More

    18 ನಿಮಿಷಕ್ಕೊಮ್ಮೆ ಆಗಸದಲ್ಲಿ ಬೆಳಕು- ಏಲಿಯನ್‌ ಕಳುಹಿಸುತ್ತಿರುವ ಸಿಗ್ನಲ್‌ಗಳೆ? ಸಂಶೋಧನೆಯತ್ತ ವಿಜ್ಞಾನಿಗಳ ತಂಡ

    ಆಸ್ಟ್ರೇಲಿಯಾ: ಬಾಹ್ಯಾಕಾಶದ ಆಳಕ್ಕೆ ಹೋದಷ್ಟೂ ಅದು ಅಚ್ಚರಿಗಳ ಆಗರವೇ. ಅಲ್ಲಿರುವ ಹಲವಾರು ಘಟನೆಗಳನ್ನು ವಿಜ್ಞಾನಿಗಳು ಭೇದಿಸುತ್ತಿದ್ದರೂ ಯಾರ ಊಹೆಗೂ ನಿಲುಕದ ಹಲವಾರು ಅಚ್ಚರಿಗಳು ಅಲ್ಲಿ ನಡೆಯುತ್ತಲೇ ಇರುತ್ತವೆ.

    ಅಂಥದ್ದೇ ಒಂದು ಅಚ್ಚರಿ ಇದೀಗ ಆಗಸದಲ್ಲಿ ಕಾಣಿಸುತ್ತಿದ್ದು, ಇದು ಆಸ್ಟ್ರೇಲಿಯಾದ ವಿಜ್ಞಾನಿಗಳ ತಲೆಕೆಡಿಸಿದೆ. ಜತೆಗೆ ಬೇರೆ ಬೇರೆ ದೇಶಗಳ ವಿಜ್ಞಾನಿಗಳೂ ಈ ಅಚ್ಚರಿಯನ್ನು ಭೇದಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ.

    ಅದೇನೆಂದರೆ, ಆಗಸದಲ್ಲಿ ಪ್ರತಿ 18 ನಿಮಿಷ 18 ಸೆಕೆಂಡ್‌ಗೆ ಒಂದು ಬೆಳಕು ಬಂದು ಮಾಯವಾಗುತ್ತಿದೆ. ನಕ್ಷತ್ರವನ್ನು ಹೋಲುವ ಈ ಆಕೃತಿಯು ತುಂಬಾ ಪ್ರಕಾಶಮಾನವಾಗಿದ್ದು, ಇದು ವಿಜ್ಞಾನಿಗಳ ನಿದ್ದೆಗೆಡಿಸಿದೆ.

    ವಿಶ್ವವಿದ್ಯಾಲಯದಲ್ಲಿ ಪದವಿ ಓದುತ್ತಿರುವ ಒಬ್ಬ ವಿದ್ಯಾರ್ಥಿ ಇದನ್ನು ಮೊದಲು ಗಮನಿಸಿದ್ದಾನೆ. ನಂತರ ಈ ಬಗ್ಗೆ ತಮ್ಮ ಪ್ರಾಧ್ಯಾಪಕರಿಗೆ ವಿಷಯ ತಿಳಿಸಿದಾಗಲಷ್ಟೇ ಆಕಾಶವನ್ನು ವೀಕ್ಷಣೆ ಮಾಡಲು ತೊಡಗಿದ್ದಾರೆ ಅವರು. ನಂತರ ಈ ವಿಷಯ ವೈರಲ್‌ ಆಗಿ ವಿಜ್ಞಾನಿಗಳು ಈ ಬೆಳಕಿನ ಹಿಂದೆ ಬಿದ್ದಿದ್ದಾರೆ.

    ನಂತರ ಈ ಬೆಳಕು ಬರುವ ದಿಕ್ಕನ್ನು ಖಗೋಳ ಭೌತಶಾಸ್ತ್ರಜ್ಞೆ ನತಾಶಾ ಹರ್ಲಿ-ವಾಕರ್ ಅವರ ನೇತೃತ್ವದಲ್ಲಿ ಮರ್ಚಿಸನ್ ವೈಡ್‌ಫೀಲ್ಡ್ ಅರೇ ಎಂದು ಕರೆಯಲಾಗುವ ದೂರದರ್ಶಕವನ್ನು ಬಳಸಿ ನೋಡಿದ್ದಾರೆ. ಆಗ ಸಮೀಪದಿಂದ ಆನ್‌ ಆಫ್‌ ಆಗುತ್ತಿರುವ ಈ ಬೆಳಕನ್ನು ಗಮನಿಸಿದ್ದಾರೆ. ವಿಜ್ಞಾನಿಗಳು ಇದನ್ನು ಕಂಡು ಅತೀವ ಅಚ್ಚರಿಗೊಂಡಿದ್ದಾರೆ. ಇಂಥದ್ದೊಂದು ವಿಸ್ಮಯ ಕಂಡಿರುವುದು ಇದೇ ಮೊದಲು ಎಂದಿದ್ದಾರೆ.

    ವಿಜ್ಞಾನಿಗಳು ಹೇಳುವ ಪ್ರಕಾರ, ಈ ಬೆಳಕು ಬರುವ ಪ್ರದೇಶವು ಭೂಮಿಯಿಂದ ಸುಮಾರು 4,000 ಜ್ಯೋತಿರ್ವರ್ಷ ದೂರದಲ್ಲಿದೆ. ಹಾಗೂ ನಂಬಲಾಗದಷ್ಟು ಪ್ರಕಾಶಮಾನವಾಗಿದೆ ಮತ್ತು ಅತ್ಯಂತ ಬಲವಾದ ಕಾಂತೀಯ ಕ್ಷೇತ್ರವನ್ನು ಹೊಂದಿದೆ. ಆದರೆ ಇನ್ನೂ ಹಲವು ರಹಸ್ಯಗಳು ಮತ್ತಷ್ಟು ಅಧ್ಯಯನದ ನಂತರವೇ ತಿಳಿಯಬೇಕಿದೆ.

    ಇದು ಬಿಳಿ ಕುಬ್ಜ ಅಥವಾ ಹಳೆಯ ನಕ್ಷತ್ರದ ಅವಶೇಷವೂ ಆಗಿರಬಹುದು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದರೆ, ಕೆಲವರು ಏಲಿಯನ್‌ಗಳು ಕಳುಹಿಸುತ್ತಿರುವ ಸಂದೇಶಗಳು ಎಂದೇ ಹೇಳುತ್ತಿದ್ದಾರೆ. ಇದಾಗಲೇ ಕೆಲವು ವಿಜ್ಞಾನಿಗಳು ಈ ಅನ್ಯಗ್ರಹ ಜೀವಿ ಏಲಿಯನ್‌ಗಳ ಇರುವಿಕೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸುತ್ತಿರುವ ಬೆನ್ನಲ್ಲೇ ಅವರೇ ಕಳುಹಿಸಿರಬಹುದಾದ ಎನ್ನುವಂಥ ಬೆಳಕುಮಯ ವಸ್ತುಗಳು ಕೂಡ ಇದಾಗಿರಲು ಸಾಧ್ಯ ಎಂದೇ ವರ್ಣಿಸಲಾಗುತ್ತಿದೆ. ಒಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳ ಬಳಿಕ ವಾಸ್ತವಾಂಶ ಬೆಳಕಿಗೆ ಬರಬೇಕಿದೆ.

    VIDEO: ತಲೆ ಕೆಳಗಾಗಿ ನಿಂತ್ರೆ ಮಾತ್ರ ಈ ಮನೆ ಸರಿಯಾಗಿ ಕಾಣಿಸತ್ತೆ! ಏಕೆಂದ್ರೆ ಇದನ್ನು ಕಟ್ಟಿರೋದೇ ಉಲ್ಟಾ…

    ಪುರುಷನ ಮಾತಿಗೆ ಮರುಳಾಗಿ ಆತ ಗಂಡನಾಗುತ್ತಾನೆಂದು ನಂಬಿ ದೇಹ ಒಪ್ಪಿಸೋ ನಿಮ್ಮಂಥವ್ರಿಗೆ ಏನ್‌ ಹೇಳೋದಮ್ಮಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts