More

    VIDEO: ಪತ್ನಿಯ ಅವಮಾನ ಸಹಿಸಲ್ಲ- ಸಿಎಂ ಆಗುವವರೆಗೂ ವಿಧಾನಸಭೆಗೆ ಕಾಲಿಡಲ್ಲ ಎಂದು ಕಣ್ಣೀರು ಹಾಕಿದ ಚಂದ್ರಬಾಬು ನಾಯ್ಡು

    ಅಮರಾವತಿ: ಅಮರಾವತಿ: ಕಳೆದ ಕೆಲ ತಿಂಗಳುಗಳಿಂದ ತಮ್ಮ ಹಾಗೂ ಕುಟುಂಬದ ಮೇಲೆ ಆಗುತ್ತಿರುವ ತೀವ್ರ ವಾಗ್ದಾಳಿಯಿಂದ ಅಪಮಾನಗೊಂಡಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಭಾರಿ ಶಪಥವೊಂದನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಆಗುವವರೆಗೂ ನಾನು ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

    ವಿಧಾನಸಭೆಯಲ್ಲಿ ತಮ್ಮ ಪತ್ನಿ ಭುವನೇಶ್ವರಿಗೆ ವಿಧಾನಸಭೆಯಲ್ಲಿ ತೀವ್ರವಾಗಿ ಅವಮಾನ ಮಾಡಲಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಇಷ್ಟೊಂದು ನೋವು ಹಿಂದೆಂದೂ ಅನುಭವಿಸಿಲ್ಲ. ನನ್ನ ಜೀವನದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲು. ವಿಧಾನಸಭೆ ಆರಂಭವಾದಾಗಿನಿಂದಲೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರು ನಿಂದಿಸುತ್ತಲೇ ಬಂದಿದ್ದಾರೆ. ಅವರು ನನ್ನ ಕುಟುಂಬದವರನ್ನೂ ಬಿಡಲಿಲ್ಲ. ಇದನ್ನು ನಾನು ಸಹಿಸಲು ಸಾಧ್ಯವೇ ಇಲ್ಲ. ಅಧಿಕಾರ ಸಿಗುವವರೆಗೂ ನಾನಿಲ್ಲಿ ಕಾಲಿಡಲ್ಲ’ ಎಂದು ನಾಯ್ಡು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸುತ್ತಾ ಗಳಗಳನೆ ಅತ್ತಿದ್ದಾರೆ.

    ‘ಸಚಿವ ಕೊಡಲಿ ನಾನಿ ಚಂದ್ರಬಾಬು ಲುಚ್ಚಾ ಎನ್ನುತ್ತಾರೆ, ಸಚಿವ ಕನ್ನಬಾಬು ನನ್ನನ್ನು ನಿಂದಿಸುತ್ತಾರೆ. ಉಳಿದ ಶಾಸಕರು ತಮ್ಮದೇ ಶೈಲಿನಲ್ಲಿ ಕೆಟ್ಟ ಭಾಷೆ ಬಳಸುತ್ತಿದ್ದಾರೆ. ಆದರೆ ಕಳೆದ ಎರಡೂವರೆ ವರ್ಷಗಳಿಂದ ಸದನದಲ್ಲಿ ಹಲವು ಟೀಕೆಗಳು ಕೇಳಿ ಬರುತ್ತಿವೆ. ನಾನು ವಿರೋಧ ಪಕ್ಷದಲ್ಲಿದ್ದಾಗಲೂ, ಆಡಳಿತದಲ್ಲಿದ್ದಾಗಲೂ ಇಂತಹ ಕೆಟ್ಟ ಅನುಭವಗಳನ್ನು ಕಂಡಿಲ್ಲ. ದೊಡ್ಡ ದೊಡ್ಡ ನಾಯಕರೊಂದಿಗಾಗದ ಎಂದಿಗೂ ಎದುರಿಸದ ಅಪಮಾನಗಳನ್ನು ಈಗ ಎದುರಿಸುತ್ತಿದ್ದೇವೆ. ನನ್ನ ಪತ್ನಿ, ಕುಟುಂಬಸ್ಥರನ್ನೂ ಎಳೆದುತಂದಿದ್ದಾರೆ. ನನ್ನ ಮನಸ್ಸಿಗೆ ತೀವ್ರ ಆಘಾತವಾಗಿದೆ’ ಎಂದು ಅವರು ಹೇಳಿದ್ದಾರೆ.

    ‘ನನ್ನ ರಾಜಕೀಯ ಜೀವನ ಬಹುದೊಡ್ಡದಿದೆ. ಇಲ್ಲಿಯವರೆಗೆ ದೊಡ್ಡ ದೊಡ್ಡ ನಾಯಕರೊಂದಿಗೆ, ರಾಷ್ಟ್ರಮಟ್ಟದಲ್ಲಿಯೂ ಹಲವು ನಾಯಕರ ಜತೆ ಕೆಲಸ ಮಾಡಿದ್ದೇನೆ. ಆದರೆ ಇಷ್ಟು ಅವಮಾನ ಎಂದಿಗೂ ಆಗಿರಲಿಲ್ಲ. ಮುಖ್ಯಮಂತ್ರಿ ಜಗನ್ ಅವರು ಸದನಕ್ಕೆ ಬರದೇ ಇರುವುದಕ್ಕೂ ನನ್ನನ್ನೇ ಗುರಿಯಾಗಿಸಲಾಯಿತು. ಇದನ್ನೆಲ್ಲಾ ನಾನು ಇನ್ನು ಸಹಿಸಲ್ಲ ಎಂದು ಕಣ್ಣೀರು ಹಾಕಿದರು.

     

    ಮದುವೆಯ ಸಂಭ್ರಮದಲ್ಲಿದ್ದ ಜೋಡಿಯ ಜೀವ ಕಸಿದ ಜವರಾಯ: ಅಕ್ಕ-ಪಕ್ಕದಲ್ಲೇ ಚಿತೆಯೇರಿದ ಭಾವಿ ದಂಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts