More

    VIDEO: ಭಯೋತ್ಪಾದನೆ ನಂಟು; ಮೂರನೇ ಮದರಸಾವೂ ನೆಲಸಮ- ಎಂಟು ಬುಲ್ಡೋಜರ್​ ಬಳಸಿ ಧ್ವಂಸ ಕಾರ್ಯಾಚರಣೆ

    ಗುವಾಹಟಿ (ಅಸ್ಸಾಂ): ಭಯೋತ್ಪಾದಕ ನಂಟು ಹೊಂದಿರುವ ಆರೋಪದ ಮೇಲೆ ಅಸ್ಸಾಂನ ಮದರಸಾವೊಂದನ್ನು ಬುಲ್ಡೋಜರ್‌ಗಳ ಮೂಲಕ ಧ್ವಂಸಗೊಳಿಸಲಾಗಿದೆ. ಎಂಟು ಬುಲ್ಡೋಜರ್‌ಗಳು ಧ್ವಂಸ ಕಾರ್ಯ ನಡೆಸಿದವು.

    ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬೊಂಗೈಗಾಂವ್ ಜಿಲ್ಲೆಯ ಜೋಗಿಘೋಪಾ ಪ್ರದೇಶದ ಕಬೈತರಿಯಲ್ಲಿರುವ ಮರ್ಕಝುಲ್ ಮಆರಿಫ್-ಉ-ಕರಿಯಾನ ಮದರಸಾವನ್ನು ಜಿಲ್ಲಾಡಳಿತ ನೆಲಸಮಗೊಳಿಸಿತು. ಈ ಶಿಕ್ಷಣ ಸಂಸ್ಥೆಗಳನ್ನು ಭಯೋತ್ಪಾದನಾ ಚಟುವಟಿಕೆಗಳ ಕೇಂದ್ರವಾಗಿ ಬಳಸುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ ಬಳಿಕ ಕೆಡವಲಾಗಿದೆ. ಹೀಗೆ ಕೆಡವಿರುವ 3ನೇ ಮದರಸಾ ಇದಾಗಿದೆ.

    ಭಯೋತ್ಪಾದಕ ಚಟುವಟಿಕೆಗಳನ್ನು ವಿಫಲಗೊಳಿಸುವ ಭಾಗವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ಶುಕ್ರವಾರ ಮದರಸಾದ ಶಿಕ್ಷಕ ಮುಫ್ತಿ ಹಫ್ಜುರ್ ರೆಹೆಮಾನ್‌ನನ್ನು ಪೊಲೀಸರು ಬಂಧಿಸಿದ್ದರು. ಆತ ಅಲ್‌ಖೈದಾ ಸಂಪರ್ಕ ಹೊಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿತ್ತು. 2018ರಲ್ಲಿ ಮದರಸಾಗೆ ಶಿಕ್ಷಕನಾಗಿ ಈತ ನೇಮಕಗೊಂಡಿದ್ದ ವಿಷಯ ತಿಳಿದುಬಂದಿತ್ತು. ಇದರ ಬೆನ್ನಲ್ಲೇ ಸರ್ಕಾರ ಇಂಥವುಗಳ ಮೇಲೆ ಕಣ್ಣು ಇಟ್ಟಿದೆ.

    ಅಷ್ಟೇ ಅಲ್ಲದೇ, ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಮದರಸಾವನ್ನು ನಿರ್ಮಿಸಲಾಗಿದೆ. ಕಟ್ಟಡಕ್ಕೆ ಅಗತ್ಯ ಅನುಮತಿಗಳನ್ನೂ ಪಡೆದಿಲ್ಲ. ಆದ್ದರಿಂದ, ವಿಪತ್ತು ನಿರ್ವಹಣಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಕೆಡವಲಾಗಿದೆ. ಭಯೋತ್ಪಾದಕ ನಂಟು ಸಂಬಂಧ ಕಳೆದ ಐದು ತಿಂಗಳಲ್ಲಿ ಅಸ್ಸಾಂ ಪೊಲೀಸರು ಸುಮಾರು 40 ಜನರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

    ಮದರಸಾ ನೆಲಸಮ ಮಾಡುವುದಕ್ಕೂ ಪೂರ್ವದಲ್ಲಿ ನೋಟಿಸ್ ನೀಡಲಾಗಿತ್ತು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸ್ವಪ್ನನೀಲ್ ದೇಕಾ ತಿಳಿಸಿದ್ದಾರೆ. ಮದರಸಾದಲ್ಲಿ 200 ವಿದ್ಯಾರ್ಥಿಗಳಿದ್ದರು. ಕಾರ್ಯಾಚರಣೆಗೆ ಮುನ್ನವೇ ಬಹುಪಾಲು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿತ್ತು. ಮತ್ತೆ ಕೆಲವರು ಮದರಸಾ ಆವರಣದಲ್ಲಿ ಉಳಿದುಕೊಂಡಿದ್ದರು. ನೆಲಸಮ ಕಾರ್ಯಕ್ಕೂ ಮೊದಲು ಅವರನ್ನು ಹತ್ತಿರದ ಸಂಸ್ಥೆಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದರು.

    ನಿನ್ನೆ ಗೋಲ್ಪಾರಾ ಜಿಲ್ಲೆಯ ಪೊಲೀಸರು ಮದರಸಾದಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಬಂಧಿತ ವ್ಯಕ್ತಿಯೊಂದಿಗೆ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದರು. ಜಿಲ್ಲಾಡಳಿತದ ನಿರ್ದೇಶನದಂತೆ ನಾವು ಮದರಸಾವನ್ನು ನೆಲಸಮಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು. (ಏಜೆನ್ಸೀಸ್​)

    ಇಲ್ಲಿದೆ ನೋಡಿ ವಿಡಿಯೋ:

    55ರ ವರ- 18ರ ವಧು: ‘ನನ್ನನ್ನು ಹೆಚ್ಚಿಗೆ ಭೇಟಿಯಾಗಬೇಡ’ ಎಂದು ಹಾಡುತ್ತಲೇ ಲವ್​ಗೆ ಬಿದ್ದ ಜೋಡಿಯ ಕಥೆ ಇದು…

    ಸುಪ್ರೀಂ ​ಮೆಟ್ಟಿಲೇರಿದ ಹುಬ್ಬಳ್ಳಿಯ ಈದ್ಗಾ ಮೈದಾನದ ಗಣೇಶೋತ್ಸವ: ಹೈಕೋರ್ಟ್​ತೀರ್ಪು ಪ್ರಶ್ನಿಸಿ ಮೇಲ್ಮನವಿ

    ಸೆಲ್ಫಿ ಹುಚ್ಚಿಗೆ ಬಲಿಯಾಯ್ತು ಇಡೀ ಕುಟುಂಬ: ಇಬ್ಬರ ಉಳಿಸಲು ಹೋಗಿ ಜಲಪಾತದಲ್ಲಿ ಕೊಚ್ಚಿಹೋದ ಆರು ಮಂದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts