More

    ಪಕ್ಷದ ಪ್ರಣಾಳಿಕೆ ಜನರಿಗೆ ಮಾಡುವ ಪ್ರಮಾಣ

    ಭದ್ರಾವತಿ: ಸಾರ್ವಜನಿಕರಿಂದ ಜನಾಭಿಪ್ರಾಯ ಸಂಗ್ರಹಿಸಿ ಸಿದ್ಧಪಡಿಸುವ ಬಿಜೆಪಿ ಪ್ರಣಾಳಿಕೆ ಕೇವಲ ಆಕರ್ಷಕ ಪುಟವಲ್ಲ ಅದು ಜನರಿಗೆ ಮಾಡುವ ಪ್ರಮಾಣ ಎಂದು ಬಿಜೆಪಿ ಜಿಲ್ಲಾ ಸಂಚಾಲಕ ರಾಘವೇಂದ್ರ ಬಾಳೇಬೈಲು ಹೇಳಿದರು.
    ತಾಲೂಕು ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಕಸಿತ ಭಾರತ ಸಂಕಲ್ಪ ಪ್ರಣಾಳಿಕೆ ಸಭೆಯಲ್ಲಿ ಮಾತನಾಡಿ, ಪಕ್ಷದ ಅಧಿಕಾರದ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಬದಲಾಗಿ ಹಿಂದುತ್ವ ಮುನ್ನೆಲೆಯಾಗಿ ರಾಷ್ಟ್ರೀಯ ಐಕ್ಯತೆ ಹೊರಹೊಮ್ಮಿಸುವ ಕೆಲಸ ಮಾಡುತ್ತಿದೆ. ಒಬ್ಬ ಸಾಮಾನ್ಯ ಕಾರ್ಯಕರ್ತ ದೇಶವನ್ನು ಮುನ್ನಡೆಸಬಹುದು ಎಂಬುದನ್ನು ಬಿಜೆಪಿ ತೋರಿಸಿಕೊಟ್ಟಿದೆ ಎಂದರು.
    ಚುನಾವಣೆ ಒಂದು ಪರೀಕ್ಷೆಯಾಗಿದ್ದು, ಜನ ಪುರಸ್ಕರಿಸಿದರೆ ಪಕ್ಷದ ಸಿದ್ಧಾಂತ ಜನರಿಗೆ ಒಪ್ಪಿಗೆಯಾಗಿದೆ ಎಂದರ್ಥ. ಕಳೆದ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಎಲ್ಲ ಅಂಶಗಳನ್ನೂ ಬಿಜೆಪಿ ಕಾರ್ಯರೂಪಕ್ಕೆ ತಂದಿದೆ. ಅಲ್ಲದೆ ಜನಸಾಮಾನ್ಯರ ಸಂಕಷ್ಟಗಳನ್ನು ಅರಿತು ಪ್ರಣಾಳಿಕೆ ಹೊರತಾಗಿಯೂ ಕೆಲಸ ಮಾಡಿದೆ. ಅಡುಗೆ ಮನೆಯಿಂದ, ಬಡ ಕೂಲಿ ಕಾರ್ಮಿಕನವರೆಗೂ ಹಲವು ಯೋಜನೆಗಳನ್ನು ಜಾರಿಗೊಳಿಸಿ ಜನ ಮೆಚ್ಚುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದರು.
    ಮುಂಬರುವ ಚುನಾವಣೆಯಲ್ಲಿ ಹಲವು ಸವಾಲುಗಳಿವೆ. ಭವಿಷ್ಯ ಭಾರತದ ಪರಿಕಲ್ಪನೆ ಬಗ್ಗೆ ಹಿರಿಯರು ಚಿಂತಿಸಿದ್ದು ಜನಸಾಮಾನ್ಯರ ಬೇಕು-ಬೇಡಗಳನ್ನು ಜನರಿಂದಲೇ ಸಂಗ್ರಹಿಸಿ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
    ಜಿಲ್ಲಾ ಸಹ ಸಂಚಾಲಕ ಸುಧೀಂದ್ರ ಕಟ್ಟಿ ಮಾತನಾಡಿ, ನಮ್ಮ ದೇಶದ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಸ್ಥಿತಿಗತಿ, ರಕ್ಷಣೆ ಸೇರಿ ಮೂಲ ಸೌಕರ್ಯಗಳು ಆಡಳಿತದಲ್ಲಿ ಉತ್ತಮವಾಗಿದ್ದರೆ ನಮ್ಮ ಪ್ರಯತ್ನ ಸಾರ್ಥಕವಾದಂತೆ. ಕೇವಲ ಕಾರ್ಖಾನೆಗಳ ಸ್ಥಾಪನೆ ಮುಖ್ಯವಲ್ಲ. ಉತ್ಪಾದಕತೆ ಬಗ್ಗೆಯೂ ಗುರಿ ಹೊಂದಿರಬೇಕಾಗುತ್ತದೆ. ಕ್ಷೇತ್ರದ ಅಭಿವೃದ್ಧಿ ಕೆಲಸ ಏನಾಗಬೇಕಿದೆ ಎಂದು ಪ್ರತಿ ನಾಗರಿಕರೂ ವಿಕಸಿತ ಭಾರತ ಸಂಕಲ್ಪ ಪ್ರಣಾಳಿಕೆಯಲ್ಲಿ ತಿಳಿಸಬೇಕೆಂದು ಮನವಿ ಮಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಕೈಗಾರಿಕೋದ್ಯಮಿ ವಾದಿರಾಜ್, ರಾಮಲಿಂಗಯ್ಯ, ತೀರ್ಥಯ್ಯ, ಕೆ.ಎನ್.ಶ್ರೀಹರ್ಷ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts