More

    ಕ್ರಷರ್‌ ಜಿಲೆಟಿನ್‌ ಸ್ಫೋಟ: ಪರಾರಿಯಾಗಿದ್ದ ಬಿಜೆಪಿ ಮುಖಂಡ ಸಿಕ್ಕಿಬಿದ್ದ – ಇನ್ಸ್‌ಪೆಕ್ಟರ್‌, ಎಸ್‌ಐ ಅಮಾನತು

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಹಿರೇನಸಗವಲ್ಲಿಯ ಭ್ರಮರವಾಸಿನಿ ಕ್ರಷರ್ ಬಳಿ ಜಿಲೆಟಿನ್​ ಸ್ಫೋಟ ದುರಂತದ ನಂತರ ತಲೆ ಮರೆಸಿಕೊಂಡಿದ್ದ ಕ್ರಷರ್‌ ಮಾಲೀಕ, ಬಿಜೆಪಿಯ ಮುಖಂಡ ನಾಗರಾಜು ರೆಡ್ಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದಾಗಲೇ ಇನ್ನೋರ್ವ ಮಾಲೀಕ ರಾಘವೇಂದ್ರ ರೆಡ್ಡಿಯನ್ನು ಬಂಧಿಸಲಾಗಿದೆ.

    ಸ್ಫೋಟದ ಬಳಿಕ ಇವರು ಯಾರ ಕಣ್ಣಿಗೂ ಕಾಣದೇ ತಪ್ಪಿಸಿಕೊಂಡಿದ್ದರು. ಇದೀಗ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ಘಟನೆಗೆ ಸಂಬಂಧಿಸಿದಂತೆ ರೆಡ್ಡಿಯವರಿಗೆ ಸ್ಫೋಟಕಗಳನ್ನ ಪೂರೈಸುತ್ತಿದ್ದ ಗಣೇಶ್ ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಇಂಥ ಒಂದು ದುರ್ಘಟನೆ ಸಂಭವಿಸಿಲು ಪೊಲೀಸ್‌ ಅಧಿಕಾರಿಗಳ ವೈಫಲ್ಯವೂ ಕಾರಣವಾಗಿದ್ದಕ್ಕೆ ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಗುಡಿಬಂಡೆ ಎಸ್‍ಐ ಗೋಪಾಲ್ ರೆಡ್ಡಿ, ಇನ್‍ಸ್ಪೆಕ್ಟರ್ ಮಂಜುನಾಥ್‍ರನ್ನು ಅಮಾನತು ಮಾಡಲಾಗಿದೆ.

    ಹಿರೇನಸಗವಲ್ಲಿ ಒಂದೇ ಗ್ರಾಮದಲ್ಲಿ ಸುಮಾರು 250-300 ಎಕರೆ ಜಾಗದಲ್ಲಿ ಬರೋಬ್ಬರಿ 53 ಕ್ವಾರಿಗಳು ಇವೆ. ಇಲ್ಲಿನ ಬೆಟ್ಟವನ್ನು ಕ್ವಾರಿಗಳಾಗಿ ಮಾರ್ಪಾಡು ಮಾಡಲಾಗಿದ್ದು, ಸ್ಫೋಟಕ ಬಳಸಿ ಬೆಟ್ಟವನ್ನೆಲ್ಲ ಪುಡಿಪುಡಿ ಮಾಡಲಾಗಿದೆ. ಈ ಪೈಕಿ ಎಷ್ಟು ಕ್ವಾರಿಗಳಿಗೆ ಅನುಮತಿ ಇದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

    ಇದೇ 22ರ ಮಧ್ಯರಾತ್ರಿ ನಡೆದಿರುವ ಈ ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಘಟನೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ,ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

    ತಿರುಮಲ ವೆಂಕಟೇಶನಿಗೆ ಭಕ್ತನಿಂದ ಮೂರೂವರೆ ಕೆ.ಜಿ ತೂಕದ ಚಿನ್ನದ ಶಂಖ-ಚಕ್ರ: ಇದರ ಬೆಲೆ ಊಹಿಸುವಿರಾ?

    ಕ್ರಯ ಪತ್ರ ನೋಂದಾಯಿತವಾಗಿದ್ದರೆ ಕೇಸ್‌ ಹಾಕಿದರೆ ಯಾವುದೇ ರೀತಿಯಲ್ಲಿ ಯೋಜನವಿಲ್ಲ

    ತಿಮ್ಮಪ್ಪನ ದರ್ಶನ ಪಡೆದು ಬರುತ್ತಿದ್ದ ವೇಳೆ ಹಾವೇರಿಯಲ್ಲಿ ಅಪಘಾತ: ರಕ್ಷಣಾಸಿಬ್ಬಂದಿ ಹರಸಾಹಸ

    VIDEO: ಹೊಡಿಮಗ… ಹೊಡಿಮಗ… ಗ್ರಾಹಕರಿಗಾಗಿ ಚಾಟ್‌ ಅಂಗಡಿಯ ಮಾಲೀಕರ ಫಿಲ್ಮಿಸ್ಟೈಲ್‌ ಫೈಟಿಂಗ್‌

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts