More

    ಇದುವರೆಗೂ ಕಂಡಿರದ ಅತಿದೊಡ್ಡ ಅನಕೊಂಡ ಪತ್ತೆ! ಕಾರಿನ ಟೈರಿನಷ್ಟು ದಪ್ಪ, ವಿಡಿಯೋ ವೈರಲ್​

    ನವದೆಹಲಿ: ಅಮೇಜಾನ್​ ಮಳೆಕಾಡಿನ ಹೃದಯಭಾಗದಲ್ಲಿ ವಿಶ್ವದ ಅತಿದೊಡ್ಡ ಹಾವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಇದುವರೆಗೆ ಕಂಡಿರುವ ಅತಿದೊಡ್ಡ ಅನಕೊಂಡವನ್ನು ಗುರುತಿಸಲಾಗಿದೆ. ವನ್ಯಜೀವಿ ನಿರೂಪಕ ಪ್ರೊಫೆಸರ್ ಫ್ರೀಕ್ ವೊಂಕ್ ಅವರು ಇತ್ತೀಚೆಗೆ ನ್ಯಾಷನಲ್ ಜಿಯಾಗ್ರಫಿಕ್ ಸಾಹಸಯಾತ್ರೆಯ ವೇಳೆ ಭಾರಿ ಗಾತ್ರದ ಅನಕೊಂಡವನ್ನು ಕಂಡುಹಿಡಿದಿದ್ದಾರೆ.

    ಈ ಬೃಹತ್ ಅನಕೊಂಡ 26 ಅಡಿ ಉದ್ದ ಮತ್ತು 440 ಪೌಂಡ್ (200 ಕೆಜಿ) ತೂಕವಿದೆ. ಈ ಹಾವಿನ ತಲೆಯು ಮನುಷ್ಯನ ತಲೆಯ ಗಾತ್ರದಷ್ಟೇ ಇದೆ ಎಂದು ಫ್ರೀಕ್ ವೊಂಕ್ ಹೇಳಿದ್ದಾರೆ. ಈ ಜಾತಿಯ ಹಾವು ವಿಶ್ವದ ಅತಿ ದೊಡ್ಡ ಮತ್ತು ಭಾರವಾದ ಹಾವು ಎಂದು ಹೇಳಲಾಗುತ್ತದೆ. ವಿಲ್ ಸ್ಮಿತ್ ಅವರೊಂದಿಗೆ ನ್ಯಾಷನಲ್ ಜಿಯಾಗ್ರಫಿಕ್‌ನ ಡಿಸ್ನಿ ಪ್ಲಸ್ ಸರಣಿ ‘ಪೋಲ್ ಟು ಪೋಲ್’ ಸಾಹಸದ ಸಮಯದಲ್ಲಿ ಈ ಜಾತಿಯ ಹಾವು ಪತ್ತೆಯಾಗಿದೆ. ಸಂಶೋಧಕರು ಈ ಹೊಸ ಜಾತಿಯ ಹಾವಿಗೆ ಲ್ಯಾಟಿನ್ ಹೆಸರಾದ ‘Unectes Acaima’ ಎಂದು ನೀಡಿದ್ದಾರೆ. ಇದರರ್ಥ ಉತ್ತರದ ಹಸಿರು ಅನಕೊಂಡ ಎಂದರು.

    ಪ್ರೊಫೆಸರ್ ವೊಂಕ್ ಅವರು ಈ ದೈತ್ಯ ಅನಕೊಂಡದ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಯಾವುದೇ ಭಯವಿಲ್ಲದೆ ಅತಿ ದೊಡ್ಡ ಅನಕೊಂಡವನ್ನು ಹಿಡಿದುಕೊಂಡಿರುವುದು ಫೋಟೋಗಳನ್ನು ಸಹ ಪೋಸ್ಟ್​ ಮಾಡಿದ್ದಾರೆ. ಇದುವರೆಗೂ ನಾನು ನೋಡಿದ ಅನಕೊಂಡಗಳಲ್ಲಿ ಇದು ಅತಿದೊಡ್ಡ ಅನಕೊಂಡ. ಇದು ಕಾರಿನ ಟೈರ್‌ನಷ್ಟು ದಪ್ಪವಾಗಿರುತ್ತದೆ. 8 ಮೀಟರ್ (26 ಅಡಿ) ಉದ್ದ ಮತ್ತು 200 ಕೆಜಿ ತೂಕ ಹಾಗೂ ನನ್ನ ತಲೆಯಷ್ಟು ದೊಡ್ಡ ತಲೆಯನ್ನು ಹೊಂದಿದೆ ಎಂದು ವೊಂಕ್​ ಬರೆದುಕೊಂಡಿದ್ದಾರೆ. ಈ ಅನಕೊಂಡಗಳು ಆಹಾರದ ಹುಡುಕಾಟದಲ್ಲಿ ಹೆಚ್ಚಾಗಿ ವೇಗವಾಗಿ ಚಲಿಸುತ್ತವೆ. ಈ ಹಾವುಗಳು ತಮ್ಮ ಬಲವಾದ ದೇಹವನ್ನು ಬೇಟೆಗಳನ್ನು ಉಸಿರುಗಟ್ಟಿಸಲು ಮತ್ತು ಅವುಗಳನ್ನು ಸಂಪೂರ್ಣವಾಗಿ ನುಂಗಲು ಬಳಸುತ್ತವೆ.

    ಅಮೆಜಾನ್​ ಹಸಿರು ಅನಕೊಂಡದ ಒಂದು ಜಾತಿಯನ್ನು ಮಾತ್ರ ಹೊಂದಿದೆ ಎಂದು ಈ ಹಿಂದೆ ಭಾವಿಸಲಾಗಿತ್ತು. ಇದನ್ನು ದೈತ್ಯ ಅನಕೊಂಡ ಎಂದೂ ಕರೆಯುತ್ತಾರೆ. ಆದಾಗ್ಯೂ, ವೊಂಕ್​ ಅವರ ತಂಡವು ಅದೇ ಅಮೆಜಾನ್ ಅರಣ್ಯದಲ್ಲಿ ಒಂಬತ್ತು ದೇಶಗಳ 14 ವಿಜ್ಞಾನಿಗಳೊಂದಿಗೆ ಅನ್ವೇಷಿಸಿದಾಗ, ವಿಶ್ವದ ಅತಿದೊಡ್ಡ ಉತ್ತರದ ಹಸಿರು ಅನಕೊಂಡ ಕೂಡ ಅಮೇಜಾನ್​ನಲ್ಲಿದೆ ಎಂಬುದು ದೃಢವಾಗಿದೆ.

    ಡೈವರ್ಸಿಟಿ ಜರ್ನಲ್‌ನಲ್ಲಿ ವಿವರಿಸಲಾದ ಹೊಸ ಜಾತಿಗಳು ಸುಮಾರು 10 ಮಿಲಿಯನ್ ವರ್ಷಗಳ ಹಿಂದಿನ ದಕ್ಷಿಣ ಹಸಿರು ಅನಕೊಂಡವನ್ನು ನೆನಪಿಸಿವೆ. ಆದಾಗ್ಯೂ, ಉತ್ತರದ ಹಸಿರು ಅನಕೊಂಡ ಪ್ರಭೇದಗಳು ದಕ್ಷಿಣ ಹಸಿರುವ ಅನಕೊಂಡಕ್ಕಿಂತ ಬಹಳ ಭಿನ್ನವಾಗಿವೆ. ತಳೀಯವಾಗಿ ಇವೆರಡರ ನಡುವೆ ಶೇಕಡಾ 5.5 ರಷ್ಟು ವ್ಯತ್ಯಾಸವಿದೆ ಎಂದು ಸಂಶೋಧಕರು ಹೇಳಿದ್ದಾರೆ. (ಏಜೆನ್ಸೀಸ್​)

    ಹುಡುಗಿಯರಿಗೆ ಇದು ಸುಲಭ, ಹುಡುಗರ ಬಗ್ಗೆ ಯೋಚಿಸಿದ್ರೆ ಅಯ್ಯೋ ಪಾಪ ಅನ್ಸುತ್ತೆ ಎಂದ ನಿತ್ಯಾ ಮೆನನ್!​

    ಕನ್ನಡತಿಗೆ ಅವಮಾನ: ಐಶ್ವರ್ಯಾ ರೈ ವಿರುದ್ಧ ರಾಹುಲ್ ಹಗುರ ಮಾತು, ಬಿಜೆಪಿ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts