More

    ಐಟಿಯಲ್ಲಿ ಲೇಆಫ್ಸ್​ ಆತಂಕ: ಮೆಟಾದಲ್ಲಿ ಮತ್ತಷ್ಟು ಉದ್ಯೋಗಿಗಳು ವಜಾ?

    ನವದೆಹಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಡಿತ ಪರ್ವಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಪ್ರಮುಖವಾಗಿ ಸಾಮಾಜಿಕ ಜಾಲತಾಣ ಸಂಸ್ಥೆಗಳಾದ ವಾಟ್ಸಾಪ್​, ಇನ್​ಸ್ಟಾಗ್ರಾಮ್​ ನ ಮಾತೃಸಂಸ್ಥೆ ಮೆಟಾದಲ್ಲಿ ಮತ್ತೊಮ್ಮೆ ಉದ್ಯೋಗಿಗಳ ವಜಾ ಸುದ್ದಿ ಸದ್ದು ಮಾಡುತ್ತಿದೆ. ಶೀಘ್ರದಲ್ಲೇ ಸಂಸ್ಥೆಯ ಪ್ರಮುಖ ಪ್ರೊಡಕ್ಷನ್​ ತಂಡವೂ ಸೇರಿದಂತೆ ಮತ್ತಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ತೀರ್ಮಾನ ತಂತ್ರಜ್ಞಾನ ವಲಯದ ಬಳಿಕ ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದಲ್ಲಿ ಆತಂಕಕ್ಕೆ ಕಾರಣವಾಗಿದೆ.

    ಕಳೆದ ನವೆಂಬರ್​ನಿಂದ 21ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿರುವ ಮೆಟಾ, ಈ ಬಾರಿ ತನ್ನ ಮೆಟಾವೆರ್ಸ್​ ಆಧಾರಿತ ರಿಯಾಲಿಟಿ ಲ್ಯಾಬ್ಸ್ ವಿಭಾಗದ ಘಟಕದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ, ಕಸ್ಟಮ್ ಸೆಮಿಕಾನ್ ರಚಿಸುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಮೂಲಗಳು ತಿಳಿಸಿವೆ.

    ಮೆಟಾದ ಆಂತರಿಕ ಚರ್ಚಾ ವೇದಿಕೆ ಪೋಸ್ಟ್‌ನಲ್ಲಿ ವಜಾಗೊಳಿಸುವಿಕೆಯ ಕುರಿತು ಉದ್ಯೋಗಿಗಳಿಗೆ ತಿಳಿಸಲಾಗಿದೆ. ಬುಧವಾರ ಮುಂಜಾನೆ ಕಂಪನಿ ಜತೆ  ಅವರ ಸ್ಥಿತಿಯ ಕುರಿತು ತಿಳಿಸಲಾಗುವುದು ಎಂದು ಪೋಸ್ಟ್​ ನಲ್ಲಿ  ಹೇಳಿದೆ ಎಂದು ಮೂಲವೊಂದು ತಿಳಿಸಿದೆ.

    ಇದನ್ನೂ ಓದಿ: ಸೋನಿಯಾಗಾಂಧಿಗೆ ಪಪ್ಪಿ ಗಿಫ್ಟ್​ ಕೊಟ್ಟ ರಾಹುಲ್

    ಫೇಸ್‌ಬುಕ್ ಎಜೈಲ್ ಸಿಲಿಕಾನ್ ಟೀಮ್ ಅಥವಾ ಫಾಸ್ಟ್ ಎಂದು ಕರೆಯಲ್ಪಡುವ ಸೆಮಿಕಾನ್ ಘಟಕಕ್ಕೆ ಕಡಿತದ ವ್ಯಾಪ್ತಿ ವಿಸ್ತರಣೆಯಾಗಲಿದೆ. ಇದು ಸಿಇಒ ಮಾರ್ಕ್​ ಜುಕರ್ ಬರ್ಗ್​ ಅವರ ಪ್ರತಿಷ್ಠಿತ ವರ್ಚುಯೆಲ್​ ರಿಯಾಲಿಟಿ ಪ್ರೊಡಕ್ಷನ್​ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

    ಫೇಸ್​ಬುಕ್​ ಎಜೈಲ್​ ಸಿಲಿಕಾನ್​ ಟೀಂ ಅಥವಾ ಫಾಸ್ಟ್​ ಟೀಂನಲ್ಲಿ ಉದ್ಯೋಗಿಗಳನ್ನು ಹೊರಕಳೂಹಿಸುವ ಉದ್ದೇಶವಿದೆ. ಕಂಪೆನಿಯ ಪ್ರೊಫೇಷನಲ್​ ನೆಟ್​ವರ್ಕ್​ ಮೂಲಕ ಸಂತ್ರಸ್ತರಾಗುವ ಉದ್ಯೋಗಿಗಳಿಗೆ ವಿಷಯ ಮುಟ್ಟಿದೆ. ಕನಿಷ್ಠ 600ಮಂದಿ ಉದ್ಯೋಗಿಗಳು ವಜಾ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
    ಆದರೆ ಮೆಟಾ ವಕ್ತಾರರು ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

    ಮೆಟಾದ ಚೀಪ್​ ಮೇಕಿಂಗ್​ ಯೂನಿಟ್​ ಕಷ್ಟನಷ್ಟದಲ್ಲಿದೆ. ಇದಕ್ಕೆ ಜವಾಬ್ದಾರಿ ಹೊತ್ತು ಎಕ್ಸಿಕ್ಯೂಟಿವ್​ ಇತ್ತೀಚೆಗೆ ರಾಜೀನಾಮೆ ಕೊಟ್ಟಿದ್ದಾರೆ. ಮೆಟಾ ಪ್ರಸ್ತುತ ಕ್ವೆಸ್ಟ್​ನಂತಹ ಕಂಬೈಂಡ್​ ಹೆಡ್​ಸೆಟ್​ಗಳನ್ನು ತಯಾರಿಸಿದೆ. ಈ ಉತ್ಪನ್ನಗಳು ಎಒನ್​ ಅಸಿಸ್ಟೆಂಟ್​ ಮೂಲಕ ವೀಡಿಯೋವನ್ನು ಪ್ರಸಾರ ಮಾಡಬಲ್ಲವು. ಮತ್ತು ಧರಿಸಿದವರೊಂದಿಗೆ ಸಂಪರ್ಕ ಸಾಧಿಸಬಲ್ಲವು. ಕಂಪೆನಿಯು ಸಾಧಾರಣ ಕನ್ನಡಕಳಂತೆ ಸರಳವಾದ ಡಿಸೈನ್​ನೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿರುವ ಎಆರ್​ ಗ್ಲಾಸ್​, ಸ್ಮಾರ್ಟ್​ವಾಚ್​ಗಳ ಮೇಲೆ ಸಹ ಗಮನಹರಿಸಿದೆ.

    ಅಷ್ಟೇ ಅಲ್ಲ, ವಿಶ್ವ ಆರ್ಥಿಕ ಸ್ಥಿತಿ ಮಂದಗತಿಯಲ್ಲಿ ಸಾಗುತ್ತಿರುವುದು, ಆದಾಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಐಟಿ ಮತ್ತು ಜಾಲತಾಣ ಸಂಸ್ಥೆಗಳು ಖರ್ಚು ತಗ್ಗಿಸಿಕೊಳ್ಳುವ ನಿಟ್ಟಿನಲ್ಲಿವೆ. ಇದರ ಭಾಗವಾಗಿ ಫೇಸ್​ಬುಕ್​, ಟ್ವಿಟರ್​, ಗೂಗಲ್​ನಂತಹ ದಿಗ್ಗಜ ಸಂಸ್ಥೆಗಳು ಸಹಸ್ರಾರು ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿವೆ.

    Nobel prize 2023 in physics: ಭೌತಶಾಸ್ತ್ರದಲ್ಲಿ ಮೂವರಿಗೆ ನೋಬೆಲ್​ ಪುರಸ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts