More

    ಉತ್ತಮ ಉದ್ಯೋಗಿಗಳಿಗೆ ಬೆಂಜ್‌ ಕಾರ್‌ ಗಿಫ್ಟ್‌: ಕೋವಿಡ್‌ ನಡುವೆಯೂ ಉಡುಗೊರೆಗಳ ಮಹಾಪೂರ

    ಬೆಂಗಳೂರು: ಪ್ರಮುಖ ಐಟಿ ಸಂಸ್ಥೆ ಎಚ್‌ಸಿಎಲ್‌ ತನ್ನ ಕಂಪೆನಿಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುವ ಉದ್ಯೋಗಿಗಳಿಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಂಜ್ ಕಾರು ಗಿಫ್ಟ್ ನೀಡಲು ಮುಂದಾಗಿದೆ. ಈ ಮೊದಲು ಕೂಡ ಕೋವಿಡ್‌ ಸಂಕಷ್ಟದ ನಡುವೆಯೂ ಉದ್ಯೋಗಿಗಳಿಗೆ ಸಾಕಷ್ಟು ಉಡುಗೊರೆಗಳನ್ನು ಹಾಗೂ ಸಂಬಳ ಹೆಚ್ಚು ಮಾಡಿದ್ದ ಸಂಸ್ಥೆ ಇದೀಗ ಐಷಾರಾಮಿ ಕಾರನ್ನು ನೀಡಲು ಮುಂದಾಗಿದೆ.

    ಹೊಸ ನೇಮಕಾತಿಗೆ ತಗುಲುವ ವೆಚ್ಚ ಶೇ 20% ಅಧಿಕವಾಗಲಿರುವ ಹಿನ್ನೆಲೆಯಲ್ಲಿ ಹಳೆಯ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಉತ್ತಮವಾಗಿ ಕಾರ್ಯ ನಿರ್ವಹಿಸುವವರಿಗೆ ಈ ಗಿಫ್ಟ್‌ ನೀಡಲು ಮುಂದಾಗಿದೆ. ಇದಾಗಲೇ ಕಂಪೆನಿ 16 ಸಾವಿರ ಉದ್ಯೋಗಿಗಳಿಗೆ ಬೋನಸ್ ಕೊಟ್ಟಿತ್ತು. ಅಷ್ಟೇ ಅಲ್ಲದೇ 2013ರಲ್ಲಿ ಸಂಸ್ಥೆಯ ಉತ್ತಮ ಕಾರ್ಯನಿರ್ವಹಣೆ ತೋರಿದ ಉದ್ಯೋಗಿಗಳಿಗೆ 50 ಮರ್ಸಿಡಿಸ್ ಬೆಂಜ್ ಕಾರುಗಳನ್ನು ಉಡುಗೊರೆಯಾಗಿ ನೀಡಿತ್ತು. ನಂತರ ಬೋನಸ್ ವಿಧಾನ ಸ್ಥಗಿತಗೊಂಡಿತ್ತು. ಆದರೆ ಇದೀಗ ಪುನಃ ಅದನ್ನು ಜಾರಿಗೊಳಿಸಲು ಯೋಚಿಸಲಾಗಿದೆ ಎಂದು ಮಾನವ ಸಂಪನ್ಮೂಲ ಅಧಿಕಾರಿ ಅಪ್ಪಾರಾವ್ ವಿವಿ ಹೇಳಿದ್ದಾರೆ.

    ಪ್ರಸಕ್ತ ಆರ್ಥಿಕ ವರ್ಷದಲ್ಲಿ 22 ಸಾವಿರ ಫ್ರೆಶರ್ಸ್ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಕಳೆದ ವರ್ಷ 15,600 ನೇಮಕ ಮಾಡಿಕೊಳ್ಳಲಾಗಿತ್ತು. ಇನ್ನೂ ಹೆಚ್ಚಿನ ನೇಮಕಾತಿ ನಡೆದರೆ ಶೇ.20ರಷ್ಟು ಹೆಚ್ಚವರಿ ಹೊರೆಯಾಗಲಿದೆ. ಆದ್ದರಿಂದ ಚೆನ್ನಾಗಿ ಕರ್ತವ್ಯ ನಿರ್ವಹಿಸುವವರಿಗೆ ಮೂರು ವರ್ಷಗಳ ಕ್ಯಾಶ್ ಬೋನಸ್ ಯೋಜನೆ ಜಾರಿಗೊಳಿಸಲಾಗಿದೆ ಎಂದು ಅದು ಹೇಳಿದೆ.

    ಮನೆಯಿಂದಲೇ ಸಂಪಾದಿಸಿ 80 ಸಾವಿರ ರೂ- ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ: ಇಲ್ಲಿದೆ ವಿವರ

    1000 ಕೆ.ಜಿ ಮೀನು, 250 ಕೆ.ಜಿ ಸಿಗಡಿ, 50 ಕೆ.ಜಿ ಚಿಕನ್‌, 10 ಕುರಿ…. ಇಂಥ ಮಾವ ಸಿಗಬೇಕೆಂದ ಅಳಿಯಂದಿರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts