶ ಕುದರಿ ನೇತೃತ್ವದಲ್ಲಿ ತಹಸೀಲ್ದಾರ ಶಾಂತಗೌಡ ಬಿರಾದಾರ, ತಾಪಂ ಇಒ ಮಹಾದೇವ ಬಾಬಳಗಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿಲೀಪಕುಮಾರ ಉತ್ತಮ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪ್ರಮುಖರು ಹಾಗೂ ಗ್ರಾಮಸ್ಥರು ಸ್ವಾಗತಿಸಿ ಬರಮಾಡಿಕೊಂಡರು.

    ಗ್ರಾಪಂ ಅಧ್ಯಕ್ಷೆ ಸವಿತಾ ಜೈಭೀಮ ಕಾಂಬಳೆ. ಮುಖಂಡ ಮನೋಹರ್ ಮೈಸೆ, ತಾಲೂಕು ಮಟ್ಟದ ಅಧಿಕಾರಿಗಳಾದ ಶ್ರೀಶೈಲ ಕಾಚಾಪುರ, ಮಾರ್ಥಂಡ ಮಚಕುರಿ, ಕರಿಯಪ್ಪ, ಗೌತಮ ಸಿಂಧೆ, ಡಾ.ರವೀಂದ್ರ, ವಿ.ಜಿ. ಹಿರೇಗೌಡ ಇತರರಿದ್ದರು.

    ಅದ್ದೂರಿ ಸ್ವಾಗತ: ತಾಲೂಕಿನ ವಿವಿಧ ಗ್ರಾಮಗಳಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ದೂರಿಯ ಸ್ವಾಗತ ನೀಡಿ ಬರ ಮಾಡಿಕೊಳ್ಳಲಾಯಿತು. ತಾಲೂಕಿನ ಕಲಖೋರಾ, ಚಿಕನಾಗಾಂವ, ಎಕಲೂರ, ಮುಡಬಿ, ಹಾರಕೂಡ, ಭೋಸ್ಗಾ, ಕೋಹಿನೂರ, ಲಾಡವಂತಿ, ಬೆಟಗೇರಾ, ಉಚಳಂಬ ಗ್ರಾಮಗಳಲ್ಲಿ ಭಾನುವಾರ ಅದ್ದೂರಿಯ ಸ್ವಾಗತ ನೀಡಲಾಯಿತು. ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts