More

    ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

    ಗುಂಡ್ಲುಪೇಟೆ: ತಾಲೂಕಿನ ಗರಗನಹಳ್ಳಿ ಗೇಟ್ ಸಮೀಪ ರಸ್ತೆ ದಾಟುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.

    ತಾಲೂಕಿನ ಆಲತ್ತೂರು ಗ್ರಾಮದ ರಾಜೇಶ್(24) ಎಂಬುವರೇ ಮೃತಪಟ್ಟವರು. ರಾಜೇಶ್ ಅವರು ಬುಧವಾರ ತಮ್ಮ ತಂಗಿಯೊಂದಿಗೆ ಗರಗನಹಳ್ಳಿ ಗೇಟ್ ಸಮೀಪ ಬೈಕ್‌ನಲ್ಲಿ ರಸ್ತೆ ದಾಟುವಾಗ ಪಟ್ಟಣದಿಂದ ಮೈಸೂರಿನತ್ತ ವೇಗವಾಗಿ ಹೋಗುತ್ತಿದ್ದ ಆಂಧ್ರಮೂಲದ ಪ್ರವಾಸಿಗರಿದ್ದ ಕಾರು ಡಿಕ್ಕಿ ಹೊಡೆದಿದೆ. ತಲೆಗೆ ಪೆಟ್ಟುಬಿದ್ದ ರಾಜೇಶ್ ಸ್ಥಳದಲ್ಲಿಯೇ ಸಾವಿಗೀಡಾದರೆ ಹಿಂಬದಿ ಕುಳಿತಿದ್ದ ಅವರ ತಂಗಿ ಮಾನಸಾ ತೀವ್ರವಾಗಿ ಗಾಯಗೊಂಡಿದ್ದು, ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾರು ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts