More

    ಚೆಕ್​ಬೌನ್ಸ್​ ಪ್ರಕರಣ: ಖ್ಯಾತ ನಟಿ ರಾಧಿಕಾ ದಂಪತಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ

    ಚೆನ್ನೈ: ಚೆಕ್​ ಬೌನ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ನಟರಾದ ರಾಧಿಕಾ ಶರತ್​ಕುಮಾರ್​ ಹಾಗೂ ಅವರ ಪತಿ ಶರತ್‌ಕುಮಾರ್ ಅವರಿಗೆ ಇಲ್ಲಿಯ ವಿಶೇಷ ಕೋರ್ಟ್​ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಇವರ ಜತೆ ಮಲಯಾಳದ ಚಿತ್ರನಿರ್ಮಾಪಕ ಲಿಸ್ಟನ್​ ಸ್ಟೆಫನ್​ ಅವರಿಗೂ ಶಿಕ್ಷೆ ವಿಧಿಸಲಾಗಿದೆ. 2014ರಲ್ಲಿ ಇವರೆಲ್ಲರೂ ಸೇರಿ ಚಿತ್ರನಿರ್ಮಾಣಕ್ಕೆ ಸಂಬಂಧಿಸಿದಂತೆ ಹಣಕಾಸು ಕಂಪೆನಿಯೊಂದರಿಂದ ಎರಡು ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದರು. ಈ ಸಾಲದಲ್ಲಿ ಎರಡು ಚಲನಚಿತ್ರಗಳನ್ನು ನಿರ್ಮಿಸುವುದಾಗಿ ಹೇಳಿದ್ದರು.

    Radhika Sarathkumar movies, filmography, biography and songs - Cinestaan.com

    ಸಹನಟನಾಗಿರುವ ಮ್ಯಾಜಿಕ್ ಫ್ರೇಮ್ಸ್, ವಿಕ್ರಮ್ ಪ್ರಭು ಮತ್ತು ಕೀರ್ತಿ ಸುರೇಶ್ ಅವರೊಂದಿಗೆ 2014 ರಲ್ಲಿ ಚಿತ್ರ ಮಾಡಲು ಯೋಜಿಸಿದ್ದು ಅವರು ರೇಡಿಯನ್ಸ್‌ನಿಂದ 1.5 ಕೋಟಿ ರೂ ಹಣ ಪಡೆದುಕೊಂಡಿದ್ದರು, ಮಾರ್ಚ್ 2015 ರೊಳಗೆ ಹಣವನ್ನು ಹಿಂದಿರುಗಿಸುವುದಾಗಿ ಅವರು ಹೇಳಿದರು. ಆದರೆ ಹಣವನ್ನು ಹಿಂದಿರುಗಿಸಲಿಲ್ಲ. ಅವರು ಕೊಟ್ಟಿದ್ದ ಚೆಕ್​ ಬೌನ್ಸ್​ ಆಗಿತ್ತು.

    ಈ ಹಿನ್ನೆಲೆಯಲ್ಲಿ ನಟ ದಂಪತಿ ಹಾಗೂ ನಿರ್ಮಾಪಕನ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಾಗಿತ್ತು. ಮದ್ರಾಸ್ ಹೈಕೋರ್ಟ್​ ಇವರ ವಿರುದ್ಧ ಇದ್ದ ಕ್ರಿಮಿನಲ್​ ಕೇಸ್​ ಅನ್ನು ರದ್ದು ಮಾಡಿತ್ತು. ಆದರೆ ಈ ಪ್ರಕರಣದ ವಿಚಾರಣೆಯನ್ನು ನಡೆಸುವಂತೆ ವಿಶೇಷ ಕೋರ್ಟ್​ಗೆ ಆದೇಶಿಸಿತ್ತು. ಇದೀಗ ವಿಚಾರಣೆ ಸಂಪೂರ್ಣಗೊಂಡಿದ್ದು, ಒಂದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

    ₹26 ಸಾವಿರ ಮಾಸ್ಕ್​ ಧರಿಸಿ ಸ್ಪೆಷಲ್​ ಮೆಸೇಜ್​ ನೀಡಿದ್ರು ಕರೀನಾ… ಮಾಸ್ಕ್​ ಸೋಲ್ಡ್​ ಔಟ್​!

    ನಾನು ಇಷ್ಟಪಟ್ಟಾಕೆ ಬೇರೆ ಮದ್ವೆಯಾಗಲಿದ್ದು, ನನ್ನ ಜತೆ ಸೇರಲೂ ಸಿದ್ಧಳಿದ್ದಾಳೆ- ನಾನು ಒಪ್ಪಿದರೆ ತಪ್ಪಾ?

    ಕಾರಿನಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಮಾಸ್ಕ್​ ಬೇಕಾ? ಹೈಕೋರ್ಟ್​ ಏನು ಹೇಳಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts