More

    Nobel prize 2023 in physics: ಭೌತಶಾಸ್ತ್ರದಲ್ಲಿ ಮೂವರಿಗೆ ನೋಬೆಲ್​ ಪುರಸ್ಕಾರ

    ಸ್ಟಾಕ್‌ಹೋಮ್: ಆಯಾ ಕ್ಷೇತ್ರದಲ್ಲಿನ ಪ್ರತಿಭಾವಂತರಿಗೆ ಪ್ರತಿವರ್ಷ ನೋಬೆಲ್​ ಪ್ರಶಸ್ತಿ ನೀಡಲಾಗುತ್ತದೆ. ಅದೇ ರೀತಿ ಈ ಬಾರಿ ಭೌತಶಾಸ್ತ್ರದಲ್ಲಿ ಅಪಾರ ಪ್ರತಿಭೆ ತೋರಿದ ಮೂವರು ವಿಜ್ಞಾನಿಗಳು ನೋಬೆಲ್​ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

    ಅಮೆರಿಕಾಗೆ ಸೇರಿದ ವಿಜ್ಞಾನಿಗಳಾದ ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆನ್ನೆ ಎಲ್’ ಹ್ಯೂಲಿಯರ್ ಗೆ “ಒಂದು ವಸ್ತುವಿನಲ್ಲಿನ ಎಲೆಕ್ಟ್ರಾನ್​ ಡೈನಾಮಿಕ್ಸ್​” ಮೇಲೆ ನಡೆಸಿದ ವಿಸ್ತೃತ ಸಂಶೋಧನೆಗಳಿಗಾಗಿ ನೋಬಲ್​ ಪ್ರಶಸ್ತಿ ಲಭಿಸಿದೆ.

    ಇದನ್ನೂ ಓದಿ: ಏಷ್ಯನ್ ಗೇಮ್ಸ್ 2023: ಮಹಿಳೆಯರ 5000 ಮೀ. ಓಟದಲ್ಲಿ ಚಿನ್ನಕ್ಕೆ ಮುತ್ತಿಟ್ಟ ಪರೂಲ್ ಚೌಧರಿ
    ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭಾವಂತರಿಗೆ ನೋಬೆಲ್​ ಪ್ರಶಸ್ತಿ ಪ್ರಕಟಿಸುವ ಪ್ರಕ್ರಿಯೆ ಸೋಮವಾರ ಪ್ರಾರಂಭವಾಗಿದ್ದು, ಸಮಿತಿ ಮೊದಲು ವೈದ್ಯಕೀಯ ಕ್ಷೇತ್ರದ ಪ್ರಶಸ್ತಿಗಳನ್ನು ಪ್ರಕಟಿಸಿತ್ತು. ಮಂಗಳವಾರ ಭೌತಶಾಸ್ತ್ರದಲ್ಲಿನ ಸಾಧಕರ ಆಯ್ಕೆಯನ್ನು ಪ್ರಕಟಿಸಿದೆ. ಈ ಬಾರಿ ಮೂವರು ವಿಜ್ಞಾನಿಗಳಿಗೆ ಸಂಯುಕ್ತವಾಗಿ ಪ್ರಶಸ್ತಿ ಪ್ರಕಟಿಸಿರುವುದು ವಿಸೇಷ. ಇವರು ಒಮದು ವಸ್ತುವಿನೊಳಗಿನ ಎಲೆಕ್ಟ್ರಾನಿಕ್​ ಡೈನಾಮಿಕ್ಸ್​ ಮೇಲೆ ಅಧ್ಯಯನ ಮಾಡಿದ್ದಕ್ಕೆ ಈ ಅತ್ಯುನ್ನತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ರಾಯಲ್​ ಸ್ವೀಡಿಷ್​ ಅಕಾಡೆಮಿ ಆಫ್​ ಸೈನ್ಸಸ್ ಪ್ರಕಟಣೆಯಲ್ಲಿ ತಿಳಿಸಿದೆ.

    ಶಿವದೇಗುಲದಲ್ಲಿ ಉದಯನಿಧಿ ಸ್ಟಾಲಿನ್ ಸಹೋದರಿ ಪೂಜೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts