More

    ಸಾರಿಗೆ ನೌಕರರಿಗೂ ಶಾಕ್‌ – ಜನರಿಗೂ ಮುಷ್ಕರದ ಬಿಸಿ? ಮಾತು ಆಡಲ್ಲ: ಸರ್ಕಾರದಿಂದ ಖಡಕ್‌ ವಾರ್ನಿಂಗ್‌

    ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆ ಏಪ್ರಿಲ್‌7ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿರುವ ಬೆನ್ನಲ್ಲೇ ಅವರ ಜತೆ ಸರ್ಕಾರ ವಿವಿಧ ರೀತಿಯಲ್ಲಿ ಮಾತುಕತೆ ಮಾಡಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಗರಂ ಆಗಿರುವ ಸರ್ಕಾರ ಯಾವುದೇ ಕಾರಣಕ್ಕೂ ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸು ಜಾರಿ ಸಾಧ್ಯವಿಲ್ಲ ಎಂದು ಹೇಳಿದೆ.

    ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಮುಷ್ಕರದಿಂದ ಆಗುವ ಸಮಸ್ಯೆ ನಿವಾರಣೆ ಎಲ್ಲ ಕ್ರಮ ತೆಗೆದುಕೊಳ್ಳಲಾಗುತ್ತದೆ. ಖಾಸಗಿ ವಾಹನಗಳಿಗೆ ತಾತ್ಕಾಲಿಕ ರಹದಾರಿ ನೀಡಲಾಗುತ್ತದೆ, ದೂರದ ಜಿಲ್ಲೆಗಳಿಗೆ ವಿಶೇಷ ರೈಲು ಸಂಚಾರಕ್ಕೆ ರೈಲ್ವೆಯಿಂದ ಮನವಿ ಮಾಡಿಕೊಳ್ಳಲಾಗಿದೆ ಎಂದರು.

    ಸಾರಿಗೆ ನೌಕರರಿಗೆ ಶೇ. 8 ವೇತನ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗದ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಮುಷ್ಕರದಿಂದ ಏನಾದರೂ ಸಮಸ್ಯೆಗಳಾದರೆ ಅಗತ್ಯವಿದ್ದರೆ ಎಸ್ಮಾ ಜಾರಿ ಸೇರಿ ಎಲ್ಲ ರೀತಿಯ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

    ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ನಂತರ ರವಿಕುಮಾರ್ ಈ ಮಾತನ್ನು ಹೇಳಿದರು. ಸಾರಿಗೆ ನೌಕರರ ಸಂಘದ ಜತೆ ಮತ್ತೆ ಮಾತುಕತೆ ಮಾಡುವುದಿಲ್ಲ. ಎಲ್ಲ ಮಾತುಕತೆ ಮುಗಿದಿದೆ. ಜನರಿಗೆ ಸಮಸ್ಯೆ ಆಗದಂತೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

    ಡಿವೋರ್ಸ್‌ ಪಡೆದಿದ್ದು ಮತ್ತೊಂದು ಮದುವೆಗೆ ಕಾತರಳಾಗಿದ್ದೇನೆ- ಕೂಡಲೇ ವಿವಾಹ ಆಗಬಹುದಾ?

    ಒಂದೇ ದಿನ 33 ಸಾವಿರ ಹಾಸಿಗೆ, 10 ಸಾವಿರಕ್ಕೂ ಅಧಿಕ ಆಕ್ಸಿನೇಟೇಡ್ ಬೆಡ್ ರೆಡಿ ಮಾಡಿದ ಸರ್ಕಾರ

    ಚಿತ್ರಮಂದಿರ ಭರ್ತಿಯಾಗತ್ತಾ ಅಥವಾ ಶಾಕ್‌ ಕೊಡತ್ತಾ? ಈ ವಿಚಾರದಲ್ಲಿ ಸರ್ಕಾರದ ನಿಲುವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts