VIDEO: ವೇದಿಕೆ ಮೇಲೆ ನರ್ತಿಸುತ್ತಲೇ ಕುಸಿದು ಸಾವು: ಇದು ಕೂಡ ನೃತ್ಯದ ಭಾಗವೇ ಎಂದುಕೊಂಡ ಪ್ರೇಕ್ಷಕರು!

ಶ್ರೀನಗರ: ವೇದಿಕೆಯ ಮೇಲೆ ನರ್ತಿಸುತ್ತಲೇ ಹೃದಯಘಾತದಿಂದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಮ್ಮುವಿನಲ್ಲಿ ನಡೆದಿದ್ದು, ಈ ವಿಡಿಯೋ ಇದೀಗ ಭಾರಿ ವೈರಲ್​ ಆಗಿದೆ. ಜಮ್ಮು ಮತ್ತು ಕಾಶ್ಮೀರದ ಬಿಷ್ನಾಹ್ ಪ್ರದೇಶದಲ್ಲಿ ಯೋಗೇಶ್ ಗುಪ್ತಾ ಮೃತ ಯುವಕ. 20 ವರ್ಷದ ಯೋಗೇಶ್​ ವೇದಿಕೆಯ ಮೇಲೆ ಪಾರ್ವತಿಯ ವೇಷ ಧರಿಸಿ ಹುಡುಗಿಯಂತೆ ನರ್ತಿಸುತ್ತಿದ್ದ. ನೃತ್ಯ ಮಾಡುತ್ತಿರುವಾಗಲೇ ಹೃದಯಾಘಾತವಾಗಿದೆ. ಕೂಡಲೇ ಈತ ಕುಸಿದು ಬಿದ್ದಿದ್ದಾನೆ. ಈತ ಕುಸಿದು ಬಿದ್ದಾಗ ಮೊದಲು ಎದ್ದಿದ್ದಾನೆ. ಆದ್ದರಿಂದ ಈತನಿಗೆ ಹೃದಯಾಘಾತವಾಗಿದೆ ಎಂದು ಯಾರಿಗೂ ತಿಳಿಯಲೇ ಇಲ್ಲ. ಕುಸಿದು … Continue reading VIDEO: ವೇದಿಕೆ ಮೇಲೆ ನರ್ತಿಸುತ್ತಲೇ ಕುಸಿದು ಸಾವು: ಇದು ಕೂಡ ನೃತ್ಯದ ಭಾಗವೇ ಎಂದುಕೊಂಡ ಪ್ರೇಕ್ಷಕರು!