More

    ಹಿಟ್ ಆಂಡ್ ರನ್ ಶಿಕ್ಷೆ ಪ್ರಮಾಣ ಹೆಚ್ಚಳಕ್ಕೆ ಖಂಡನೆ

    ಲಾರಿ ಚಾಲಕರು, ಕ್ಲೀನರ್‌ಗಳ ಸಾಂಕೇತಿಕ ಪ್ರತಿಭಟನೆ 5ಕ್ಕೆ ಪ್ರಧಾನಿ, ಕೇಂದ್ರ ಗೃಹ ಸಚಿವರಿಗೆ ಮನವಿ
    ಹರಿಹರ: ಸಂಸತ್‌ನಲ್ಲಿ ಇತ್ತೀಚೆಗೆ ಅಂಗೀಕರಿಸಿದ ಭಾರತೀಯ ನ್ಯಾಯ ಸಂಹಿತೆಯಲ್ಲಿ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಜೈಲು ಶಿಕ್ಷೆ ಪ್ರಮಾಣ ಹೆಚ್ಚಳ ಮಾಡಿರುವ ಕ್ರಮ ಖಂಡಿಸಿ ನಗರದ ತುಂಗಭದ್ರಾ ಲಾರಿ ಚಾಲಕರ ಮತ್ತು ಕ್ಲೀನರ್‌ಗಳ ಶ್ರೇಯೋಭಿವೃದ್ಧಿ ಸಂಘದವರು ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

    ನಗರದ ಎಪಿಎಂಸಿ ಆವರಣದಲ್ಲಿ ಒಂದು ದಿನದ ಮಟ್ಟಿಗೆ ಲಾರಿಗಳನ್ನು ನಿಲುಗಡೆ ಮಾಡಿ, ಲಾರಿ ಚಾಲಕರು ಹಾಗೂ ಕ್ಲೀನರ್‌ಗಳು ಸಾಂಕೇತಿಕವಾಗಿ ಪ್ರತಿಭಟಸಿ, ಹೊಸ ಕಾನೂನು ಚಾಲಕರನ್ನು ಕರ್ತವ್ಯದಿಂದ ನಿರುತ್ಸಾಹಗೊಳಿಸುವಂತಿದೆ. ಹೊಸಬರು ವಾಹನ ಚಾಲನಾ ವೃತ್ತಿಗೆ ಬರದಂತೆ ತಡೆಯುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈವರೆಗೆ ಅಪಘಾತದ ಬಳಿಕ ಚಾಲಕರು ಪರಾರಿಯಾಗುವ ಅಥವಾ ಮಾರಣಾಂತಿಕ ಅಪಘಾತವನ್ನು ಪೊಲೀಸರಿಗೆ ವರದಿ ಮಾಡದಿದ್ದಲ್ಲಿ ಅದನ್ನು ಹಿಟ್ ಆಂಡ್ ರನ್ ಎಂದು ಪರಿಗಣಿಸಿ ಐಪಿಸಿ ಸೆಕ್ಷನ್ 304 ಎ ಅಡಿ ಎರಡು ವರ್ಷಗಳವರೆಗೆ ಮಾತ್ರ ಜೈಲು ಶಿಕ್ಷೆ ವಿಧಿಸಬಹುದಾಗಿತ್ತು. ಆದರೆ, ಹೊಸ ಕ್ರಿಮಿನಲ್ ಕಾನೂನಿನಡಿ ಶಿಕ್ಷೆಯನ್ನು 10 ವರ್ಷಗಳಿಗೆ ಹೆಚ್ಚಿಸಿರುವುದು ಚಾಲಕರಿಗೆ ಮಾರಕವಾಗಿದೆ. ಹಳೇ ಕಾನೂನನ್ನೇ ಮುಂದುವರಿಸಲು ಕೋರಿ ಜ.5ರಂದು ಪ್ರಧಾನ ಮಂತ್ರಿ ಮತ್ತು ಕೇಂದ್ರ ಗೃಹ ಸಚಿವರಿಗೆ ಸಲ್ಲಿಸಲಾಗುವುದು ಎಂದು ಹೇಳಿದರು.

    ಸಂಘದ ಗೌರವಾಧ್ಯಕ್ಷ ರಾಜು ಬಸಪ್ಪ, ಅಧ್ಯಕ್ಷ ಸೈಯದ್ ಯೂಸುಫ್, ಕಾರ್ಯದರ್ಶಿ ಜಂಬಯ್ಯ ಮಡಿವಾಳ, ಉಪಾಧ್ಯಕ್ಷ ಫಯಾಜ್ ಅಹಮದ್, ಸಹ ಕಾರ್ಯದರ್ಶಿ ಜಕಾವುಲ್ಲ, ಸದಸ್ಯರಾದ ಇಮ್ರಾನ್, ನಿಂಗಪ್ಪ, ರಾಘವೇಂದ್ರ, ಷಡಕಪ್ಪ, ಅಬ್ದುಲ್ ಖಾಲಿದ್, ಮಹಮ್ಮದ್ ರಫೀಕ್, ನಜೀರ್, ನಸರುಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts