More

    ಒಂದು ಲಡ್ಡುವಿನ ಬೆಲೆ 24.60 ಲಕ್ಷ ರೂ! ಹರಾಜಿನಲ್ಲಿ ದಾಖಲೆ ಬರೆದ ಬಾಲಾಪುರದ ಗಣಪ…

    ಹೈದರಾಬಾದ್: ಗಣೇಶನ ಹಬ್ಬದ ಲಡ್ಡು ಎಂದಾಕ್ಷಣ ನೆನಪಾಗುವುದು ಹೈದರಾಬಾದ್​ನ ಬಾಲಾಪುರ. ಏಕೆಂದರೆ ಪ್ರತಿ ವರ್ಷವೂ ಗಣೇಶನಿಗೆ ಇಟ್ಟ ಲಡ್ಡು ದಾಖಲೆ ಪ್ರಮಾಣದಲ್ಲಿ ಇಲ್ಲಿ ಹರಾಜಾಗುತ್ತದೆ. ಒಂಬತ್ತು ದಿನಗಳವರೆಗೆ ಬಾಲಾಪುರದ ಗಣೇಶೋತ್ಸವ ನಡೆಯುತ್ತದೆ. 9ನೇ ದಿನ ಗಣೇಶ ಲಡ್ಡುವಿನ ಹರಾಜು ನಡೆಯುತ್ತದೆ.

    ಕಳೆದ ವರ್ಷ 18 ಲಕ್ಷ 90 ಸಾವಿರ ರೂಪಾಯಿಗಳಿಗೆ ಲಡ್ಡು ಮಾರಾಟವಾಗಿತ್ತು. ಆದರೆ ಈ ಬಾರಿ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದು ಲಡ್ಡು ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ.

    ಬಾಲಾಪುರ ಗಣೇಶ ಉತ್ಸವ ಕಮೀಟಿ ಸದಸ್ಯ ವಂಗೇಟಿ ಲಕ್ಷ್ಮಾರೆಡ್ಡಿ ಎನ್ನುವವರು ಈ ದಾಖಲೆ ಬರೆದಿದ್ದಾರೆ. ಅವರು 24 ಲಕ್ಷ 60 ಸಾವಿರ ರೂಪಾಯಿಗೆ ಲಡ್ಡು ಖರೀದಿ ಮಾಡಿದ್ದಾರೆ. ಇದರ ಅರ್ಥ ಕಳೆದ ವರ್ಷಕ್ಕಿಂತ 5.70 ಲಕ್ಷ ರೂಪಾಯಿ ಹೆಚ್ಚಿನ ಬೆಲೆಗೆ ಲಡ್ಡು ಮಾರಾಟವಾಗಿದೆ.

    ಅಂದಹಾಗೆ ಈ ವರ್ಷದ ಲಡ್ಡು 21 ಕೆಜಿ ತೂಕದ್ದು. ಇದನ್ನು ಖರೀದಿ ಮಾಡಿದವರ ಜೀವನದಲ್ಲಿ ಅದೃಷ್ಟ, ಆರೋಗ್ಯ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ. ಇದಕ್ಕಾಗಿಯೇ ಇದನ್ನು ಬಂಗಾರು ಲಡ್ಡು (ಚಿನ್ನದ ಲಡ್ಡು) ಎಂದೇ ಕರೆಯಲಾಗುತ್ತದೆ. ಈ ಲಡ್ಡು ಖರೀದಿಗೆ ಅಕ್ಕಪಕ್ಕದ ರಾಜ್ಯಗಳಿಂದಲೂ ಜನ ಬರುತ್ತಾರೆ. ಅತಿಹೆಚ್ಚಿನ ಮೊತ್ತದ ಬಿಡ್​ ಕೂಗಿದವರಿಗೆ ಲಡ್ಡು ನೀಡಲಾಗುತ್ತದೆ. ಹರಾಜಿನಿಂದ ಬಂದ ಮೊತ್ತವನ್ನು ಬಾಲಾಪುರದ ದೇವಸ್ಥಾನ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ.

    ಬಿಡ್‌ ವಿಜೇತರು ಬಾಲಾಪುರ ಗ್ರಾಮದ ಹೊರಗಿನವರಾಗಿದ್ದರೆ ಅವರು ಅದೇ ದಿನ ಸಂಪೂರ್ಣ ಬಿಡ್ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ವಿಜೇತರು ಬಾಲಾಪುರ ಗ್ರಾಮದವರಾಗಿದ್ದರೆ ಅವರು ಒಂದು ವರ್ಷದೊಳಗೆ ಮೊತ್ತವನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

    ಲಡ್ಡು ಹರಾಜಿನ ಸಂಪ್ರದಾಯವು ಶುರುವಾದದ್ದು 1994ರಲ್ಲಿ. ಹರಾಜು ಪ್ರಕ್ರಿಯೆಯು 10-15 ನಿಮಿಷಗಳವರೆಗೆ ನಡೆಯುತ್ತದೆ. ಹರಾಜನ್ನು 2100 ರೂಪಾಯಿಗಳಿಂದ ಆರಂಭಿಸಲಾಗುತ್ತದೆ. ಹರಾಜಿಗೂ ಮುನ್ನ ಗಣೇಶನಿಗೆ ಪೂಜೆ ಸಲ್ಲಿಸಿದ ನಂತರ ಬೆಳಗ್ಗೆ 5.30 ರ ಸುಮಾರಿಗೆ ಗಣೇಶನ ಮೆರವಣಿಗೆ ಆರಂಭವಾಗುತ್ತದೆ. ಇದು ಸುಮಾರು ಮೂರು ಗಂಟೆಗಳ ಕಾಲ ಬಾಲಾಪುರ ಗ್ರಾಮದ ಓಣಿ ಮತ್ತು ಬೈಲೇನ್‌ಗಳಲ್ಲಿ ಹಾದು ಬೆಳಗ್ಗೆ 8.30 ಕ್ಕೆ ದೇವಸ್ಥಾನವನ್ನು ತಲುಪುತ್ತದೆ. ಈ ಸಂದರ್ಭದಲ್ಲಿ ಹರಾಜು ಆರಂಭಿಸಲಾಗುತ್ತದೆ.

    ಪ್ರಪ್ರಥಮವಾಗಿ ಲಡ್ಡು ಖರೀದಿ ಮಾಡಿದವರು ಬಾಲಾಪುರ ಗ್ರಾಮದ ಕೋಲನ್ ಕೃಷ್ಣಾ ರೆಡ್ಡಿ. 1994ರಲ್ಲಿ ನಡೆದ ಈ ಹರಾಜಿನಲ್ಲಿ ಇವರು 450 ರೂಪಾಯಿಗೆ ಲಡ್ಡು ಖರೀದಿ ಮಾಡಿದ್ದರು. ಕುತೂಹಲಕಾರಿ ವಿಷಯವೆಂದರೆ ಒಂದೇ ಕುಟುಂಬವು ಹೆಚ್ಚಿನ ಹರಾಜುಗಳಲ್ಲಿ ಭಾಗವಹಿಸಿದ್ದು, ಇದುವರೆಗೆ ನಡೆದ ಒಟ್ಟು 26 ಹರಾಜುಗಳ ಪೈಕಿ ಒಂಬತ್ತರಲ್ಲಿ ಯಶಸ್ಸನ್ನು ದಾಖಲಿಸಿದೆ. (ಏಜೆನ್ಸೀಸ್​)

    ಎಲಿಜಬೆತ್ ಕಿರೀಟ ಅಲಂಕರಿಸಿದ್ದ ಕೊಹಿನೂರು ವಜ್ರದತ್ತ ಎಲ್ಲರ ಚಿತ್ತ! ಇದರ ಉತ್ತರಾಧಿಕಾರಿ ಇವರೇನಾ?

    ಅವಳಿ ಮಕ್ಕಳಿಗೆ ಜನ್ಮ ನೀಡಿದ ಯುವತಿ, ಆದ್ರೆ ಅಪ್ಪ ಮಾತ್ರ ಬೇರೆ ಬೇರೆ… ಇದೆಂಥ ವಿಚಿತ್ರ ಅಂತೀರಾ?

    VIDEO: ವೇದಿಕೆ ಮೇಲೆ ನರ್ತಿಸುತ್ತಲೇ ಕುಸಿದು ಸಾವು: ಇದು ಕೂಡ ನೃತ್ಯದ ಭಾಗವೇ ಎಂದುಕೊಂಡ ಪ್ರೇಕ್ಷಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts