More

    ಮಹಾರಾಷ್ಟ್ರದಲ್ಲಿ 900 ಕೋಳಿ ಮರಿಸಾವು: ಎಂಟು ರಾಜ್ಯಗಳಲ್ಲಿ ಹಕ್ಕಿಜ್ವರ ಕನ್‌ಫರ್ಮ್‌!

    ಔರಂಗಾಬಾದ್: ಕರೊನಾ ನಡುವೆಯೇ ಇದೀಗ ಹಕ್ಕಿಜ್ವರ ತನ್ನ ರೌದ್ರರೂಪ ತೋರಿಸಲು ಶುರು ಮಾಡಿದೆ. ನಿನ್ನೆ ಒಂದೇ ದಿನ ಒಂದೇ ಕೋಳಿಫಾರ್ಮ್‌ನಲ್ಲಿ 900 ಕೋಳಿಗಳು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಮೃತಪಟ್ಟಿದ್ದು, ಇಡೀ ರಾಜ್ಯದ ತುಂಬ ಆತಂಕ ಸೃಷ್ಟಿಯಾಗಿದೆ.

    ಈ ಕೋಳಿಗಳಲ್ಲಿ ಹಕ್ಕಿಜ್ವರ ಸೋಂಕು (ಏವಿಯಾನ್ ಇನ್ ಫ್ಲೂಯೆಂಜಾ) ದೃಢಪಟ್ಟಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಕುರಿತಂತೆ ಸ್ವತಃ ಔರಂಗಾಬಾದ್ ಜಿಲ್ಲಾಡಳಿತವೇ ಸ್ಪಷ್ಟನೆ ನೀಡಿದ್ದು, ಕೋಳಿಗಳು ಸೋಂಕಿನಿಂದಲೇ ಮೃತಪಟ್ಟಿವೆ ಎಂದು ಹೇಳಿದೆ.

    ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಇದಾಗಲೇ ಕೋಳಿಜ್ವರ ದೃಢಪಟ್ಟಿದ್ದು, ಇದೀಗ ಈ ಸಾಲಿಗೆ ಮಹಾರಾಷ್ಟ್ರವೂ ಸೇರ್ಪಡೆಯಾಗಿದೆ. ಕರ್ನಾಟಕದಲ್ಲಿ ಕೆಲವು ಕಡೆಗಳಲ್ಲಿ ಕೋಳಿ, ಕಾಗೆಗಳು ಮೃತಪಟ್ಟಿದ್ದರೂ ಅವುಗಳ ವರದಿಯಾಗಿ ಕಾಯಲಾಗುತ್ತಿದೆ.

    ಔರಂಗಾಬಾದ್ ಜಿಲ್ಲೆಯ ಮುರಾಂಬಾ ಗ್ರಾಮದ ಪರ್ಬಾನಿ ಪೌಲ್ಟ್ರಿ ಫಾರ್ಮ್‌ನಲ್ಲಿರುವ ಕೋಳಿಗಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಇದೀಗ ಇದೇ ಪೌಲ್ಟ್ರಿಯಲ್ಲಿರುವ ಸುಮಾರು 8 ಸಾವಿರ ಕೋಳಿಗಳನ್ನು ವೈಜ್ಞಾನಿಕ ಪ್ರಕ್ರಿಯೆ ಮೂಲಕ ಕೊಲ್ಲಲು ಜಿಲ್ಲಾಡಳಿತ ಮುಂದಾಗಿದೆ ಎಂದು ಔರಂಗಾಬಾದ್ ಜಿಲ್ಲಾಧಿಕಾರಿ ದೀಪಕ್ ಮುಗ್ಲೀಕರ್ ವಿವರಣೆ ನೀಡಿದ್ದಾರೆ.

    ಪಕ್ಷಿಗಳು ಸತ್ತ ಪ್ರದೇಶದ 10 ಕಿ.ಮೀ ತ್ರಿಜ್ಯದಲ್ಲಿ ನಾವು ನಿಷೇಧಿತ ವಲಯವನ್ನು ರಚಿಸಿದ್ದೇವೆ. ಅಲ್ಲಿಂದ ಬೇರೆ ಯಾವುದೇ ಪಕ್ಷಿಗಳಿಗೆ ಯಾವುದೇ ಪಕ್ಷಿಗಳನ್ನು ಸಾಗಿಸಲಾಗುವುದಿಲ್ಲ. ನಮ್ಮ ವೈದ್ಯಕೀಯ ತಂಡವನ್ನು ಇಲ್ಲಿಯೇ ವಿಚಕ್ಷಣೆಗೆ ನಿಯೋಜಿಸಲಾಗಿದೆ. ಈ ತಂಡ ಸುತ್ತಮುತ್ತಲಿನ ಎಲ್ಲ ಗ್ರಾಮಗಳಲ್ಲಿಯೂ ಪರೀಕ್ಷೆ ನಡೆಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಈ ಕೋಳಿ ಫಾರಂ ಅನ್ನು ಸೆಲ್ಫ್‌ ಹೆಲ್ಪ್ ಗ್ರೂಪ್ (ಎಸ್ ಹೆಚ್ ಜಿ) ಸಂಸ್ಥೆ ನಡೆಸುತ್ತಿದ್ದು, ಈ ಸಂಸ್ಥೆಯ ಇತರೆ ಶಾಖೆಗಳು ಮತ್ತು ಇಲ್ಲಿಂದ ಕೋಳಿ ಸರಬರಾಜಾಜ ಕೋಳಿ ಅಂಗಡಿಗಳಲ್ಲೂ ತಪಾಸಣೆ ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ಈ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲೂ ಕೋಳಿಗಳ ತಪಾಸಣೆ ನಡೆಸಲಾಗುತ್ತಿದೆ. ಈ ಕೋಳಿ ಫಾರಂನ ಒಂದು ಕಿ.ಮೀ ಸುತ್ತಳತೆಲ್ಲಿರುವ ಎಲ್ಲ ಕೋಳಿಗಳನ್ನೂ ಕೊಲ್ಲಲಾಗುತ್ತಿದೆ.

    ಔರಂಗಾಬಾದ್ ನಲ್ಲಿ ಹಕ್ಕಿ ಜ್ವರ ಪತ್ತೆಯಾದ ಬೆನ್ನಲ್ಲೇ ಇತ್ತ ಮುಂಬೈನಲ್ಲಿ ಸಿಎಂ ಉದ್ಧವ್ ಠಾಕ್ರೆ ಆರೋಗ್ಯ ಇಲಾಖೆಯ ತುರ್ತು ಸಭೆ ಕರೆದಿದ್ದು, ಸಭೆಯಲ್ಲಿ ಹಕ್ಕಿ ಜ್ವರ ನಿಯಂತ್ರಣ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಿದ್ದಾರೆ.

    ಹೆಚ್ಚುತ್ತಿದೆ ಕರೊನಾ ತ್ಯಾಜ್ಯ: ದೇಶದಲ್ಲಿ ಕಳೆದ ಏಳು ತಿಂಗಳಲ್ಲಿ 33 ಸಾವಿರ ಟನ್ ಕಸ ಉತ್ಪತ್ತಿ

    ಮಹಿಳಾ ಪೈಲಟ್‌ಗಳಿಂದ ಇತಿಹಾಸ ನಿರ್ಮಾಣ- ದಾಖಲೆ ಪುಟ ಸೇರಿದ ನಾಲ್ವರು ವನಿತೆಯರು

    ಹೆಂಡ್ತಿಯೂ ಬೇಕು, ಚಿಕ್ಕಮ್ಮನೂ ಬೇಕು ಎಂದ ಯುವಕ: ಆಂಟಿಯ ತುಂಟಾಟಕ್ಕೆ ಹೆಣವಾದ!

    ಜಗತ್‌ಪ್ರಸಿದ್ಧ ನಾಸ್ಟ್ರಾಡಾಮಸ್ ಭವಿಷ್ಯವಾಣಿಯಲ್ಲೇನಿದೆ? ಈತ ಹೇಳಿದ್ದೆಲ್ಲ ನಿಜವಾಗಿವೆಯಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts