More

    ಸಿಎಎ ವಿರೋಧಿ ಹೋರಾಟಕ್ಕೆ ಕಿಡಿ ಹೊತ್ತಿಸಿದ್ದ ಆರೋಪ: ಡಾ. ಖಾನ್‌ ಮಧ್ಯರಾತ್ರಿ ಬಿಡುಗಡೆ

    ನವದೆಹಲಿ: ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿವಾದ ಭುಗಿಲೆದ್ದಿತ್ತು. ಈ ಸಮಯದಲ್ಲಿ ಅಲೀಗಢದ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಚೋದನಕಾರಿ ಭಾಷಣ ಮಾಡಿ, ಈ ವಿವಾದ ಇನ್ನಷ್ಟು ಉಲ್ಭಣಗೊಳ್ಳಲು ಕಾರಣವಾಗಿರುವ ಆರೋಪ ಹೊತ್ತಿದ್ದ ಡಾ. ಕಫೀಲ್‌ ಖಾನ್‌ ಅವರನ್ನು ನಿನ್ನೆ ಮಧ್ಯರಾತ್ರಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

    ಎಂಟು ತಿಂಗಳಿನಿಂದ ಜೈಲಿನಲ್ಲಿ ಡಾ.ಖಾನ್‌ ಅವರ ಬಿಡುಗಡೆಗೆ ಅಲಹಾಬಾದ್ ಹೈಕೋರ್ಟ್ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

    ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತರಾಗಿದ್ದ ಕಫೀಲ್ ಖಾನ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ನಿನ್ನೆ ಮಧ್ಯಾಹ್ನ ಕೋರ್ಟ್‌ ಆದೇಶ ಹೊರಡಿಸಿತ್ತು. ಅವರ ವಿರುದ್ಧ ದಾಖಲಾಗಿದ್ದ ಎನ್​ಎಸ್​ಎ ಪ್ರಕರಣವನ್ನು ಕೈಬಿಡುವಂತೆ ಕೋರ್ಟ್‌ ನಿರ್ದೇಶಿಸಿದೆ. ಖಾನ‌ ಅವರ ಭಾಷಣ, ದೇಶದ ಭದ್ರತೆಗೆ ಧಕ್ಕೆ ತರುವಷ್ಟು ಪ್ರಚೋದನಕಾರಿ ಅಲ್ಲ ಎಂದೂ ಕೋರ್ಟ್‌ ಹೇಳಿದೆ.

    ಇದನ್ನೂ ಓದಿ: ಈ ಕಾರ್ಟೂನ್‌ಗೆ ನಟಿ ಸನ್ನಿ ಲಿಯೋನ್‌ ಸ್ಫೂರ್ತಿ! ಪರೀಕ್ಷೆ ಬರೆದು ಟಾಪರ್‌ ಆಯ್ತು

    ಸಿಎಎ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಡಾ. ಕಫೀಲ್ ಖಾನ್ 2019 ರ, ಡಿಸೆಂಬರ್ 10 ರಂದು ಅಲಿಗಡ್ ಮುಸ್ಲಿಮ್ ಯೂನಿವರ್ಸಿಟಿಯಲ್ಲಿ ಉದ್ರೇಕಕಾರಿ ಭಾಷಣ ಮಾಡಿರುವ ಆರೋಪ ಹೊತ್ತಿದ್ದರು. ಹೀಗಾಗಿ ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಖಾನ್ ವಿರುದ್ಧ ಪ್ರಕರಣ ದಾಖಲಾಯಿತು. ಫೆ. 13 ರಂದು ಅಲಿಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದಂತೆ ಇವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿಗೊಳಿಸಲಾಗಿತ್ತು.

    ಆಗಸ್ಟ್ 16ರಂದು ಅವರ ಬಂಧನದ ಅವಧಿಯನ್ನು 3 ತಿಂಗಳ ಕಾಲ ವಿಸ್ತರಣೆ ಮಾಡಲಾಗಿತ್ತು. ಎನ್​ಎಸ್​ಎ ಕಾಯ್ದೆ ಅಡಿ ವ್ಯಕ್ತಿಗಳನ್ನು 12 ತಿಂಗಳ ಕಾಲ ಸೆರೆಯಲ್ಲಿಟ್ಟುಕೊಳ್ಳುವ ಅವಕಾಶ ಇದೆ. ಆದರೆ, ಈಗ ಅಲಹಾಬಾದ್ ಹೈಕೋರ್ಟ್ ಅವರನ್ನು ಮುಕ್ತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮಥುರಾ ಜೈಲಿನಲ್ಲಿರುವ ಅವರನ್ನು ಮಧ್ಯರಾತ್ರಿ ಬಿಡುಗಡೆ ಮಾಡಲಾಗಿದೆ.

    ಟೆಲಿಕಾಂ ಸಂಸ್ಥೆಗಳಿಂದ ಸಾವಿರಾರು ಕೋಟಿ ಶುಲ್ಕ ಬಾಕಿ : ಸುಪ್ರೀಂನಿಂದ 10 ವರ್ಷ ಗಡುವು

    ಈ ‘ನೀಲಿ’ ನಟನ ಮೇಲಿದೆ 25ಕ್ಕೂ ಅಧಿಕ ರೇಪ್‌ ಕೇಸ್‌: ಆರೋಪ ಸಾಬೀತಾದರೆ 250 ವರ್ಷ ಶಿಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts